More

    ವಾಹನ ಕದಿಯುತ್ತಿದ್ದ ಮೂವರ ಬಂಧನ

    ಬೆಳಗಾವಿ: ಮಹಾರಾಷ್ಟ್ರದ ಸೊಲ್ಲಾಪುರ, ಬೆಂಗಳೂರು ಮತ್ತು ಹುಬ್ಬಳ್ಳಿ ನಗರಗಳಲ್ಲಿ ಕಳ್ಳತನ ಮಾಡಿದ ವಾಹನಗಳ ಚೆಸ್ಸಿ ನಂಬರ್ ಬದಲಿಸಿ ಮಾರಾಟ ಮಾಡುತ್ತಿದ್ದ ಮೂವರನ್ನು ಜಿಲ್ಲಾ ಸಿಇಎನ್ ಅಪರಾಧ (ಡಿಸಿಬಿ) ವಿಭಾಗದ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

    ರಾಯಬಾಗ ತಾಲೂಕಿನ ಖಣದಾಳದ ವಾಸುದೇವ ನಾಯಿಕ (34), ಮೂಡಲಗಿ ತಾಲೂಕಿನ ಖಾನಟ್ಟಿಯ ಮಹಾಂತೇಶ ಯಲ್ಲಪ್ಪ ಕರಗಣ್ಣ (24), ರಾಜಾಪುರ ಗ್ರಾಮದ ವಿವೇಕಾನಂದ ಚೌಡಯ್ಯ ತಳವಾರ (20) ಬಂಧಿತರು. ಬಂಧಿತರಿಂದ 24.6 ಲಕ್ಷ ರೂ. ಮೌಲ್ಯದ ಲಾರಿ ಸೇರಿ 1 ಮಹಿಂದ್ರಾ ಬೊಲೆರೋ ಪಿಕ್ ಅಪ್ ವಾಹನ, 1 ಮಹಿಂದ್ರಾ ಬೊಲೆರೋ ಜೀಪ್, 1 ಮಹಿಂದ್ರಾ ಸ್ಕಾರ್ಪಿಯೋ ವಾಹನ ವಶಪಡಿಸಿಕೊಂಡಿದ್ದಾರೆ.

    ಘಟಪ್ರಭಾ ಮತ್ತು ರಾಜಾಪುರ ವ್ಯಾಪ್ತಿಯಲ್ಲಿ ಮುಗ್ಧರಿಗೆ ವಂಚನೆ ಮಾಡಿ ವಾಹನ ಮಾರಾಟ ಮಾಡುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಸಿಇಎನ್ ಅಪರಾಧ ವಿಭಾಗದ ಪೊಲೀಸರು ದಾಳಿ ನಡೆಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮತ್ತು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಮಾರ್ಗದರ್ಶನದಲ್ಲಿ ಪಿಐ ವೀರೇಶ ದೊಡಮನಿ ಹಾಗೂ ಸಿಬ್ಬಂದಿ, ಕಳ್ಳರನ್ನು ಬಂಧಿಸಿದ್ದಾರೆ.

    ಕಾರ್ಯಾಚರಣೆಯಲ್ಲಿ ಸಿಇಎನ್ ಠಾಣೆಯ ಅಶೋಕ ಭಜಂತ್ರಿ, ಜಿ.ಸಿ.ಹೆಗಡೆ, ಕೆ.ಆರ್.ಇಮಾಮನವರ, ಬಿ.ಎಸ್.ಚಿನ್ನಿಕುಪ್ಪಿ, ವೈ.ವಿ.ಸಪ್ತಸಾಗರ, ಎಲ್.ಎನ್. ಕುಂಬಾರೆ, ಎಸ್.ಆರ್. ಮಾಳಗಿ, ಎಸ್.ಸಿ.ಅಂಬರಶೆಟ್ಟಿ, ಟಿ.ಎಚ್. ಕೆಳಗೇರಿ, ಎಂ.ಬಿ. ಕಾಂಬಳೆ, ಎನ್.ಎಲ್.
    ಗುಡೆಣ್ಣವರ, ವಿ.ಐ.ನಾಯಿಕ, ಎಸ್.ಎ.ಬೆವನೂರ, ಜಿ.ಎಸ್.ಲಮಾಣಿ, ಡಿ.ಕೆ. ದೇಯಣ್ಣವರ, ಸವಿತಾ ಪಾಟೀಲ, ಸುನೀಲ ಕಾಂಬಳೆ ಪಾಲ್ಗೊಂಡಿದ್ದರು. ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts