More

    ವಿಜಯವಾಣಿ ಪ್ರಾಪರ್ಟಿ ಎಕ್ಸ್‌ಪೋಕ್ಕೆ ಅದ್ದೂರಿ ಚಾಲನೆ

    ಹುಬ್ಬಳ್ಳಿ: ಕನ್ನಡದ ನಂ. 1 ದಿನಪತ್ರಿಕೆ ವಿಜಯವಾಣಿ ಹುಬ್ಬಳ್ಳಿಯ ರಾಯ್ಕರ್ ಗ್ರೌಂಡ್‌ನಲ್ಲಿ ಆಯೋಜಿಸಿರುವ ‘ರಿಯಲ್ ಎಸ್ಟೇಟ್ ಆ್ಯಂಡ್ ಇಂಟೀರಿಯರ್ಸ್‌ ಎಕ್ಸ್‌ಪೋ’ಕ್ಕೆ ಶುಕ್ರವಾರ ಬೆಳಗ್ಗೆ ಅದ್ದೂರಿ ಚಾಲನೆ ನೀಡಲಾಯಿತು.

    ವಿಜಯಾನಂದ ಟ್ರಾವೆಲ್ಸ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾದ ಶಿವಾ ಸಂಕೇಶ್ವರ ಅವರು ಎಕ್ಸ್‌ಪೋ ಉದ್ಘಾಟಿಸಿದರು. ಸ್ಕೈಟೌನ್ ಗ್ರುಪ್ ಎಂಡಿ ಚೇತನ ಪವಾರ, ಮ್ಯಾನೇಜಿಂಗ್ ಪಾರ್ಟನರ್ ಸಾಯಿಪ್ರಸಾದ ಕಲಬುರ್ಗಿ, ಶ್ರೀದುರ್ಗಾ ಡೆವಲಪರ್ಸ್ ಆ್ಯಂಡ್ ಪ್ರಮೋಟರ್ಸ್ ಎಂಡಿ ವೀರೇಶ ಉಂಡಿ, ಸ್ವರ್ಣ ಗ್ರುಪ್ ಎಂಡಿ ಡಾ. ವಿ.ಎಸ್.ವಿ. ಪ್ರಸಾದ, ಶ್ರೀದತ್ತ ಇನ್‌ರ್ಾಟೆಕ್ ಪ್ರೈವೇಟ್ ಲಿಮಿಟೆಡ್ ಎಂಡಿ ಪ್ರಕಾಶ ಜೋಶಿ ಹಾಗೂ ಇತರರು ಇದ್ದರು.

    ಶಿವಾ ಸಂಕೇಶ್ವರ ಹಾಗೂ ಇತರ ಗಣ್ಯರು ಎಕ್ಸ್‌ಪೋದಲ್ಲಿ ಇರುವ 40ಕ್ಕೂ ಹೆಚ್ಚು ಮಳಿಗೆಗಳಿಗೆ ಭೇಟಿ ನೀಡಿ, ಮಾಹಿತಿ ಪಡೆದರು. ಹುಬ್ಬಳ್ಳಿ-ಧಾರವಾಡ ಹಾಗೂ ಸುತ್ತಲಿನ ನಿವೇಶನ, ಅಪಾರ್ಟಮೆಂಟ್‌ಗಳು, ಬ್ಯಾಂಕ್‌ಗಳು ನೀಡುವ ಸಾಲ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
    ಬೆಳಗ್ಗೆ 11 ಗಂಟೆಗೆ ಎಕ್ಸ್‌ಪೋ ಉದ್ಘಾಟನೆ ನಿಗದಿಪಡಿಸಿದ್ದರೂ, ಬೆಳಗ್ಗೆ ಸುಮಾರು 9.30ರಿಂದಲೇ ಜನರು ಎಕ್ಸ್‌ಪೋಕ್ಕೆ ಭೇಟಿ ನೀಡಿ, ಮಾಹಿತಿ ಪಡೆದುಕೊಳ್ಳುತ್ತಿದ್ದರು. ಮೇ 5ರವರೆಗೆ ನಡೆಯಲಿರುವ ಈ ಎಕ್ಸ್‌ಪೋಕ್ಕೆ ಮೊದಲ ದಿನವೇ ಸಾರ್ವಜನಿಕರಿಂದ ನಿರೀಕ್ಷೆ ಮೀರಿ ಬೆಂಬಲ ವ್ಯಕ್ತವಾಯಿತು. ಶಾಸಕರಾದ ಮಹೇಶ ಟೆಂಗಿನಕಾಯಿ, ಪ್ರದೀಪ ಶೆಟ್ಟರ್, ಮೇಯರ್ ವೀಣಾ ಬರದ್ವಾಡ, ಹುಡಾ ಅಧ್ಯಕ್ಷ ಶಾಕೀರ್ ಸನದಿ, ಪಾಲಿಕೆ ಸದಸ್ಯ ವೀರಣ್ಣ ಸವಡಿ ಹಾಗೂ ಮತ್ತಿತರ ಗಣ್ಯರು ಎಕ್ಸ್‌ಪೋಕ್ಕೆ ಭೇಟಿ ನೀಡಿ, ಮೆಚ್ಚುಗೆ ವ್ಯಕ್ತಪಡಿಸಿದರು.

    ಹೆಚ್ಚಿದ ಬೇಡಿಕೆ
    ಪ್ರತಿ ವರ್ಷ ಪ್ರಾಪರ್ಟಿ ಎಕ್ಸ್‌ಪೋ ಆಯೋಜಿಸುತ್ತ ಬಂದಿದ್ದೇವೆ. ಬಿಲ್ಡರ್‌ಗಳು, ಡೆವಲಪರ್ಸ್‌, ಬ್ಯಾಂಕರ್‌ಗಳು ಹಾಗೂ ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರವು ಬೆಂಗಳೂರಿನಂತೆ ವೇಗವಾಗಿ ಬೆಳೆಯುತ್ತಿದೆ. ನಿವೇಶನ, ಅಪಾರ್ಟಮೆಂಟ್‌ಗಳಿಗೆ ಹೆಚ್ಚು ಬೇಡಿಕೆ ಕಂಡುಬರುತ್ತಿದೆ. ಅವಳಿ ನಗರದಲ್ಲಿ ಅತ್ಯಾಧುನಿಕ ಸೌಲಭ್ಯಗಳು ಹೆಚ್ಚುತ್ತಿರುವುದರಿಂದ ಇಲ್ಲಿ ಮನೆಗಳನ್ನು ಹೊಂದಬೇಕು ಎಂಬುವವರ ಸಂಖ್ಯೆ ಹೆಚ್ಚುತ್ತಿದೆ. ಇದನ್ನೆಲ್ಲ ಗಮನಿಸಿ, ಒಂದೇ ವೇದಿಕೆಯಲ್ಲಿ ಬಿಲ್ಡರ್‌ಗಳು, ಡೆವಲಪರ್‌ಗಳು ಹಾಗೂ ಬ್ಯಾಂಕರ್‌ಗಳ ಸೇವೆ ಒದಗಿಸುವಂತೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿಯು ಸಹ ‘ವಿಜಯವಾಣಿ’ಯಿಂದ ಈ ರೀತಿಯ ಜನೋಪಯೋಗಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು.

    > ಶಿವಾ ಸಂಕೇಶ್ವರ, ವ್ಯವಸ್ಥಾಪಕ ನಿರ್ದೇಶಕರು, ವಿಜಯಾನಂದ ಟ್ರಾವೆಲ್ಸ್ ಪ್ರೈವೇಟ್ ಲಿಮಿಟೆಡ್

    ಬುಕಿಂಗ್ ಆರಂಭಿಸಿದ ಜನ
    ‘ವಿಜಯವಾಣಿ’ ಆಯೋಜಿಸುವ ಪ್ರಾಪರ್ಟಿ ಎಕ್ಸ್‌ಪೋದಲ್ಲಿ ಪ್ರತಿ ಬಾರಿ ಭಾಗವಹಿಸುತ್ತ ಬಂದಿದ್ದೇವೆ. ಪ್ರತಿ ಸಲವೂ ಉತ್ತಮ ಪ್ರತಿಕ್ರಿಯೆ ಜನರಿಂದ ಸಿಕ್ಕಿದೆ. ಗ್ರಾಹಕರು ಮೊದಲ ದಿನದಿಂದಲೇ ಸೈಟ್, ಮನೆಗಳನ್ನು ಬುಕಿಂಗ್ ಮಾಡಲು ಆರಂಭಿಸುತ್ತಾರೆ. ಒಂದೇ ಸೂರಿನಡಿ ನಿವೇಶನ, ಅಪಾರ್ಟಮೆಂಟ್, ಬ್ಯಾಂಕ್ ಸಾಲದ ಸೌಲಭ್ಯ ಒದಗಿಸಿರುವುದರಿಂದ ಗ್ರಾಹಕರಿಗೆ ಹೆಚ್ಚು ಅನುಕೂಲವಾಗಿದೆ. ಬಿಲ್ಡರ್, ಡೆವಲಪರ್‌ಗಳಿಗೂ ಇದು ಅವರ ವಸತಿ ಯೋಜನೆಗಳನ್ನು ಪ್ರದರ್ಶನ ಮಾಡಿ ಉತ್ತಮ ವಹಿವಾಟು ಮಾಡಲು ಒಳ್ಳೆಯ ವೇದಿಕೆಯಾಗಿದೆ. ಹುಬ್ಬಳ್ಳಿ-ಧಾರವಾಡ ಅಷ್ಟೇ ಅಲ್ಲದೆ, ಸುತ್ತಲಿನ ಜಿಲ್ಲೆಗಳ ಜನರು ಪ್ರಾಪರ್ಟಿ ಎಕ್ಸ್‌ಪೋಗೆ ಬಂದು ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಅನೇಕ ಜನರು ನಿವೇಶನ ಮತ್ತು ಅಪಾರ್ಟ್‌ಮೆಂಟ್ ಬುಕಿಂಗ್ ಈಗಲೇ ಮಾಡುತ್ತಿದ್ದಾರೆ. ಬೆಂಗಳೂರು ನಂತರ ಅತ್ಯಂತ ವೇಗವಾಗಿ ಹುಬ್ಬಳ್ಳಿ ಬೆಳೆಯುತ್ತಿರುವುದರಿಂದ ಇಲ್ಲಿಯೂ ರಿಯಲ್ ಎಸ್ಟೇಟ್ ಉದ್ಯಮ ಬೂಮ್‌ನಲ್ಲಿದೆ. ರಾಜ್ಯದ ಬೇರೆ ಬೇರೆ ಕಡೆಯಿಂದ ಬಂದಿರುವ ಜನರು ಇಲ್ಲೊಂದು ಆಸ್ತಿ ಮಾಡಲು ಬಯಸುತ್ತಿದ್ದು, ಅವರ ಆಶಯಕ್ಕೆ ತಕ್ಕಂತೆ ಮನೆಗಳನ್ನು ನಿರ್ಮಿಸಿ ಕೊಡಲಾಗುತ್ತಿದೆ.

    >ಚೇತನ ಪವಾರ, ಎಂಡಿ, ಸ್ಕೈಟೌನ್ ಗ್ರುಪ್, ಹುಬ್ಬಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts