More

    ಆಕರ್ಷಣೆಯ ಕೇಂದ್ರವಾದ ಪ್ರಾಪರ್ಟಿ ಎಕ್ಸ್‌ಪೋ

    ಹುಬ್ಬಳ್ಳಿ: ಇಲ್ಲಿಯ ಹೊಸೂರಿನಲ್ಲಿರುವ ರಾಯ್ಕರ್ ಮೈದಾನದಲ್ಲಿ ಕನ್ನಡದ ನಂಬರ್ 1 ಪತ್ರಿಕೆ ವಿಜಯವಾಣಿ ಆಯೋಜಿಸಿರುವ ಪ್ರಾಪರ್ಟಿ ಎಕ್ಸ್‌ಪೋಕ್ಕೆ ಶುಕ್ರವಾರ ಅದ್ದೂರಿ ಚಾಲನೆ ಸಿಕ್ಕಿದೆ. ಮೊದಲ ದಿನವೇ ಸಾವಿರಾರು ಜನರು ಆಗಮಿಸಿ ಮಳಿಗೆಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

    ಸಂಪೂರ್ಣ ಹವಾನಿಯಂತ್ರಿತ ಟೆಂಟ್ ಅಡಿಯಲ್ಲಿ 40ಕ್ಕೂ ಹೆಚ್ಚು ಮಳಿಗೆಗಳನ್ನು ಆರಂಭಿಸಲಾಗಿದ್ದು, ಬಿಲ್ಡರ್ಸ್‌, ಡೆವಲಪರ್ಸ್‌, ಾರ್ಮ್‌ಲ್ಯಾಂಡ್ ನಿರ್ಮಾಪಕರು, ಬ್ಯಾಂಕ್, ಸ್ಟೀಲ್, ಸಿಮೆಂಟ್, ಗೃಹಾಲಂಕಾರ ಸೇರಿ ವಿವಿಧ ಮಳಿಗೆಗಳು ಜನಮನ ಸೆಳೆಯುತ್ತಿವೆ. ಸಾರ್ವಜನಿಕರ ಆಕರ್ಷಣೆಯ ಕೇಂದ್ರವಾಗಿ ಪರಿಣಮಿಸಿದೆ.

    ಬಿಲ್ಡರ್‌ಗಳು ತಾವು ಅಭಿವೃದ್ಧಿ ಪಡಿಸಿದ ವಿವಿಧ ವಸತಿ ಯೋಜನೆ, ಅಪಾರ್ಟಮೆಂಟ್, ವಿಲ್ಲಾಗಳನ್ನು ಒಳಗೊಂಡ ಪ್ರಾಜೆಕ್ಟ್‌ಗಳನ್ನು ಎಕ್ಸ್‌ಪೋದಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದಾರೆ. ರಿಯಲ್ ಎಸ್ಟೇಟ್‌ಗೆ ಸಂಬಂಧಿಸಿದ ಎಲ್ಲ ಚಟುವಟಿಕೆಗಳನ್ನು ಒಂದೇ ಸೂರಿನಡಿ ತರಲಾಗಿದ್ದು, ಮನೆ, ಸೈಟ್‌ಗಳನ್ನು ಕೊಳ್ಳುವವರು ಹತ್ತಾರು ಯೋಜನೆಗಳನ್ನು ವೀಕ್ಷಣೆ ಮಾಡಿ ತಮಗಿಷ್ಟವಾದ ಕಡೆ ಬುಕ್ ಮಾಡಿಕೊಳ್ಳುತ್ತಿದ್ದಾರೆ.

    ಉರಿಬಿಸಿಲಿನಲ್ಲಿ ಹವಾನಿಯಂತ್ರಿತ ಟೆಂಟ್ ಒಳಗಡೆ ಹೋಗುತ್ತಲೇ ತಂಪು ವಾತಾವರಣ ನೋಡುಗರಿಗೆ ಹಿತಾನುಭವ ನೀಡುತ್ತಿದೆ. ಹಾಗಾಗಿ, ವೀಕ್ಷಣೆಗೆ ಬಂದ ಗ್ರಾಹಕರು ಕೆಲಹೊತ್ತು ಮಳಿಗೆಗಳಲ್ಲಿ ಕಳೆದು ಯೋಜನೆಗಳ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ.

    ಬೆಂಗಳೂರು ನಂತರ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಹುಬ್ಬಳ್ಳಿ -ಧಾರವಾಡ ಅವಳಿನಗರದಲ್ಲಿ ಸದ್ಯ ನಡೆದಿರುವ ವಸತಿ ಯೋಜನೆಗಳು, ಮುಂಬರುವ ಯೋಜನೆಗಳ ಬಗ್ಗೆ ತಿಳಿದುಕೊಳ್ಳಲು ಜನರು ಹೆಚ್ಚು ಉತ್ಸುಕರಾಗಿದ್ದಾರೆ. ಭವಿಷ್ಯದಲ್ಲಿ ಹುಬ್ಬಳ್ಳಿಯ ಯಾವ ಭಾಗದಲ್ಲಿ ಹೂಡಿಕೆ ಮಾಡಿದರೆ ಉತ್ತಮ ಎಂಬುದನ್ನು ಸಹ ಗ್ರಾಹಕರು ತಿಳಿದುಕೊಳ್ಳುತ್ತಿದ್ದಾರೆ.

    ಪ್ರತಿಯೊಂದು ಮಳಿಗೆಯಲ್ಲಿ ಕುಳಿತುಕೊಳ್ಳಲು ಆಸನ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಮಳಿಗೆಗೆ ಭೇಟಿ ನೀಡಿದವರು, ಕರಪತ್ರಗಳನ್ನು ಪಡೆದು ಯೋಜನೆಗಳ ಮಾಹಿತಿ ಪಡೆಯುತ್ತಿದ್ದಾರೆ. ಬಿಲ್ಡರ್‌ಗಳ ಜತೆಗೆ ಮಾತುಕತೆ ನಡೆಸುತ್ತಿದ್ದಾರೆ. ಇನ್ನೂ ಎರಡು ದಿನ ನಡೆಯುವ ಪ್ರಾಪರ್ಟಿ ಎಕ್ಸ್‌ಪೋದಲ್ಲಿ ನೌಕರ ವರ್ಗದವರು, ಉದ್ಯಮಿಗಳು, ಸ್ವಂತ ಉದ್ಯೋಗ ಮಾಡುವವರು, ಮಧ್ಯಮ ವರ್ಗದವರು ಎಲ್ಲರೂ ಭೇಟಿ ನೀಡಿ ತಮ್ಮ ಬಜೆಟ್‌ಗೆ ಹೊಂದುವಂತಹ ಮನೆ, ಸೈಟ್ ಖರೀದಿಸುವ ಯೋಜನೆ ರೂಪಿಸುತ್ತಿದ್ದಾರೆ.

    ಪರ ಊರಿನಿಂದ ಹುಬ್ಬಳ್ಳಿಗೆ ಬಂದು ವಾಸ ಮಾಡುತ್ತಿರುವವರು ತಮಗೂ ಒಂದು ಸೈಟ್ ಅಥವಾ ಮನೆ ಇರಬೇಕೆಂದು ಬಯಸುತ್ತಿದ್ದಾರೆ. ಅಂಥವರು ಸಹ ಎಕ್ಸ್‌ಪೋಕ್ಕೆ ಭೇಟಿ ನೀಡುತ್ತಿದ್ದಾರೆ. ಧಾರವಾಡ ಜಿಲ್ಲೆ ಮಾತ್ರವಲ್ಲ, ಅಕ್ಕಪಕ್ಕದ ಜಿಲ್ಲೆಯ ಜನರು ಕೂಡ ಬರುತ್ತಿದ್ದಾರೆ. ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮನೆಯೊಂದು ಮಾಡಲು ಉತ್ಸಾಹ ತೋರುತ್ತಿದ್ದಾರೆ. ಬೆಂಗಳೂರಿನಲ್ಲಿ ವಾಸವಾಗಿರುವ ಅನೇಕ ಜನರು ಸಹ ಅಲ್ಲಿನ ಟ್ರಾಫಿಕ್, ಜನದಟ್ಟಣೆಗೆ ಬೇಸತ್ತು ದ್ವಿತೀಯ ಸ್ತರದ ನಗರಗಳಾದ ಹುಬ್ಬಳ್ಳಿ-ಧಾರವಾಡದತ್ತ ಮುಖ ಮಾಡುತ್ತಿದ್ದಾರೆ. ಹಾಗಾಗಿ, ಬೆಂಗಳೂರು, ಪುಣೆ ಮುಂತಾದ ಕಡೆಗಳಿಂದಲೂ ಜನರು ವೀಕ್ಷಣೆಗೆ ಬರುತ್ತಿದ್ದಾರೆ.

    ನಿವೇಶನ: ಪ್ರತಿಯೊಬ್ಬರೂ ತಮ್ಮದೇ ಆದ ಕನಸಿನ ಮನೆ ಹೊಂದಬೇಕೆಂದು ಒಂದು ಸೈಟ್ ಖರೀದಿಸಿ ಇಟ್ಟುಕೊಳ್ಳುತ್ತಾರೆ. ಅದರಂತೆ ಪ್ರಾಪರ್ಟಿ ಎಕ್ಸ್‌ಪೋದಲ್ಲಿ ಪ್ರದರ್ಶನಗೊಂಡಿರುವ ಹಲವು ಲೇಔಟ್‌ಗಳಲ್ಲಿ ಸೈಟ್ ಕೊಳ್ಳಲು ಅನೇಕ ಜನರು ಆಸಕ್ತಿ ತೋರಿದರು. ಸೈಟ್ ಖರೀದಿಸಿ ಇಟ್ಟುಕೊಂಡರೆ ಮುಂದೆ ತಮಗೆ ಅನುಕೂಲವಾದಾಗ ಇಷ್ಟದಂತೆ ಮನೆ ಕಟ್ಟಿಸಿಕೊಳ್ಳಬಹುದು ಎಂದು ಸೈಟ್‌ಗಳಿಗೆ ಆಸಕ್ತಿ ತೋರಿಸಿದರು.

    ರೆಡಿ ಮನೆ: ನೌಕರ ವರ್ಗದವರು, ಸೈಟ್‌ನಲ್ಲಿ ನಿಂತು ಮನೆ ಕಟ್ಟಿಸಲು ಸಾಧ್ಯವಾಗದವರು ನೇರವಾಗಿ ಬಿಲ್ಡರ್‌ಗಳ ಬಳಿ ಮನೆಗಳನ್ನು ಖರೀದಿಸಲು ಆಸಕ್ತಿ ತೋರುತ್ತಿದ್ದಾರೆ. ರೆಡಿ ಮನೆ ಎಂದರೂ ಎಲ್ಲ ಸೌಲಭ್ಯಗಳನ್ನು ನೀಡಿ ನಿರ್ಮಾಣ ಮಾಡಿರುವ ಮನೆಗಳನ್ನೇ ಬಿಲ್ಡರ್‌ಗಳು ನೀಡುತ್ತಿದ್ದಾರೆ.

    ಅಪಾರ್ಟಮೆಂಟ್: ಸುರಕ್ಷತೆ, ಸೌಲಭ್ಯಗಳ ದೃಷ್ಟಿಯಿಂದ ಅನೇಕ ಜನರು ಅಪಾರ್ಟಮೆಂಟ್‌ಗಳಲ್ಲಿ ಮನೆಗಳನ್ನು ನೋಡುತ್ತಿದ್ದಾರೆ. ನಗರ ಪ್ರದೇಶದ ವ್ಯಾಪ್ತಿಯಲ್ಲಿ ಹಾಗೂ ನಗರಕ್ಕೆ ಕೆಲವೇ ಕಿಮೀ ಅಂತರದಲ್ಲಿ ಇರುವ ಅಪಾರ್ಟಮೆಂಟ್‌ಗಳಿಗೆ ಹೆಚ್ಚಿನ ಬೇಡಿಕೆ ಕಂಡು ಬರುತ್ತಿದೆ. ಅಪಾರ್ಟಮೆಂಟ್‌ಗಳಲ್ಲಿ ಉತ್ತಮ ಗಾಳಿ, ಬೆಳಕು ಇರುವ ಮನೆಯ ಜತೆಗೆ ಕುಡಿಯುವ ನೀರು, ಲ್‌ಟಿ, ಕಮ್ಯುನಿಟಿ ಹಾಲ್, ಮಕ್ಕಳು ಆಡಲು ಜಾಗ, ನಿರ್ವಹಣೆ, ಭದ್ರತೆ ಇತ್ಯಾದಿಗಳನ್ನು ಒದಗಿಸಲಾಗಿದೆ. ಹಾಗಾಗಿ ನೆಮ್ಮದಿಯ ಬದುಕಿಗಾಗಿ ಹಲವರು ಅಪಾರ್ಟಮೆಂಟ್‌ಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

    ಾರ್ಮ್‌ಲ್ಯಾಂಡ್: ವೀಕೆಂಡ್, ರಜೆ ದಿನಗಳನ್ನು ಆಹ್ಲಾದಕರವಾಗಿ ಕಳೆಯಲು ಹಾಗೂ ನಗರದ ಜಂಜಾಟದ ಜೀವನದಿಂದ ಹೊರಬಂದು ಒಂದಿಷ್ಟು ಖುಷಿ ಅನುಭವಿಸಲು ಅನೇಕ ಜನರು ಾರ್ಮ್‌ಲ್ಯಾಂಡ್ ಹುಡುಕುತ್ತಿದ್ದಾರೆ. ಸ್ವತಃ ತಾವೇ ತಮ್ಮ ಜಮೀನಿನಲ್ಲಿ ತೋಟ ನಿರ್ಮಿಸಿ ತಮಗೆ ಬೇಕಾದ ಬೆಳೆ ಬೆಳೆದುಕೊಳ್ಳಲು, ಹಣ್ಣು, ತರಕಾರಿ ಬೆಳೆಯಲು ಾರ್ಮ್‌ಲ್ಯಾಂಡ್ ಇಷ್ಟ ಪಡುತ್ತಿದ್ದಾರೆ. ಹಾಗಾಗಿ ಾರ್ಮ್‌ಲ್ಯಾಂಡ್ ಡೆವಲಪ್ ಮಾಡಿದ ಡೆವಲಪರ್‌ಗಳ ಕಡೆಗೂ ಜನರು ಹೋಗುತ್ತಿದ್ದಾರೆ. ಾರ್ಮ್‌ಲ್ಯಾಂಡ್‌ನಲ್ಲಿ 5 ಗುಂಟೆ ಜಾಗ ನೀಡಲಾಗುತ್ತದೆ. ಜತೆಗೆ ಗೇಟೆಡ್ ಕಮ್ಯುನಿಟಿ ಇರುವುದರಿಂದ ಸುರಕ್ಷತೆ, ಭದ್ರತೆ ದೃಷ್ಟಿಯಿಂದ ಯಾವುದೇ ಸಮಸ್ಯೆ ಇರುವುದಿಲ್ಲ. ಇದಲ್ಲದೆ, ಕುಡಿಯುವ ನೀರು, ರಸ್ತೆ, ಗಟಾರು ಎಲ್ಲವನ್ನು ಒದಗಿಸಿ ಕೊಡಲಾಗುತ್ತದೆ. ಇಂತಹ ಉಪಯುಕ್ತ ಸವಲತ್ತುಗಳನ್ನು ನೋಡಿದ ಜನರು ಾರ್ಮ್‌ಲ್ಯಾಂಡ್ ಖರೀದಿ ಮಾಡುತ್ತಿದ್ದಾರೆ.

    ಹಣಕಾಸಿನ ನೆರವು: ಎಕ್ಸ್‌ಪೋದಲ್ಲಿ ಅನೇಕ ಬ್ಯಾಂಕ್‌ಗಳು ತಮ್ಮ ಮಳಿಗೆ ಆರಂಭ ಮಾಡಿದ್ದು, ಮನೆ, ಸೈಟ್ ಕೊಳ್ಳುವವರಿಗೆ ಸಾಲ ಸೌಲಭ್ಯ ನೀಡುತ್ತಿವೆ. ಇದರ ಜತೆಗೆ ಬಿಲ್ಡರ್ ಹಾಗೂ ಡೆವಲಪರ್‌ಗಳು ತಮ್ಮದೇ ಕಂತಿನ ಸೌಲಭ್ಯಗಳನ್ನು ನೀಡುತ್ತಿರುವುದರಿಂದ ಗ್ರಾಹಕರಿಗೆ ಸುಲಭವಾಗಿ ಮನೆ, ಸೈಟ್ ಹೊಂದುವ ಭಾಗ್ಯ ಸಿಕ್ಕಂತಾಗಿದೆ.
    ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಸ್ಮಾರ್ಟ್ ಸಿಟಿ ಕಂಪನಿ ಲಿಮಿಟೆಡ್‌ನ ಮಳಿಗೆಗಳನ್ನು ಇಲ್ಲಿ ತೆರೆಯಲಾಗಿದೆ. ಸರ್ಕಾರದ ಯಾವುದೇ ಮಾಹಿತಿ ಬೇಕಿದ್ದರೂ ಇಲ್ಲಿ ಸಿಗುತ್ತಿದೆ.

    ಪ್ರಾಯೋಜಕರ ಮೆಚ್ಚುಗೆ: ಸ್ಕೈಟೌನ್ ಗ್ರುಪ್ ಪ್ರಾಯೋಜಕತ್ವದಲ್ಲಿ ಆರಂಭವಾಗಿರುವ ವಿಜಯವಾಣಿ ಪ್ರಾಪರ್ಟಿ ಎಕ್ಸ್‌ಪೋಕ್ಕೆ ಶ್ರೀಯಾ ಪ್ರಾಪರ್ಟಿಸ್, ಶ್ರೀ ದುರ್ಗಾ ಡೆವಲಪರ್ಸ್‌ ಆೃಂಡ್ ಪ್ರಮೋಟರ್ಸ್‌ ಅಸೋಸಿಯೇಟ್ ಸ್ಪಾನ್ಸರ್ ಆಗಿದ್ದಾರೆ. ಶಾಂಭವಿ, ರಾಟ್ಸನ್ ಗ್ರುಪ್, ಉಜ್ವಲ ಡೆವಲಪರ್ಸ್‌ ಆೃಂಡ್ ಬಿಲ್ಡರ್ಸ್‌ ಹಾಗೂ ಶ್ರೀದತ್ತ ಇನ್‌ರ್ಾಟೆಕ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯವರು ಕೋ-ಸ್ಪಾನ್ಸರ್ ಆಗಿ ಸಹಯೋಗ ನೀಡಿದ್ದಾರೆ. ಇದಲ್ಲದೆ, ಅನೇಕ ಬಿಲ್ಡರ್ ಹಾಗೂ ಡೆವಲಪರ್ಸ್‌ಗಳು ಸಹಕಾರ ನೀಡಿದ್ದಾರೆ. ಮೊದಲ ದಿನವೇ ಅನೇಕ ಜನರು ಭೇಟಿ ನೀಡಿ ವಿಚಾರಣೆ ಮಾಡುತ್ತಿದ್ದಾರೆ. ಕೆಲವರು ಸ್ಥಳದಲ್ಲೇ ಬುಕ್ಕಿಂಗ್ ಮಾಡುತ್ತಿದ್ದಾರೆ. ಎಕ್ಸ್‌ಪೋಕ್ಕೆ ವ್ಯಕ್ತವಾಗುತ್ತಿರುವ ಸ್ಪಂದನೆಯಿಂದ ಪ್ರಾಯೋಜಕರು ಸಂತೋಷವನ್ನು ಹಂಚಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts