More

    ಮತ್ತೆ ವೀರಪ್ಪನ್ ಆದ ಕಿಶೋರ್​ … ವೆಬ್​ಸೀರೀಸ್​ಗೆ ಚಾಲನೆ

    ವೀರಪ್ಪನ್​ ಹುಟ್ಟು ಮತ್ತು ಸಾವು ಕುರಿತಾದ ‘ಅಟ್ಟಹಾಸ’ ನಿರ್ದೇಶಿಸಿದ್ದ ಎ.ಎಂ.ಆರ್. ರಮೇಶ್, ‘ವೀರಪ್ಪನ್’ ಎಂಬ ವೆಬ್ ಸೀರೀಸ್ ನಿರ್ದೇಶಿಸುವುದಕ್ಕೆ ಸಿದ್ಧತೆ ನಡೆಸುತ್ತಿರುವುದು ಗೊತ್ತೇ ಇದೆ. ಕಳೆದ ತಿಂಗಳೇ ಅವರು ಈ ವೆಬ್​ಸರಣಿಯ ಕರ್ಟನ್ ರೇಸರ್ ಬಿಡುಗಡೆ ಮಾಡಿದ್ದರು.

    ಇದೀಗ ಈ ವೆಬ್​ಸೀರೀಸ್​ ಚಿತ್ರೀಕರಣ ಪ್ರಾರಂಭಸಿದ್ದಾರೆ. ಇತ್ತೀಚೆಗೆ ಇದರ ಮುಹೂರ್ತವಾಗಿದ್ದು, ಕರ್ನಾಟಕ ಸ್ಟೇಟ್​ ರಿಸರ್ವ್​​ ಪೊಲೀಸ್​ನ ಎಡಿಜಿಪಿ ಅಲೋಕ್ ಕುಮಾರ್​ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್​ ಮಾಡಿದ್ದಾರೆ. ಇನ್ನು ವೀರಪ್ಪನ್​ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟ ಕಿಶೋರ್​, ಮೊದಲ ದೃಶ್ಯದಲ್ಲಿ ಭಾಗವಹಿಸಿದ್ದಾರೆ.

    ಇದನ್ನೂ ಓದಿ: ‘ಆದಿಪುರುಷ್​’ ಚಿತ್ರಕ್ಕೆ ‘ಗೇಮ್​ ಆಫ್​ ಥ್ರೋನ್ಸ್​’ ತಂಡದ ಗ್ರಾಫಿಕ್ಸ್​?

    ಈ ವೆಬ್​ ಸೀರೀಸ್​ನಲ್ಲಿ ಕಿಶೋರ್​, ವೀರಪ್ಪನ್​ ಪಾತ್ರವನ್ನು ಮುಂದುವರೆಸಲಿದ್ದಾರೆ. ಇನ್ನು ಅರ್ಜುನ್​ ಸರ್ಜಾ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ವೆಬ್​ಸೀರೀಸ್​ ಕನ್ನಡವಲ್ಲದೆ ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂನಲ್ಲೂ ಪ್ರಸಾರವಾಗುತ್ತಿದೆ.

    ‘ವೀರಪ್ಪನ್’ ಚಿತ್ರ ಮಾಡುವಾಗ ಒತ್ತಡದಿಂದಾಗಿ ಹಲವು ವಿಷಯಗಳನ್ನು ಹೇಳುವುದಕ್ಕೆ ನಿರ್ದೇಶಕ ಎ.ಎಂ.ಆರ್​. ರಮೇಶ್​ ಅವರಿಗೆ ಸಾಧ್ಯವಾಗಲಿಲ್ಲವಂತೆ. ಅದನ್ನು ಈ ವೆಬ್​ ಸೀರೀಸ್​ನಲ್ಲಿ ಹೇಳುವ ಪ್ರಯತ್ನ ಮಾಡುತ್ತಿದದ್ದಾರಂತೆ. ಇನ್ನು, ‘ಅಟ್ಟಹಾಸ’ ಚಿತ್ರವನ್ನು ಹಾಗೆಯೇ ಇಟ್ಟುಕೊಂಡು, ಅದಕ್ಕೆ ಪೂರಕವಾದ ಅಂಶಗಳನ್ನು ಸೇರಿಸುತ್ತಾ ಹೋಗುತ್ತಾರಂತೆ.

    ಇದನ್ನೂ ಓದಿ: ಹ್ಯಾಪಿ ಬರ್ತ್​ಡೇ ಡಾಲಿ ಧನಂಜಯ; ಚಿತ್ರತಂಡಗಳಿಂದ ಪೋಸ್ಟರ್ ಗಿಫ್ಟ್​

    ಈ ಕುರಿತು ಮಾತನಾಡಿರುವ ಅವರು, ‘ಈಗಾಗಲೇ ನನ್ನ ಹತ್ತಿರ 10 ಗಂಟೆಗಾಗುವಷ್ಟು ಕಂಟೆಂಟ್​ ಇದೆ. ಈ ಪೈಕಿ ಒಂದೂವರೆ ಗಂಟೆ ಈಗಾಗಲೇ ಸಿದ್ಧವಿದೆ. ಮಿಕ್ಕ ಎಂಟೂವರೆ ಗಂಟೆಗಳ ಚಿತ್ರೀಕರಣ ಸದ್ಯದಲ್ಲೇ ಶುರು ಮಾಡುತ್ತೇವೆ. ಈ 10 ಗಂಟೆಗಳ ವಿಷಯವನ್ನು 45 ನಿಮಿಷಗಳ 12 ಅಥವಾ 14 ಎಪಿಸೋಡುಗಳನ್ನು ಮಾಡುತ್ತೇವೆ’ ಎನ್ನುತ್ತಾರೆ ರಮೇಶ್​.

    ಕಾಡುಗಳ್ಳ ಜೀವನವನ್ನಾಧರಿಸಿ ಕನ್ನಡದಲ್ಲಿ ಇದುವರೆಗೂ ಮೂರು ಸಿನಿಮಾಗಳು ಬಂದಿವೆ. 90ರ ದಶಕದಲ್ಲೇ ದೇವರಾಜ್, ‘ವೀರಪ್ಪನ್’ ಆಗಿದ್ದರು. ಆ ನಂತರ ವೀರಪ್ಪನ್ ಅಟ್ಟಹಾಸ ಮತ್ತು ಎನ್‌ಕೌಂಟರ್ ಕುರಿತಾಗಿ, ‘ಅಟ್ಟಹಾಸ’ ಮತ್ತು ‘ಕಿಲ್ಲಿಂಗ್ ವೀರಪ್ಪನ್’ ಚಿತ್ರಗಳು ಬಂದಿದ್ದು, ಇದೀಗ ವೆಬ್​ಸೀರೀಸ್​ ಬರುತ್ತಿರುವುದು ವಿಶೇಷ.

    ಸುಶಾಂತ್​ ಕೊಂದಿದ್ದು ಯಾರು ಗೊತ್ತಾ? ಚೇತನ್​ ಭಗತ್​ ಹೇಳ್ತಾರೆ ಕೇಳಿ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts