More

    ಸಂಕಷ್ಟಗಳ ನಿವಾರಣೆಗಾಗಿ ಶತ ಚಂಡಿಕಾ ಯಾಗ

    ಕುಶಾಲನಗರ: ದೇಶ ಮತ್ತು ದೇಶವಾಸಿಗಳಿಗೆ ಎದುರಾಗುವ ಸಂಕಷ್ಟಗಳ ನಿವಾರಣೆಗೆ ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ಕನ್ನಿಕಾಪರಮೇಶ್ವರಿ ದೇವಸ್ಥಾನ ಆಶ್ರಯದಲ್ಲಿ ಬೈಪಾಸ್ ರಸ್ತೆಯ ಖಾಸಗಿ ಒಡೆತನದ ನಿವೇಶನದಲ್ಲಿ ಶತ ಚಂಡಿಕಾ ಯಾಗ ಮಾಡಲಾಗುತ್ತಿದೆ ಎಂದು ಕನ್ನಿಕಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ವೇದಬ್ರಹ್ಮ ಗಿರೀಶ್ ಭಟ್ ತಿಳಿಸಿದರು.

    5 ದಿನ ವಿವಿಧ ಹೋಮಗಳು ನೆರವೇರಲಿದೆ. ಬುಧವಾರ ಗಣಪತಿ ಹೋಮ, ಗುರುವಾರ ಧನ್ವಂತರಿ ಹೋಮ, ಶುಕ್ರವಾರ ಲಕ್ಷ್ಮೀ ನಾರಾಯಣ ಹೃದಯ ಹೋಮ, ಮೃತ್ಯುಂಜಯ ಹೋಮ ಮತ್ತು 26ರಂದು ಶತ ಚಂಡಿಕಾ ಯಾಗ ನಡೆಯಲಿದೆ. ಪ್ರತಿ ದಿನ ಸಂಜೆ ಪ್ರಾತಃ ಕಾಲದಲ್ಲಿ ಕನ್ನಿಕಾ ಪೂಜೆ, ದಂಪತಿ ಪೂಜೆ, ಸುಹಾಸಿನಿ ಪೂಜೆ ನೆರವೇರಲಿದೆ. ಚಂಡಿಕಾ ಯಾಗದಲ್ಲಿ 16 ರೀತಿಯ ಪೂಜೆ ನಡೆಯಲಿದೆ ಎಂದು ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಬಿ.ಎಲ್. ಉದಯಕುಮಾರ್ ತಿಳಿಸಿದರು.

    ಧಾರ್ಮಿಕ ಕಾರ್ಯ ಪ್ರಜ್ಞಾನ ಆಚಾರ್ಯ ಅರುಳುಸುಳಿಯ ವೇದಬ್ರಹ್ಮ ಸೀತಾರಾಮ ಉಡುಪ ಅವರ ನೇತೃತ್ವದಲ್ಲಿ ನಡೆಯಲಿದೆ. 108 ಪಾರಾಯಣ, ಪ್ರತಿದಿನ ಸಂಜೆ ಜಪ, ತರ್ಪಣಾಧಿ, ಲಲಿತಾ ಸಹಸ್ರನಾಮ, ಅಷ್ಟವಧಾನ ಸೇವೆ, ಮಹಾ ಪೂಜೆ, ಮಹಾ ಮಂಗಳಾರತಿಯೂ ನಡೆಯಲಿದೆ. ಶತ ಚಂಡಿಕಾ ಯಾಗದ ದಿನ 10 ಪುರೋಹಿತರು 1 ಸಾವಿರ ಸಂಖ್ಯೆಯಲ್ಲಿ ಪೂರ್ವಾಜ್ಜ, ಅಪರಾಜ್ಜ ಅದ ನಂತರದಲ್ಲಿ 130 ಕೆಜಿ ಪರಮಾನ್ನದಿಂದ ಹೋಮ ನಡೆಯಲಿದೆ.

    ಚಂಡಿಕಾ ಯಾಗ ಮಾಡುವುದರಿಂದ ಕಲಿಯುಗದಲ್ಲಿ ದುರ್ಗೆ ಮತ್ತು ಗಣಪತಿಯನ್ನು ಆರಾಧಿಸಿದಂತೆ. ದೇವಿಯನ್ನು ಆರಾಧನೆ ಮಾಡುವುದರಿಂದ ನಾವು ಬೇಡುವುದನ್ನು ಪರಿಪೂರ್ಣವಾಗಿ ಅನುಗ್ರಹಿಸುತ್ತಾಳೆ. ಅದರಲ್ಲೂ ಚಂಡಿಕಾ ಯಾಗದಿಂದ ರೋಗಗಳು ದೂರವಾಗುತ್ತದೆ. ಜತೆಗೆ ದೇಶಕ್ಕೆ ಬರುವ ಕಂಟಕಗಳು ದೂರಾಗುತ್ತದೆ. ಕಾಲಕಾಲಕ್ಕೆ ಮಳೆ ಬೆಳೆ ಸರಿಯಾದ ರೀತಿಯಲ್ಲಿ ಆಗುವಂತೆ ದೇವರು ಅನುಗ್ರಹಿಸುವ ನಂಬಿಕೆ ಇದರ ಹಿಂದಿದೆ ಎಂದು ಚಂಡಿಕಾ ಯಾಗದ ಮಹತ್ವ ಕುರಿತು ಯೋಗೀಶ್ ಭಟ್ ವಿಶ್ಲೇಷಿಸಿದರು.

    ದಂಪತಿ ಪೂಜೆಯಲ್ಲಿ ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಬಿ.ಎಲ್.ಉದಯಕುಮಾರ್ ದಂಪತಿ ಭಾಗವಹಿಸಿದ್ದರು. ಮಹಾಸಭಾದ ಕೊಡಗು ಜಿಲ್ಲಾ ಪ್ರತಿನಿಧಿ ಬಿ.ಆರ್.ನಾಗೇಂದ್ರ ಪ್ರಸಾದ್, ಕಾರ್ಯದರ್ಶಿ ಬಿ.ಎಲ್.ಅಶೋಕ್ ಕುಮಾರ್, ನಿರ್ದೇಶಕರಾದ ಎಸ್.ಎನ್. ನಾಗೇಂದ್ರ, ಎಂ.ಪಿ.ಸತ್ಯನಾರಾಯಣ, ಎಸ್.ಎಂ.ಸತೀಶ್, ಗಣಪತಿ ದೇವಸ್ಥಾನದ ಪ್ರಧಾನ ಅರ್ಚಕ ಆರ್.ಕೆ.ನಾಗೇಂದ್ರ ಬಾಬು, ರಾಘವೇಂದ್ರ ಭಟ್, ಕೃಷ್ಣಮೂರ್ತಿ ಭಟ್, ಸುಬ್ರಹ್ಮಣ್ಯ ಭಟ್, ಉಮೇಶ್ ಭಟ್ ಇತರರು ಭಾಗಿಯಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts