More

    ಕಾಳಗಿಯಲ್ಲಿ ವೀರಭದ್ರೇಶ್ವರ ಜಯಂತಿ ವೈಭವ

    ಕಾಳಗಿ: ಪಟ್ಟಣದಲ್ಲಿ ಜಂಗಮ ಸಮಾಜದಿಂದ ಶ್ರೀ ವೀರಭದ್ರೇಶ್ವರ ಜಯಂತಿ ಸಂಭ್ರಮದಿAದ ಮಂಗಳವಾರ ಆಚರಿಸಲಾಯಿತು.

    ಬೆಳಗ್ಗೆ 10ಕ್ಕೆ ಗುರುನಂಜಯ್ಯ ಸ್ವಾಮಿ ಹಿರೇಮಠ ವೈದಿಕತ್ವದಲ್ಲಿ ವೀರಭದ್ರೇಶ್ವರ ಮೂರ್ತಿಗೆ ವಿಶೇಷ ಪೂಜೆ, ರುದ್ರಾಭಿಷೇಕ ಜರುಗಿತು. ಬಳಿಕ ಸ್ಥಳೀಯ ಹಿರೇಮಠದಿಂದ ನೀಲಕಂಠ ಕಾಳೇಶ್ವರ ದೇವಸ್ಥಾನದವರೆಗೆ ಪಲ್ಲಕ್ಕಿ ಮೆರವಣಿಗೆ ನಡೆಯಿತು. ವೀರಭದ್ರೇಶ್ವರನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ನೈವೇದ್ಯ ಅರ್ಪಿಸಿದರು. ಶಿವಲೇಶ ಸಾವಳಗಿ, ಗುರುಲಿಂಗಯ್ಯ ಮಠಪತಿ ನೇತೃತ್ವದಲ್ಲಿ ಪುರವಂತರ ಸೇವೆ ನಡೆಯಿತು.

    ಡೊಣ್ಣೂರಿನ ಶ್ರೀ ವೀರಭದ್ರಪ್ಪ ಅಜ್ಜ, ಪ್ರಮುಖರಾದ ವಿದ್ಯಾಸಾಗರ ಹಣಕುಣಿ, ಮಂಜುನಾಥಸ್ವಾಮಿ ಸಾವಳಗಿ, ಈರಯ್ಯಸ್ವಾಮಿ, ವೀರಭದ್ರಯ್ಯ ಮಠಪತಿ, ನಾಗಯ್ಯಸ್ವಾಮಿ ಮಠಪತಿ, ಶಿವಕಿರಣ ಪ್ಯಾಟಿಮಠ, ಶಿವರುದ್ರಯ್ಯ ಸಾಲಿ, ವೀರೇಶ ಕಣ್ಣಿ, ಶರಣಯ್ಯ ಕೆರೂರ, ಜಗ್ಗುಸ್ವಾಮಿ ಪ್ಯಾಟಿಮಠ, ಗುರಮ್ಮ ಹಣಕುಣಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts