More

    ವೀರಭದ್ರನಿಗೆ ‘ವಿದ್ಯಾರ್ಥಿ ಮಿತ್ರ’ ಸಾಥ್

    ಬೈಲಹೊಂಗಲ (ಬೆಳಗಾವಿ): ಸಾಧನೆಗೆ ಬಡತನ ಎಂದೂ ಅಡ್ಡಿಯಾಗದು. ಸತತ ಪರಿಶ್ರಮವಿದ್ದರೆ, ಬಡ ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆ ತೋರಬಹುದು. ಇದಕ್ಕೆ ತಾಲೂಕಿನ ಉಡಿಕೇರಿ ಗ್ರಾಮದ ರಾಮಲಿಂಗೇಶ್ವರ ಪ್ರೌಢಶಾಲೆ ವಿದ್ಯಾರ್ಥಿ ವೀರಭದ್ರ ಬಸವರಾಜ ಕಲಬಾವಿ ತಾಜಾ ಉದಾಹರಣೆ.

    ಗೂಡ್ಸ್ ವಾಹನ ಚಾಲಕ ಬಸವರಾಜ ಅವರ ಪುತ್ರ ವೀರಭದ್ರ, 625ಕ್ಕೆ 622 ಅಂಕಗಳೊಂದಿಗೆ ಕನ್ನಡ ಮಾಧ್ಯಮದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸಿದ್ದಾನೆ. ‘ವಿಜಯವಾಣಿಯ ವಿದ್ಯಾರ್ಥಿ ಮಿತ್ರ’ನ ಸಹಕಾರದಿಂದಲೂ ವಿಜ್ಞಾನ, ಗಣಿತ, ಹಿಂದಿ, ಸಮಾಜ ವಿಜ್ಞಾನ ವಿಷಯಗಳಲ್ಲಿ ತಲಾ 100 ಅಂಕ, ಕನ್ನಡ ವಿಷಯದಲ್ಲಿ 124 ಮತ್ತು ಇಂಗ್ಲಿಷ್‌ನಲ್ಲಿ 98 ಅಂಕ ಗಳಿಸಿ ಸಾಧನೆ ಮಾಡಿದ್ದಾರೆ.

    ಬಡ ಕುಟುಂಬ: ಬಡ ಕುಟುಂಬದಲ್ಲಿ ಜನಿಸಿದ ವೀರಭದ್ರನ ತಾಯಿ ಗೌರಮ್ಮ ಮನೆಗೆಲಸ ಮಾಡುತ್ತಿದ್ದರೆ, ತಂದೆ ಗೂಡ್ಸ್ ವಾಹನ ಚಲಾಯಿಸುತ್ತಾರೆ. ರೈತರ ಕೃಷಿ ಉತ್ಪನ್ನಗಳನ್ನು ನಿತ್ಯವೂ ತಮ್ಮ ವಾಹನದಲ್ಲಿ ಸಾಗಿಸಿ, ಅದರಲ್ಲಿ ಬರುವ ಆದಾಯದಲ್ಲೇ ಬದುಕಿನ ಬಂಡಿ ಸಾಗಿಸುತ್ತಾರೆ.

    ಹೆತ್ತವರು, ಗುರುವೃಂದಕ್ಕೆ ಸಾಧನೆ ಅರ್ಪಣೆ

    ನಾನು ನಿತ್ಯ ನಾಲ್ಕೈದು ಗಂಟೆ ಅಭ್ಯಸಿಸುತ್ತಿದ್ದೆ. ಶಿಕ್ಷಕರ ಪಾಠವನ್ನು ಸ್ಪಷ್ಟವಾಗಿ ಆಲಿಸುತ್ತಿದ್ದೆ. ಪ್ರತಿದಿನ ಶಾಲೆಗೆ ಬರುತ್ತಿದ್ದ ‘ವಿಜಯವಾಣಿ ವಿದ್ಯಾರ್ಥಿ ಮಿತ್ರ ಸಂಚಿಕೆ’ ತಪ್ಪದೇ ಓದುತ್ತಿದ್ದೆ. ಹೀಗಾಗಿ ಅದರಲ್ಲಿ ಪ್ರಕಟವಾಗುತ್ತಿದ್ದ ವಿಷಯಗಳ ಅಧ್ಯಯನದಿಂದ ಹೆಚ್ಚಿನ ಅಂಕ ಗಳಿಸಲು ಸಾಧ್ಯವಾಗಿದೆ. ಈ ಸಾಧನೆಯನ್ನು ಹೆತ್ತವರು ಮತ್ತು ಗುರುವೃಂದಕ್ಕೆ ಅರ್ಪಿಸುತ್ತೇನೆ. ಭವಿಷ್ಯದಲ್ಲಿ ಇಂಜಿನಿಯರ್ ಆಗುವ ಆಸೆಯಿದೆ ಎಂದು ವೀರಭದ್ರ ಸಂತಸ ಹಂಚಿಕೊಂಡಿದ್ದಾನೆ.

    ಬಿಡುವಿನ ಅವಧಿಯಲ್ಲಿ ಕೃಷಿ ಜಮೀನುಗಳಲ್ಲಿಯೂ ಆತ ಕೆಲಸ ಮಾಡುತ್ತಿದ್ದ. ಆತನಿಗೆ ಇಂಜಿನಿಯರ್ ಆಗುವ ಆಸೆ ಇದೆ. ನಾವಂತೂ ಹೆಚ್ಚು ಓದಿದವರಲ್ಲ. ಆದರೆ, ಎಂಥದ್ದೇ ಕಷ್ಟವಿದ್ದರೂ ಮಗನನ್ನು ಓದಿಸಿದ್ದೆವು. ಆತನ ಸಾಧನೆ ಖುಷಿ ತಂದಿದ್ದು, ಆತನ ಇಂಜಿನಿಯರಿಂಗ್ ಆಸೆ ಪೂರೈಸುತ್ತೇವೆ.
    | ಬಸವರಾಜ ಕಲಬಾವಿ, ವೀರಭದ್ರನ ತಂದೆ

    | ಬಸವರಾಜ ಕಲಾದಗಿ ಬೈಲಹೊಂಗಲ (ಬೆಳಗಾವಿ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts