More

    ಗುರು ಅನುಗ್ರಹದಿಂದ ಸಮಾಜದ ಅಭಿವೃದ್ಧಿ

    ಶೃಂಗೇರಿ: ನಮ್ಮೊಳಗಿನ ವೈಷ್ಣವತ್ವದ ವೃದ್ಧಿಗಾಗಿ ವರ್ಷಕ್ಕೆ ಒಮ್ಮೆಯಾದರೂ ಗುರುವರ್ಯರ ಹಸ್ತದಿಂದ ತಪ್ತ ಮುದ್ರಧಾರಣೆ ಮಾಡಿಸಿಕೊಳ್ಳಬೇಕು ಎಂದು ವೇದಮೂರ್ತಿ ಜಿತೇಂದ್ರ ಭಟ್ ತಿಳಿಸಿದರು.

    ಗೌಡಸರಸ್ವತ ಸಮಾಜದ ಹೆಬ್ಬಾಗಿಲು ಶ್ರೀಲಕ್ಷ್ಮೀವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ಕಾಶಿ ಮಠಾಧೀಶ ಶ್ರೀ ಸುಧೀಂದ್ರತೀರ್ಥ ಶ್ರೀಪಾದರ ಚತುರ್ಥ ಪುಣ್ಯತಿಥಿ ಆಚರಣೆ ಕಾರ್ಯಕ್ರಮದಲ್ಲಿ ಕಾಶಿಮಠ ಪರಂಪರೆ ಕುರಿತು ಉಪನ್ಯಾಸ ನೀಡಿದರು.

    ಮಾಧ್ವ ಸಂಪ್ರದಾಯದ ನಮಗೆ ವಿಜಯೇಂದ್ರ ಸ್ವಾಮಿಗಳು ಕಾಶಿಮಠ, ಗುರುಪೀಠ ಹಾಗೂ ಮಠಾಧಿಪತಿಯನ್ನು ದಯಪಾಲಿಸಿ ಕೊಟ್ಟಿದ್ದಾರೆ. ಯಾದವೇಂದ್ರ ಸ್ವಾಮಿಗಳಿಂದ ಆರಂಭಗೊಂಡ ಕಾಶಿಮಠದ ಗುರುಪರಂಪರೆ ಈಗಿನ ಶ್ರೀ ಸಂಯಮೀಂದ್ರ ಶ್ರೀಪಾದರವರೆಗಿನ ಯತಿವರ್ಯರೆಲ್ಲರೂ ಧರ್ಮ ಪ್ರಚಾರದೊಂದಿಗೆ ನಮ್ಮೊಳಗಿನ ನಿತ್ಯಾನುಷ್ಠಾನಕ್ಕೆ ಒತ್ತು ನೀಡಿ ಸಮಾಜದ ಅಭಿವೃದ್ಧಿ ಮಾಡಿದ್ದಾರೆ ಎಂದರು.

    ಸುಧೀಂದ್ರತೀರ್ಥ ಶ್ರೀಗಳು ಪ್ರಸಕ್ತ ತಲೆಮಾರಿನ ಶಿಷ್ಯರು ಕಂಡ ದೈವಾಂಶಮೂರ್ತಿ ಆಗಿದ್ದರು. ಶ್ರೀಗಳ ಪಾದಸ್ಪರ್ಶವಾದ ಸ್ಥಳಗಳು ಅಭಿವೃದ್ಧಿಯಾಗಿವೆ. ಶ್ರೀಗಳು ಆಧುನಿಕ ವಿದ್ಯೆಯೊಂದಿಗೆ ಪರಿಚಯಾತ್ಮಕ ಧಾರ್ವಿುಕ ಅನುಷ್ಠಾನಕ್ಕಾಗಿ ಬಾಲಕಾಶ್ರಮ, ಸಂಸ್ಕೃತ ಪಾಂಡಿತ್ಯ ಮತ್ತು ಪೂಜಾ ಸೇವಾ ವಿಧಿಗಳ ಕಲಿಕೆಗಾಗಿ ಪಾಠಶಾಲೆ, ವೈದ್ಯಕೀಯ ಕೇಂದ್ರ, ಕಾಶಿಮಠ ಶಾಖೆಗಳ ಪುನರುತ್ಥಾನ ಮಾಡಿದ್ದಾರೆ ಎಂದು ತಿಳಿಸಿದರು.

    ಶ್ರೀಗಳ ಭಾವಚಿತ್ರದೊಂದಿಗೆ ಪಟ್ಟಣದಲ್ಲಿ ಭಜನಾ ಸಂಕೀರ್ತನಾ ಯಾತ್ರೆ ನಡೆಸಲಾಯಿತು. ಮಹಾಮಂಗಳಾರತಿ ನಂತರ ಶ್ರೀಗಳಿಗೆ ಪುಷ್ಪನಮನ ಹಾಗೂ ಗುರುಕಾಣಿಕೆ ಸಮರ್ಪಿಸಲಾಯಿತು. ಕೇಶವ ಭಟ್ ಹಾಗೂ ಹೆಗ್ತೂರು ಉಮೇಶ ಭಟ್ಟ ಕಾರ್ಯಕ್ರಮ ನಡೆಸಿಕೊಟ್ಟರು. ದೇವಸ್ಥಾನ ಸಮಿತಿ ಸದಸ್ಯ ವೆಂಕಟೇಶ ಪಂಡಿತ್, ಸತೀಶ ಭಟ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts