More

    ವೇದ ದರ್ಶನ 96| ಪಿತೃಸ್ಮರಣೆಯ ಅರ್ಥಪೂರ್ಣತೆ

    ವೇದ ದರ್ಶನ 96| ಪಿತೃಸ್ಮರಣೆಯ ಅರ್ಥಪೂರ್ಣತೆ

    ಇನ್ನು ವಾರ್ಷಿಕ ಶ್ರಾದ್ಧ ಬೇಡವೆನ್ನುವವರಿಗೆ ನಮ್ಮ ಪ್ರಾರ್ಥನೆ: ಪ್ರತಿ ವರುಷವೂ ಆಗಸ್ಟ್ 15ರಂದು, ಜನವರಿ 26ರಂದು, ಕೋಟ್ಯಂತರ ರೂಪಾಯಿ ಖರ್ಚಿನಲ್ಲಿ ಎಲ್ಲೆಲ್ಲೂ ತ್ರಿವರ್ಣ ಧ್ವಜಾರೋಹವನ್ನಾದರೂ ಏಕೆ ಆಚರಿಸಬೇಕು? ಅದು ಒಂದು ಚೂರು ಬಟ್ಟೆಯಲ್ಲವೆ? ಅಂಗಡಿಯಲ್ಲಿನ ಎಲ್ಲ ಬಟ್ಟೆಗಳು ಹಾಗೇ ಇರುವಾಗ ಈ ಚೂರು ಬಟ್ಟೆಗಳಿಗೇಕೆ ಈ ಸಂಭ್ರಮದ ಖರ್ಚಿನ, ಪೂಜ್ಯತೆ? ಬ್ರಿಟಿಷರು ಹೋಗಿ ಎಷ್ಟೋ ದಿನವಾಯಿತು. ವರ್ಷೆ ವರ್ಷೆ ಈ ‘‘ಬಟ್ಟೆ’’ಯನ್ನು ಮೇಲೇರಿಸಿದರೆ ಏನು ಪ್ರಯೋಜನ? ಹಾಗೆಯೇ ರಾಜಕೀಯ ಪಕ್ಷಗಳವರೂ ತಂತಮ್ಮ ವಾರ್ಷಿಕ ಅಧಿವೇಶನಗಳೆಂಬ ವಿಧಿಯನ್ನು (ಜಿಠ್ಠಿಚ್ಝ) ಏತಕ್ಕದರೂ ನಡೆಸಬೇಕು? ಇದ್ದಲ್ಲೇ ಒಬ್ಬೊಬ್ಬರೇ ತೋರಿದಂತೆ ಮಾಡಲಾಗದೇ? ಇವುಗಳಿಗೆಲ್ಲ ‘‘ಅರ್ಥ’’ ಇರಬಹುದಾದರೆ, ಅನ್ನದಾನ ರೂಪದಲ್ಲಿರುವ ಶ್ರಾದ್ಧಕ್ಕೊಂದಕ್ಕೆ ಮಾತ್ರ ಅರ್ಥವಿಲ್ಲವೆ?

    ‘‘ಪುರೋಹಿತರನ್ನು ಕರೆಸಿ ಅವರೆದುರಿಗೆ ತಾಳಿ ಕಟ್ಟಿಸದಿದ್ದರೆ ಮದುವೆ ಕೆಲಸ ಆಗುವುದೇ ಇಲ್ಲವೆ? ಮಕ್ಕಳಾಗುವುದೇ ಇಲ್ಲವೆ?’’ ಎಂದೊಬ್ಬರ ಪ್ರಶ್ನೆ. ‘‘ಮದುವೆಯೇ ಬೇಡ. ಪ್ರಾಣಿಗಳಲ್ಲಿ ಮದುವೆಯುಂಟೇ? ಪುರೋಹಿತರುಂಟೇ?’’ ಎಂದೂ ಪ್ರಶ್ನೆ. ಪ್ರಾಣಿಗಳಲ್ಲಿ ಮದುವೆ ಇಲ್ಲ ನಿಜ. ಮನುಷ್ಯನು ಬೀದಿಯ ನಾಯಿಯಂತೆ ಆಗಬಾರದೆಂಬುದೇ ಈ ಧಾರ್ವಿುಕ ಸಂಸ್ಥೆಗಳ ಉದ್ದೇಶ. ಬೀದಿ ನಾಯಿಯೇ ಆಗಬೇಕೆಂದು ಬಗೆಯುವವನು ಈಗಾಗಲೇ ಹಾಗಾಗಿರುತ್ತಾನೆಯಾದುದರಿಂದ ಅವನಿಗೆ ಧರ್ಮಬೋಧೆ ಅವಶ್ಯವಿಲ್ಲ.

    1969ನೇ ಇಸವಿಯಲ್ಲಿ ನೆದರ್ಲೆಂಡ್ಸ್ ದೇಶದ ಪಾರ್ಲಿಮೆಂಟಿನ ಮುಂದೆ ಒಂದು ಮಸೂದೆ ಚರ್ಚೆಗಾಗಿ ಬಂದಿತು. ಇದನ್ನು ತಂದವರು ಆ ದೇಶದ ‘‘ಸೋಷಲಿಸ್ಟ್ ಪೀಪಲ್ಸ್ ಪಾರ್ಟಿ’’ಯವರು. ಇದರಲ್ಲಿ ಮಂಡಿತವಾಗಿದ್ದ ವಿಷಯ: ಒಂದೇ ಲಿಂಗಕ್ಕೆ ಸೇರಿದ ಸ್ತ್ರೀ-ಪುರುಷರು ಪರಸ್ಪರ ‘‘ವಿವಾಹ’’ವಾಗುವುದಕ್ಕೆ ಕಾನೂನಿನ ಅವಕಾಶವಿರಬೇಕು. ಅಣ್ಣ-ತಂಗಿ, ಅಕ್ಕ-ತಮ್ಮ ಸಹ ಈ ರೀತಿ ವಿವಾಹವಾಗಲು ಅವಕಾಶ ಬೇಕು. ಒಬ್ಬ ಮನುಷ್ಯನಿಗೆ ಎಷ್ಟೊಂದು ಸ್ತ್ರೀಯರೊಡನಾದರೂ ಲೈಂಗಿಕ ಸಂಬಂಧವಿರಲು ಕಾನೂನು ಸಮ್ಮತಿಸಬೇಕು ಎಂದು ಮುಂತಾಗಿ. ಇದು ಅಂಗೀಕೃತವಾಗಲಿಲ್ಲವೆನ್ನುವುದು ಇಲ್ಲಿ ಮುಖ್ಯವಲ್ಲ. ಇಂತಹದೊಂದು ವಿಚಾರ ಪ್ರಜಾಪ್ರತಿನಿಧಿಗಳೆಂದು ಆರಿಸಿ ಬಂದು ಜವಾಬ್ದಾರಿಯನ್ನು ಹೊತ್ತ, ‘‘ಮಾನವ’’ರೆಂದುಕೊಳ್ಳುವವರ ತಲೆಯಲ್ಲಿ ಬಂದಿತೆಂಬುದೇ ಮುಖ್ಯ. ಇಂದು ಅಂಗೀಕೃತವಾಗದಿದ್ದರೇನು? ನಾಳೆ ಆದೀತು. (ಈಗಾಗಲೇ ಹಲವೆಡೆ ಆಗಿದೆ.) ಪ್ರಚಾರ ಮಾಡಿದಂತೆ ಫಲವಲ್ಲವೆ? ಆ ದೇಶದಲ್ಲಿ ಈಗಾಗಲೇ ‘‘ಬೃಹತ್ಕುಟುಂಬ’’ಗಳೆಂಬ (ಞಛಿಜಚ ್ಛಞಜ್ಝಿಜಿಛಿಠ) ಹೊಸ ರೀತಿಯ ಜೀವನ ಬರುತ್ತಿದೆಯಂತೆ! ಬಹು ಸಂಖ್ಯೆಯಲ್ಲಿ ಸ್ತ್ರೀ-ಪುರುಷರು ಒಟ್ಟುಗೂಡಿ ಜೀವಿಸಿ, ಮದುವೆ, ಗಂಡ-ಹೆಂಡತಿ ಎಂಬ ‘‘ನಿರ್ಬಂಧ’’ವಿಲ್ಲದೆ, ಮಕ್ಕಳನ್ನು ಹಡೆದು ಈ ಕುಟುಂಬ ದೊಡ್ಡದಾಗುತ್ತ ಆ ಮಕ್ಕಳೂ, ತಂದೆ ತಾಯಿಯರೂ ಸಹ ಇದೇ ಸಂಬಂಧವನ್ನು ಮುಂದುವರೆಸಿಕೊಂಡು ಹೋಗುವುದೇ ಈ ‘‘ಬೃಹತ್ಕುಟುಂಬ’’ ಎಂಬ ಕಲ್ಪನೆ. (14.12.1969ರ ‘‘ಹಿಂದೂ’’ ಪತ್ರಿಕೆ. ಪುಟ 6 ನೋಡಿ.) ಇದು ಆ ದೇಶದಲ್ಲಿ ಹಿಂದೆಯೂ ನಡೆದು ಬಂದ ರೀತಿಗೆ ಅನುಗುಣವಾಗಿದೆ.

    ಕ್ರಿ.ಶ. 1650 ರಿಂದ 1880ರ ವರೆಗೆ ಸುಮಾರು 230 ವರ್ಷಗಳಲ್ಲಿ ಚರ್ಚುಗಳ ರಜಿಸ್ಟರ್​ಗಳನ್ನು ಪರೀಕ್ಷಿಸಿದರೆ, ಡೆನ್ಮಾರ್ಕ್ ದೇಶದಲ್ಲಿ ಈ ಅವಧಿಯಲ್ಲಿ ವಿವಾಹಿತರಾದ ಮಹಿಳೆಯರಲ್ಲಿ ನೂರಕ್ಕೆ ಐವತ್ತು ಜನರು ‘‘ಮದುವೆಯ ದಿನದಂದು ಗರ್ಭಿಣಿಯರಾಗಿಯೇ ಇರುತ್ತಿದ್ದರೆಂದು’’ ಒಂದು ಅಧ್ಯಯನ ವರದಿಯೂ ಇದೇ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಈಗ ಇದು ಶೇ. 30ಕ್ಕೆ ಇಳಿದಿರುವುದಕ್ಕೆ ನೈತಿಕಮಟ್ಟದ ಉನ್ನತಿ ಸಾಧನವಲ್ಲ; ಗರ್ಭನಿರೋಧಕ ಸಾಧನಗಳೇ ಈ ಅಂಕಿಯ ಇಳಿತಕ್ಕೆ ಕಾರಣ.

    (ಲೇಖಕರá- ಬಹುಶ್ರುತ ವಿದ್ವಾಂಸರು, ಪ್ರವಚನಕಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts