More

    ಕೆಕೆಆರ್​ ಸ್ಪಿನ್ನರ್​ ವರುಣ್ ಚಕ್ರವರ್ತಿಗೆ ಈ ಸಲವೂ ಟೀಮ್ ಇಂಡಿಯಾ ಪರ ಆಡುವ ಅದೃಷ್ಟವಿಲ್ಲ?

    ಬೆಂಗಳೂರು: ಕಳೆದ ವರ್ಷದ ಐಪಿಎಲ್ ಆವೃತ್ತಿಯಲ್ಲಿ 5 ವಿಕೆಟ್ ಗೊಂಚಲು ಪಡೆದ ಏಕೈಕ ಬೌಲರ್ ಮತ್ತು ಕೋಲ್ಕತ ನೈಟ್‌ರೈಡರ್ಸ್‌ ಪರ 13 ಪಂದ್ಯಗಳಲ್ಲಿ 17 ವಿಕೆಟ್ ಕಬಳಿಸಿ ಮಿಂಚಿದ್ದ ಸ್ಪಿನ್ನರ್ ವರುಣ್ ಚಕ್ರವರ್ತಿ. ಅದರ ಬೆನ್ನಲ್ಲೇ ವರುಣ್ ಚಕ್ರವರ್ತಿ ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ ಗಾಯದಿಂದಾಗಿ ಅವರಿಗೆ ಆಗ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಲು ಸಾಧ್ಯವಾಗಿರಲಿಲ್ಲ. ಇದರಿಂದಾಗಿ ಟೀಮ್ ಇಂಡಿಯಾ ಪರ ಆಡುವ ಅವಕಾಶದಿಂದ ವಂಚಿತರಾಗಿದ್ದರು. ಬಳಿಕ ಇತ್ತೀಚೆಗೆ, ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಭಾರತ ತಂಡಕ್ಕೆ ಆಯ್ಕೆಯಾಗುವ ಮೂಲಕ ಅವರಿಗೆ 2ನೇ ಅವಕಾಶ ಕೂಡಿಬಂದಿದೆ. ಆದರೆ ಇದೀಗ ಈ ಅವಕಾಶವೂ ಅವರ ಕೈಜಾರಿ ಹೋಗುವ ಭೀತಿ ಎದುರಾಗಿದೆ. ಇದಕ್ಕೆ ಮತ್ತೆ ಕಾರಣವಾಗಿರುವುದು ಫಿಟ್ನೆಸ್.

    ಈ ಬಾರಿ ವರುಣ್ ಚಕ್ರವರ್ತಿಗೆ ಯಾವುದೇ ಗಾಯದ ಸಮಸ್ಯೆ ಇಲ್ಲ. ಆದರೆ ಟೀಮ್ ಇಂಡಿಯಾ ಸೇರಲು ಬಿಸಿಸಿಐ ನಿಗದಿಪಡಿಸಿರುವ ಫಿಟ್ನೆಸ್ ಮಾನದಂಡವನ್ನು ಮುಟ್ಟುವುದೇ ಅವರಿಗೆ ಕಷ್ಟಕರವಾಗಿದೆ. ಟೀಮ್ ಇಂಡಿಯಾ ಆಟಗಾರರಿಗೆ ಈ ಮೊದಲೇ ಯೋ-ಯೋ ಫಿಟ್ನೆಸ್ ಟೆಸ್ಟ್‌ನಲ್ಲಿ ಉತ್ತೀರ್ಣರಾಗುವುದು ಕಡ್ಡಾಯವಾಗಿತ್ತು. ಇತ್ತೀಚೆಗೆ, 8.5 ನಿಮಿಷಗಳಲ್ಲಿ 2 ಕಿಲೋಮೀಟರ್ ಓಡುವ ಹೊಸ ಫಿಟ್ನೆಸ್ ಪರೀಕ್ಷೆಯನ್ನೂ ಕಡ್ಡಾಯಗೊಳಿಸಲಾಗಿದೆ. ಆದರೆ ಇವೆರಡು ಫಿಟ್ನೆಸ್ ಪರೀಕ್ಷೆಗಳಲ್ಲೂ ಉತ್ತೀರ್ಣರಾಗಲು 29 ವರ್ಷದ ವರುಣ್ ಚಕ್ರವರ್ತಿ ಪರದಾಡುತ್ತಿದ್ದಾರೆ.

    ಇದನ್ನೂ ಓದಿ: ಚೆನ್ನೈ ಸೂಪರ್‌ಕಿಂಗ್ಸ್ ಸೇರಿದ ಬಳಿಕ ಭರ್ಜರಿ ಫಾರ್ಮ್‌ನಲ್ಲಿದ್ದಾರೆ ಕನ್ನಡಿಗ ರಾಬಿನ್ ಉತ್ತಪ್ಪ!

    ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಪ್ರಕಟಿಸಿರುವ 19 ಆಟಗಾರರ ಭಾರತ ತಂಡದಲ್ಲಿ ಒಬ್ಬರಾಗಿ ವರುಣ್ ಚಕ್ರವರ್ತಿ ಈಗಾಗಲೆ ಸ್ಥಾನ ಪಡೆದಿದ್ದಾರೆ. ಆದರೆ ಭಾರತ ತಂಡಕ್ಕೆ ಆಯ್ಕೆಯಾಗಿರುವ ಬಗ್ಗೆ ತಮಗೆ ಇದುವರೆಗೂ ಯಾವುದೇ ಅಧಿಕೃತ ಸಂದೇಶ ಬಂದಿಲ್ಲ ಎಂದು ವರುಣ್ ಚಕ್ರವರ್ತಿ ಅವರೇ ತಿಳಿಸಿದ್ದಾರೆ. ಶೀಘ್ರದಲ್ಲೇ ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗದಿದ್ದರೆ ಅವರು ಭಾರತ ತಂಡದಿಂದ ಹೊರಬೀಳಲಿದ್ದಾರೆ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ಅವಕಾಶದಿಂದಲೂ ವಂಚಿತರಾಗಲಿದ್ದಾರೆ.

    ಕಳೆದ 3 ತಿಂಗಳಿನಿಂದ ವರುಣ್ ಚಕ್ರವರ್ತಿ ಬೆಂಗಳೂರಿನ ಎನ್‌ಸಿಎಯಲ್ಲೇ ಫಿಟ್ನೆಸ್ ಸಂಬಂಧಿತ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ. ಚೆಂಡನ್ನು ಸಮರ್ಥವಾಗಿ ಥ್ರೋ ಮಾಡಲು ಸಾಧ್ಯವಾಗದ ಕಾರಣದಿಂದಲೂ ಅವರು ಹಿನ್ನಡೆ ಎದುರಿಸುತ್ತಿದ್ದಾರೆ. ಕಳೆದ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ ತಮಿಳುನಾಡು ತಂಡದಲ್ಲೂ ಅವರಿಗೆ ಸ್ಥಾನ ಲಭಿಸಿರಲಿಲ್ಲ. ಬಳಿಕ ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಗೂ ಅವರು ತಮಿಳುನಾಡು ತಂಡದಲ್ಲಿ ಸ್ಥಾನ ಪಡೆದಿಲ್ಲ. ಐಪಿಎಲ್‌ನಲ್ಲಿ ಸ್ಪಿನ್ ಜಾದು ತೋರಿದ್ದ ಆಟಗಾರನ ಫಿಟ್ನೆಸ್ ಲೋಪದೋಷ ಈಗ ವೃತ್ತಿಜೀವನಕ್ಕೆ ದೊಡ್ಡ ಹಿನ್ನಡೆಯಾಗುವ ಭೀತಿ ಹುಟ್ಟಿಸಿದೆ.

    ನೋಬಾಲ್ ಎಸೆದು ಸೆಹ್ವಾಗ್​ಗೆ ಶತಕ ತಪ್ಪಿಸಿದ್ದ ಲಂಕಾ ಸ್ಪಿನ್ನರ್ ಈಗ ಬಸ್ ಡ್ರೈವರ್!

    ಭಾರತದ ಹೊಸ ಸ್ಪಿನ್ ಕಿಂಗ್ ಅಕ್ಷರ್ ಪಟೇಲ್​ ಹೆಸರಿನ ಅಕ್ಷರದಲ್ಲಿ ತಪ್ಪಿದೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts