More

    ಭಾರತದ ಹೊಸ ಸ್ಪಿನ್ ಕಿಂಗ್ ಅಕ್ಷರ್ ಪಟೇಲ್​ ಹೆಸರಿನ ಅಕ್ಷರದಲ್ಲಿ ತಪ್ಪಿದೆ!

    ಅಹಮದಾಬಾದ್: ಇತ್ತೀಚೆಗಿನ ವರ್ಷಗಳಲ್ಲಿ ಭಾರತಕ್ಕೆ ಯಾವುದೇ ತಂಡ ಪ್ರವಾಸಕ್ಕೆ ಬಂದಾಗ ಟೆಸ್ಟ್ ಸರಣಿಯನ್ನು ಅದನ್ನು ಕಾಡುವ ಸ್ಪಿನ್ ಜೋಡಿ ಆರ್. ಅಶ್ವಿನ್ ಮತ್ತು ರವೀಂದ್ರ ಜಡೇಜಾ. ಆದರೆ ಈ ಬಾರಿ ರವೀಂದ್ರ ಜಡೇಜಾ ಗಾಯದಿಂದಾಗಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದಾರೆ. ಆದರೂ ಅವರ ಕೊರತೆ ಕಾಡದಂತೆ ನೋಡಿಕೊಂಡಿರುವುದು ಭಾರತದ ಹೊಸ ಸ್ಪಿನ್ ಕಿಂಗ್ ಅಕ್ಷರ್ ಪಟೇಲ್. ಆರ್. ಅಶ್ವಿನ್‌ಗೆ ಸಮರ್ಥ ನೀಡುವುದಷ್ಟೇ ಅಲ್ಲದೆ ಅವರಿಗಿಂತ ಒಂದು ಕೈ ಹೆಚ್ಚಾಗಿಯೇ ಅಕ್ಷರ್ ಇಂಗ್ಲೆಂಡ್ ತಂಡವನ್ನು ಕಂಗೆಡಿಸಿದ್ದಾರೆ. ಗುಜರಾತ್‌ನ ಈ ಎಡಗೈ ಸ್ಪಿನ್ ಬೌಲಿಂಗ್ ಆಲ್ರೌಂಡರ್‌ನ ಹೆಸರಿನ ಅಕ್ಷರದಲ್ಲಿ ತಪ್ಪಿದೆ ಎಂಬುದು ನಿಮಗೆ ಗೊತ್ತೇ? ಆ ತಪ್ಪು ಆಗಿದ್ದಾದರೂ ಯಾರಿಂದ, ಹೇಗೆ ಎಂಬುದು ಗೊತ್ತೇ? ಹಾಗಾದರೆ, ಈ ಸ್ಟೋರಿ ಓದಿ…

    ಗುಜರಾತ್‌ನ ರಾಜಧಾನಿ ಗಾಂಧಿನಗರದಿಂದ 90 ಕಿಮೀ ದೂರದಲ್ಲಿರುವ ನಡಿಯಾಡ್‌ನಲ್ಲಿ ಜನಿಸಿದ ಅಕ್ಷರ್ ಪಟೇಲ್ ಅವರಿಗೆ ತಂದೆ-ತಾಯಿ ಇಟ್ಟ ಹೆಸರು ‘ಅಕ್ಷರ್’ (akshar). ಆದರೆ ಅವರು ಶಾಲೆಗೆ ಹೋಗುತ್ತಿದ್ದ ದಿನಗಳಲ್ಲಿ ಅವರ ಮುಖ್ಯೋಪಾಧ್ಯಾಯರ ಎಡವಟ್ಟಿನಿಂದಾಗಿ ಅವರ ಹೆಸರು ‘ಅಕ್ಸರ್’ (Axar) ಆಗಿ ಬದಲಾಗಿತ್ತು. ಶಾಲಾ ಪ್ರಮಾಣಪತ್ರದಲ್ಲೇ ಈ ಹೆಸರು ದಾಖಲಾದ ಕಾರಣದಿಂದಾಗಿ ಅವರಿಗೆ ಬಳಿಕ ಇದನ್ನು ಬದಲಾಯಿಸಲು ಸಾಧ್ಯವಾಗಲಿಲ್ಲ. ಬಳಿಕ ಇದೇ ಸ್ಪೆಲ್ಲಿಂಗ್​ ಮಿಸ್ಟೇಕ್​ ಅವರ ಹೆಸರಿನಲ್ಲಿ ಶಾಶ್ವತವಾಗಿ ಉಳಿದುಕೊಂಡಿತು. ಈ ಹೆಸರು ಅವರ ಎಲ್ಲ ದಾಖಲೆ ಪತ್ರಗಳಲ್ಲಿ ಶಾಶ್ವತವಾಗಿ ಉಳಿದುಕೊಂಡಿತು. ಇದರಿಂದಾಗಿ ಅವರ ಪಾಸ್‌ಪೋರ್ಟ್‌ನಲ್ಲೂ ‘ಅಕ್ಸರ್’ (Axar) ಎಂದೇ ಹೆಸರು ಇದೆ.

    ಇದನ್ನೂ ಓದಿ: 600 ವಿಕೆಟ್‌ಗಳ ಸರದಾರ ಅಶ್ವಿನ್ ಕ್ರಿಕೆಟಿಗನಾಗಿದ್ದು ಆಕಸ್ಮಿಕವಂತೆ!

    ಟೀಮ್ ಇಂಡಿಯಾದಲ್ಲೂ ಅವರ ಜೆರ್ಸಿಯಲ್ಲಿ ‘ಅಕ್ಸರ್’ (Axar) ಎಂದೇ ಬರೆದಿದೆ. ಆದರೆ ವೀಕ್ಷಕವಿವರಣೆಯಲ್ಲಿ ಮಾತ್ರ ಅವರನ್ನು ಅಕ್ಷರ್ ಎಂದೇ ಕರೆಯಲಾಗುತ್ತದೆ. ಅಕ್ಷರ್ ಪಟೇಲ್ ಅವರಿಗೆ ಈಗಲೂ ತಮ್ಮ ಮೂಲ ಹೆಸರಿನ ಮೇಲೆಯೇ ಪ್ರೀತಿ ಇದೆ. ಹೀಗಾಗಿ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ (ಟ್ವಿಟರ್​) ಅವರು ತಮ್ಮ ಹೆಸರನ್ನು ‘ಅಕ್ಷರ್ ಪಟೇಲ್’ (Akshar Patel) ಎಂದೇ ಬಳಸುತ್ತಾರೆ.

    27 ವರ್ಷದ ಅಕ್ಷರ್ ಪಟೇಲ್ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸತತ 3 ಇನಿಂಗ್ಸ್‌ಗಳಲ್ಲಿ 5 ವಿಕೆಟ್ ಗೊಂಚಲು ಪಡೆಯುವ ಮೂಲಕ ಮಿಂಚಿದ್ದಾರೆ. 2ನೇ ಟೆಸ್ಟ್‌ನಲ್ಲಿ 11 ವಿಕೆಟ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದ ಅಕ್ಷರ್ ಪಟೇಲ್, ಆಡಿದ ಮೊದಲ 2 ಟೆಸ್ಟ್‌ಗಳಲ್ಲೇ 18 ವಿಕೆಟ್ ಕಬಳಿಸಿ ಅಮೋಘ ಆರಂಭ ಕಂಡಿದ್ದಾರೆ. ಈ ಹಿಂದೆ 2015ರ ಏಕದಿನ ವಿಶ್ವಕಪ್ ತಂಡದಲ್ಲಿದ್ದರೂ ಆಡುವ ಅವಕಾಶ ಪಡೆಯದಿದ್ದ ಅಕ್ಷರ್, 38 ಏಕದಿನ ಪಂದ್ಯಗಳಲ್ಲಿ 30 ಮತ್ತು 11 ಟಿ20 ಪಂದ್ಯಗಳಲ್ಲಿ 9 ವಿಕೆಟ್ ಕಬಳಿಸಿದ್ದಾರೆ. ಆದರೂ ಸೀಮಿತ ಓವರ್ ತಂಡದಲ್ಲಿ ಅವರು ಕಾಯಂ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ವಿಲರಾಗಿದ್ದರು. ಇದೀಗ ಟೆಸ್ಟ್ ಕ್ರಿಕೆಟ್‌ನಲ್ಲಿ ಕಂಡಿರುವ ಅಮೋಘ ಆರಂಭದ ಮೂಲಕ ಅವರ ವೃತ್ತಿಜೀವನಕ್ಕೆ ಹೊಸ ತಿರುವು ಸಿಕ್ಕಂತಾಗಿದೆ.

    PHOTO | ಜ್ವಾಲಾ ಗುಟ್ಟಾ-ವಿಷ್ಣು ವಿಶಾಲ್ ಜೋಡಿಯ ಮಾಲ್ಡೀವ್ಸ್ ಬೀಚ್ ಚಿತ್ರಗಳು ವೈರಲ್

    VIDEO: 21ನೇ ವಯಸ್ಸಿಗೆ ಡಿಎಸ್‌ಪಿ ಹುದ್ದೆ ಸ್ವೀಕರಿಸಿದ ಸ್ಟಾರ್ ಅಥ್ಲೀಟ್ ಹಿಮಾ ದಾಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts