More

    VIDEO: 21ನೇ ವಯಸ್ಸಿಗೆ ಡಿಎಸ್‌ಪಿ ಹುದ್ದೆ ಸ್ವೀಕರಿಸಿದ ಸ್ಟಾರ್ ಅಥ್ಲೀಟ್ ಹಿಮಾ ದಾಸ್

    ಗುವಾಹಟಿ: ಭಾರತದ ಸ್ಟಾರ್ ಸ್ಪ್ರಿಂಟರ್ ಹಿಮಾ ದಾಸ್ ಡಿಎಸ್‌ಪಿಯಾಗಿ ಅಧಿಕಾರಿ ಸ್ವೀಕರಿಸಿದರು. ಅಸ್ಸಾಂ ಮುಖ್ಯಮಂತ್ರಿ ಸರಬಾನಂದ ಸೊನೊವಾಲಾ, ಅಸ್ಸಾಂ ಪೊಲೀಸ್ ಮಹಾನಿರ್ದೇಶಕರ ಸಮ್ಮುಖದಲ್ಲಿ ಹಿಮಾ ದಾಸ್ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡರು. ಇದೇ ವೇಳೆ ಸಿಎಂ ಸೊನೊವಾಲಾ, ನೇಮಕಾತಿ ಪತ್ರ ನೀಡಿದರು. ಬಳಿಕ ಮಾತನಾಡಿದ ಹಿಮಾದಾಸ್, ಚಿಕ್ಕವಯಸ್ಸಿನಲ್ಲಿ ಪೊಲೀಸ್ ಇಲಾಖೆ ಸೇರಬೇಕೆಂಬ ಕನಸು ನನಸಾಗಿದೆ ಎಂದು ಹೇಳಿದರು.

    ಇದನ್ನೂ ಓದಿ: ಎಲ್ಲ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಕರ್ನಾಟಕ ತಂಡದ ಮಾಜಿ ನಾಯಕ ಆರ್. ವಿನಯ್‌ಕುಮಾರ್

    ಶಾಲಾ ದಿನಗಳಿಂದಲೂ ಪೊಲೀಸ್ ಆಗಬೇಕು ಎಂಬ ಕನಸು ಕಡೆಗೂ ಈಡೇರಿದೆ. ನನ್ನ ತಾಯಿ ಬಳಿ ಯಾವಾಗಲೂ ಹೇಳುತ್ತಿದ್ದೆ, ಇದೀಗ ನನ್ನ ಕನಸು ನನಸಾಗಿದೆ. ನನ್ನ ಸಾಧನೆಯನ್ನು ಗುರುತಿಸಿದ ಸರ್ಕಾರಕ್ಕೆ ಅಭಾರಿಯಾಗಿದ್ದೇನೆ ಎಂದು 21 ವರ್ಷ ಹಿಮಾ ದಾಸ್ ಹೇಳಿದರು. ನೌಕರಿ ಸೇರಿದರೂ ಅಥ್ಲೀಟ್ ಬಿಡುವುದಿಲ್ಲ. ಉತ್ತಮ ನಿರ್ವಹಣೆ ತೋರುವುದೇ ನನ್ನ ಮುಂದಿರುವ ಗುರಿ ಎಂದರು. ಫೆಬ್ರವರಿ 11 ರಂದು ಸ್ವತಃ ಮುಖ್ಯಮಂತ್ರಿಗಳೇ ಹಿಮಾ ದಾಸ್‌ಗೆ ಡಿಎಸ್‌ಪಿ ಹುದ್ದೆ ನೀಡುವುದಾಗಿ ಘೋಷಿಸಿದ್ದರು.

    ಇದನ್ನೂ ಓದಿ: ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ತಂಡಕ್ಕೆ ಹ್ಯಾಟ್ರಿಕ್ ಜಯ

    ‘ಧಿಂಗ್ ಎಕ್ಸ್‌ಪ್ರೆಸ್’ ಖ್ಯಾತಿಯ ಹಿಮದಾಸ್, 2018ರ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ 400 ಮೀಟರ್ ಓಟದಲ್ಲಿ ಸ್ವರ್ಣ ಪದಕ ಜಯಿಸಿದ್ದರು. ಎನ್‌ಐಎಸ್ ಪಟಿಯಾಲದಲ್ಲಿ ಸದ್ಯ ತರಬೇತಿ ಶಿಬಿರದಲ್ಲಿದ್ದು, ಸದ್ಯ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಭರವಸೆಯಲ್ಲಿದ್ದಾರೆ. ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆದ 2018ರ ಏಷ್ಯಾಡ್‌ನಲ್ಲಿ ಮಹಿಳೆಯರ 400 ಮೀಟರ್ ಓಟದಲ್ಲಿ ಬೆಳ್ಳಿ, 400ಮೀಟರ್ ಮಹಿಳೆಯರ ಹಾಗೂ 400 ಮೀಟರ್ ಮಿಶ್ರ ರಿಲೇಯಲ್ಲಿ ಸ್ವರ್ಣ ಗೆದ್ದ ಭಾರತ ತಂಡದ ಸದಸ್ಯೆಯಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts