More

    ಇಂಗ್ಲೆಂಡ್ ವಿರುದ್ಧ ಟಿ20 ಸರಣಿಯಿಂದ ವರುಣ್ ಚಕ್ರವರ್ತಿ ಔಟ್, ನಟರಾಜನ್ ಡೌಟ್

    ಅಹಮದಾಬಾದ್: ಕಳೆದ ಐಪಿಎಲ್‌ನಲ್ಲಿ ಕೆಕೆಆರ್ ಪರ ಮಿಂಚಿ ಟೀಮ್ ಇಂಡಿಯಾಗೆ ಆಯ್ಕೆಯಾಗಿರುವ ಲೆಗ್ ಸ್ಪಿನ್ನರ್ ವರುಣ್ ಚಕ್ರವರ್ತಿ ಫಿಟ್ನೆಸ್ ಪರೀಕ್ಷೆಯಲ್ಲಿ ವಿಫಲರಾಗಿರುವ ಕಾರಣ ನಿರಾಸೆ ಅನುಭವಿಸಿದ್ದಾರೆ. ಶುಕ್ರವಾರದಿಂದ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಿಂದ ಚಕ್ರವರ್ತಿ ಹೊರಬಿದ್ದಿದ್ದಾರೆ. ಮತ್ತೊಂದೆಡೆ, ವೇಗಿ ಟಿ. ನಟರಾಜನ್ ಭುಜ ನೋವಿನ ಸಮಸ್ಯೆ ಎದುರಿಸುತ್ತಿದ್ದು, ಬೆಂಗಳೂರಿನ ಎನ್‌ಸಿಎಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಿಂದಾಗಿ ನಟರಾಜನ್ ಟಿ20 ಸರಣಿಯ ಆರಂಭಿಕ ಕೆಲ ಪಂದ್ಯಗಳಿಗೆ ಅಲಭ್ಯರಾಗುವ ಸಾಧ್ಯತೆ ಇದೆ.

    ವರುಣ್ ಚಕ್ರವರ್ತಿ ಎನ್‌ಸಿಎಯಲ್ಲಿ ನಡೆದ ಫಿಟ್ನೆಸ್ ಪರೀಕ್ಷೆಯಲ್ಲಿ ಮತ್ತೊಮ್ಮೆ ವೈಲ್ಯ ಕಂಡಿದ್ದರೆ, ಟಿ. ನಟರಾಜನ್ ಭುಜ ನೋವಿನಿಂದಾಗಿ ಇನ್ನಷ್ಟೇ ಟೀಮ್ ಇಂಡಿಯಾ ಸೇರಿಕೊಳ್ಳಬೇಕಾಗಿದೆ. ಚಕ್ರವರ್ತಿ ಕಳೆದ ಆಸೀಸ್ ಪ್ರವಾಸದ ಟಿ20 ತಂಡಕ್ಕೆ ಆಯ್ಕೆಯಾಗಿದ್ದರೂ, ಭುಜ ನೋವಿನಿಂದಾಗಿ ತೆರಳಿರಲಿಲ್ಲ. ಬಳಿಕ ಎನ್‌ಸಿಎಯಲ್ಲಿ ಪುನಶ್ಚೇತನಕ್ಕೆ ಒಳಗಾಗಿದ್ದರು ಮತ್ತು ಭುಜದ ಗಾಯದಿಂದ ಗುಣಮುಖರಾದ ಕಾರಣ ಮತ್ತೆ ತಂಡಕ್ಕೆ ಆಯ್ಕೆಯಾಗಿದ್ದರು. ಆದರೆ ಟೀಮ್ ಇಂಡಿಯಾ ಪರ ಆಡಲು ಪ್ರಮುಖವಾಗಿರುವ ಯೋ-ಯೋ ಟೆಸ್ಟ್ ಮತ್ತು 2 ಕಿಮೀ ಓಟದ ಪರೀಕ್ಷೆಗಳಲ್ಲಿ ಅವರು ಎರಡೆರಡು ಬಾರಿ ವಿಫಲರಾಗಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

    ಇದನ್ನೂ ಓದಿ: ಭರ್ಜರಿ ಟ್ರೋಲ್ ಆಗುತ್ತಿದೆ ರೋಹಿತ್ ಶರ್ಮ ಅವರ ಈ ಫೋಟೋ!

    ತಮಿಳುನಾಡಿನ ವರುಣ್ ಚಕ್ರವರ್ತಿ ಕಳೆದ 5 ತಿಂಗಳಿನಿಂದ ಯಾವುದೇ ಸ್ಪರ್ಧಾತ್ಮಕ ಪಂದ್ಯವಾಡಿಲ್ಲ. ಮುಷ್ತಾಕ್ ಅಲಿ ಟ್ರೋಫಿ ಮತ್ತು ವಿಜಯ್ ಹಜಾರೆ ಟ್ರೋಫಿಯಲ್ಲೂ ಆಡಿಲ್ಲ. ಆದರೂ ಅವರ ಮ್ಯಾಚ್ ಫಿಟ್ನೆಸ್ ಪರೀಕ್ಷಿಸದೆ ತಂಡಕ್ಕೆ ಆಯ್ಕೆ ಮಾಡಿರುವ ಚೇತನ್ ಶರ್ಮ ಸಾರಥ್ಯದ ಆಯ್ಕೆ ಮಂಡಳಿಯ ಕ್ರಮ ಪ್ರಶ್ನಾರ್ಹವಾಗಿದೆ. ಕ್ರಿಕೆಟಿಗನೊಬ್ಬನ ಕೌಶಲ ಮಾತ್ರ ಗಣನೆಗೆ ಬಾರದೆ, ಫಿಟ್ನೆಸ್ ಗುಣಮಟ್ಟ ಕೂಡ ಆಯ್ಕೆಗೆ ಮಾನದಂಡವಾಗಿರುತ್ತದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

    ರಾಹುಲ್ ಚಹರ್‌ಗೆ ಅವಕಾಶ?
    ಟೆಸ್ಟ್ ಸರಣಿಯ ಮೀಸಲು ಪಡೆಯಲ್ಲಿದ್ದ ಸ್ಪಿನ್ನರ್ ರಾಹುಲ್ ಚಹರ್ ಈಗಲೂ ಟೀಮ್ ಇಂಡಿಯಾದ ಬಯೋ-ಬಬಲ್‌ನಲ್ಲಿದ್ದಾರೆ. ಹೀಗಾಗಿ ಟಿ20 ತಂಡದಲ್ಲಿ ವರುಣ್ ಚಕ್ರವರ್ತಿ ಸ್ಥಾನವನ್ನು ರಾಹುಲ್ ಚಹರ್ ತುಂಬುವ ನಿರೀಕ್ಷೆ ಇದೆ. ಮತ್ತೊಂದೆಡೆ ಆಲ್ರೌಂಡರ್ ರಾಹುಲ್ ತೆವಾಟಿಯಾ ಸದ್ಯ ತಂಡದ ಜತೆಗೆ ಅಭ್ಯಾಸದಲ್ಲಿ ಭಾಗಿಯಾಗಿದ್ದರೂ, ಫಿಟ್ನೆಸ್ ಪರೀಕ್ಷೆಯಲ್ಲಿ ಇನ್ನಷ್ಟೇ ಉತ್ತೀರ್ಣರಾಗಬೇಕಾಗಿದೆ ಎನ್ನಲಾಗಿದೆ.

    ಇಂಗ್ಲೆಂಡ್ ವಿರುದ್ಧ ಟಿ20 ಸರಣಿಗೆ 11ರ ಬಳಗದ ಆಯ್ಕೆ ಗೊಂದಲದಲ್ಲಿ ಭಾರತ

    ಆರ್. ಅಶ್ವಿನ್‌ಗೆ ಫೆಬ್ರವರಿ ತಿಂಗಳ ಐಸಿಸಿ ಆಟಗಾರ ಪ್ರಶಸ್ತಿ ಗೌರವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts