More

    ಗ್ಯಾರಂಟಿ ಹಣದಿಂದ ಆರ್ಥಿಕತೆ ಕಟ್ಟಲು ಬಗೆಬಗೆಯ ಕಾರ್ಯಕ್ರಮ

    ಬೆಂಗಳೂರು: ಗ್ಯಾರಂಟಿ ಯೋಜನೆಯಡಿ ಪ್ರತಿ ಮನೆಗೆ ಸರಾಸರಿ ಮಾಸಿಕ ಸಾವಿರ ರೂ. ಸಂದಾಯವಾಗುತ್ತಿದ್ದು, ಅದರ ಸುತ್ತಲೂ ಆರ್ಥಿಕ ಚಟುವಟಿಕೆ ಬೆಳೆಸಲು ವಿವಿಧ ಇಲಾಖೆಗಳು ಸೇರಿಕೊಂಡು ಕಸರತ್ತು ನಡೆಸಿವೆ.
    ಗೃಹಲಕ್ಷ್ಮೀ ಯೋಜನೆಯಲ್ಲಿ ನೀಡುವ ಎರಡು ಸಾವಿರ ರೂ.ವನ್ನು ಸರ್ಕಾರಿ ಸ್ವಾಮ್ಯದ ಎಂಎಸ್‌ಐಎಲ್‌ನ ಚಿಟ್‌ನಲ್ಲಿ ಹೂಡಿಕೆ ಮಾಡುವುದು, ಮಹಿಳಾ ಸ್ವಸಹಾಯ ಸಂಘಗಳಿಗೆ ಮಿನಿ ಸೂಪರ್ ಮಾರ್ಕೆಟ್ ಸ್ಥಾಪನೆ, ಡಿಜಿಟಲ್ ಸಖಿ ನಿಯೋಜನೆ ಹೀಗೆ ವಿವಿಧ ಆಲೋಚನೆಗಳು ಅಧಿಕಾರಿಗಳ ಮಟ್ಟದಲ್ಲಿ ನಡೆದಿವೆ.
    ಮಹಿಳೆಯರ ಕೈಗೆ ಹಣ ಹೋಗುವುದರಿಂದ ಅವರ ಆರ್ಥಿಕ ಪರಿಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ಬಗೆಬಗೆಯ ಕಾರ್ಯಕ್ರಮ ಜಾರಿಗೆ ತರಲು ಹಣಕಾಸು ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತ ಪಂಚಾಯತ್ ರಾಜ್ ಇಲಾಖೆ, ಕೌಶಲ್ಯಾಭಿವೃದ್ಧಿ ಇಲಾಖೆ ತಮ್ಮ ತಮ್ಮ ವ್ಯಾಪ್ತಿಯಲ್ಲಿ ವಿಶೇಷ ಯೋಜನೆ ಜಾರಿ ಮಾಡಲು ಸಿದ್ಧತೆ ನಡೆಸಿದ್ದಾರೆ. ಈ ಸಂಗತಿಯನ್ನು ಅಧಿಕಾರಿಗಳೇ ಖಚಿತ ಪಡಿಸಿದ್ದಾರೆ. ಹಣಕಾಸು ಇಲಾಖೆ ಹಿರಿಯ ಅಧಿಕಾರಿಯೇ ಖಾತ್ರಿಪಡಿಸಿದ್ದಾರೆ.
    ವಾರ್ಷಿಕ 48-50 ಸಾವಿರ ರೂ. ಹಣ ಒಂದು ಕೋಟಿಯಷ್ಟು ಕುಟುಂಬದ ಕೈ ಸೇರುವುದರಿಂದ, ಈ ಹಣದ ಸುತ್ತ ಒಂದು ಆರ್ಥಿಕ ಚಟುವಟಿಕೆ ಸೃಷ್ಟಿಸಬೇಕು. ಈ ಹಣ ಅವರ ಖರ್ಚು ಮಾಡುವ ಸಾಮರ್ಥ್ಯ ಹೆಚ್ಚುಮಾಡುವುಷ್ಟೇ ಅಲ್ಲ, ಅವರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವಂತಿರಬೇಕು. ಹೀಗಾಗಿ ಬೇರೆ ಬೇರೆ ಇಲಾಖೆಗಳಲ್ಲಿ ಕಾರ್ಯಕ್ರಮ ರೂಪುಗೊಳ್ಳುತ್ತಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.
    ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ವೈರುಧ್ಯದ ಅಭಿಪ್ರಾಯ ನೀಡಿದ್ದಾರೆ.
    ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರಗಳನ್ನು ಚಿಟ್ ಫಂಡ್ ಹೂಡಿಕೆ ಮಾಡುವ ಯಾವುದೇ ಯೋಜನೆಗಳು ಸರ್ಕಾರದ ಮುಂದಿಲ್ಲ. ಮಹಿಳೆಯರಿಗೆ ಡಿಬಿಟಿ ಮೂಲಕ ಎರಡು ಸಾವಿರ ರೂ.ಗಳು ನೀಡಲಾಗುತ್ತಿದ್ದು, ಇದನ್ನು ಮುಂದುವರೆಸಲಾಗುವುದು ಎಂದು ಸುದ್ದಿಗಾರರಿಗೆ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts