More

    ಬಾಯಲ್ಲಿ ನೀರೂರಿಸುವ ನೆಲ್ಲಿ ವೈವಿಧ್ಯ|ಆರೋಗ್ಯಕ್ಕೆ ಹಿತಕರವಾದ ಉಪ್ಪಿನಕಾಯಿ, ಜಾಮ್ ರೆಸಿಪಿ

    ವಿಟಮಿನ್ ‘ಸಿ’ ಆಗರವಾಗಿರುವ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಬೆಟ್ಟದ ನೆಲ್ಲಿಕಾಯಿ ಹಾಗೂ ಜೀರ್ಣ ಶಕ್ತಿಯನ್ನು ಹೆಚ್ಚಿಸುವ ಬಾಳೆದಿಂಡಿನಿಂದ ಮಾಡಬಹುದಾದ ಕೆಲವು ವ್ಯಂಜನಗಳು ಇಲ್ಲಿವೆ..

    ನೆಲ್ಲಿಕಾಯಿ ಉಪ್ಪಿನಕಾಯಿ

    ಬಾಯಲ್ಲಿ ನೀರೂರಿಸುವ ನೆಲ್ಲಿ ವೈವಿಧ್ಯ|ಆರೋಗ್ಯಕ್ಕೆ ಹಿತಕರವಾದ ಉಪ್ಪಿನಕಾಯಿ, ಜಾಮ್ ರೆಸಿಪಿಬೇಕಾಗುವ ಸಾಮಗ್ರಿ :15 ನೆಲ್ಲಿಕಾಯಿ 4-5 ಚಮಚ ಎಣ್ಣೆ 2 ಚಮಚ ಸಾಸಿವೆ ಜೀರಿಗೆ ಮೆಂತೆ ಚಿಟಿಕೆ ಇಂಗು 50 ಗ್ರಾಂ ಖಾರದ ಪುಡಿ ಉಪ್ಪು ರುಚಿಗೆ ತಕ್ಕಷ್ಟು. ವಿಧಾನ: ಒಂದು ಚಮಚ ಎಣ್ಣೆಯಲ್ಲಿ ನೆಲ್ಲಿಕಾಯಿಯನ್ನು ಸ್ವಲ್ಪ ಹುರಿದುಕೊಳ್ಳಿ. ಇದರಿಂದ ಹೋಳು ಮಾಡಲು ಅನುಕೂಲವಾಗುವುದು. ನಂತರ ಬಾಣಲೆಗೆ ಮೆಂತೆ, ಜೀರಿಗೆ, ಇಂಗು ಹಾಕಿ ಹುರಿದು ಪುಡಿ ಮಾಡಿಕೊಳ್ಳಿ. ಹುರಿದ ನೆಲ್ಲಿಕಾಯಿಯನ್ನು 2 -3 ಹೋಳು ಮಾಡಿ ಬಿಡಿಸಿಟ್ಟುಕೊಂಡಿರಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಒಗ್ಗರಣೆಗೆ ಸಾಸಿವೆ ಹಾಕಿ ಸಿಡಿಸಿ. ಬಿಸಿ ಬಾಣಲೆಗೆ ನೆಲ್ಲಿಕಾಯಿ ಹೋಳು ಹಾಕಿ ಗ್ಯಾಸ್ ಬಂದ್ ಮಾಡಿ. ನಂತರ ಅದಕ್ಕೆ ಉಪ್ಪು, ಖಾರದ ಪುಡಿ ಹಾಗೂ ಮಾಡಿಟ್ಟು ಕೊಂಡ ಸಾಂಬಾರವನ್ನು ಹಾಕಿ ಚೆನ್ನಾಗಿ ಕಲಸಿರಿ. ಊಟಕ್ಕೊಂದು ಆರೋಗ್ಯಕರ ಹಾಗೂ ರುಚಿಕರ ಉಪ್ಪಿನಕಾಯಿ ರೆಡಿ.

    ನೆಲ್ಲಿಕಾಯಿ ಜಾಮ್

    ಬಾಯಲ್ಲಿ ನೀರೂರಿಸುವ ನೆಲ್ಲಿ ವೈವಿಧ್ಯ|ಆರೋಗ್ಯಕ್ಕೆ ಹಿತಕರವಾದ ಉಪ್ಪಿನಕಾಯಿ, ಜಾಮ್ ರೆಸಿಪಿಬೇಕಾಗುವ ಸಾಮಗ್ರಿ : 250 ಗ್ರಾಂ ನೆಲ್ಲಿಕಾಯಿ 00 ಗ್ರಾಂ ಸಕ್ಕರೆ 3-4ಲವಂಗ ವಿಧಾನ: ನೆಲ್ಲಿಕಾಯಿಯನ್ನು 5ನಿಮಿಷ ಬಿಸಿ ನೀರಿನಲ್ಲಿ ಬೇಯಿಸಿಕೊಳ್ಳಿ. ನಂತರ ನೀರನ್ನು ಬಸಿದು ಬೀಜ ಬಿಡಿಸಿ ಮಿಕ್ಸ್ರರ್​ನಲ್ಲಿ ಒಮ್ಮೆ ತಿರುಗಿಸಿ. ಅರೆದ ಮಿಶ್ರಣಕ್ಕೆ ಸಕ್ಕರೆ ಹಾಕಿ ಕಾಯಿಸಿ. ಹೂರಣವು ಪಾತ್ರೆಯಿಂದ ಬಿಟ್ಟುಕೊಳ್ಳುವಷ್ಟು ಕಾಯಿಸಿ ಅದಕ್ಕೆ ಪುಡಿ ಮಾಡಿದ ಲವಂಗದ ಚೂರುಗಳನ್ನು ಹಾಕಿರಿ.

     

    ಬಾಳೆದಿಂಡಿನ ಪಲ್ಯ

    ಬಾಯಲ್ಲಿ ನೀರೂರಿಸುವ ನೆಲ್ಲಿ ವೈವಿಧ್ಯ|ಆರೋಗ್ಯಕ್ಕೆ ಹಿತಕರವಾದ ಉಪ್ಪಿನಕಾಯಿ, ಜಾಮ್ ರೆಸಿಪಿಬೇಕಾಗುವ ಸಾಮಗ್ರಿ :2 ಕಪ್ ಬಾಳೆದಿಂಡಿನ ಹೋಳು (ಸಣ್ಣದಾಗಿ ಹೆಚ್ಚಿದ್ದು ) 1 ಕಪ್ ಈರುಳ್ಳಿ 3ಚಮಚ ಖಾರದ ಪುಡಿ 1 ಚಮಚ ಹುಳಿ ಪುಡಿ ಒಗ್ಗರಣೆಗೆ ಉದ್ದಿನ ಬೇಳೆ ಸಾಸಿವೆ ಕರಿಬೇವು 1 ಚಮಚ ಗರಂ ಮಸಾಲಾ ಪುಡಿ ಉಪ್ಪು.

    ವಿಧಾನ: ಎಣ್ಣೆಗೆ ಉದ್ದಿನಬೇಳೆ, ಸಾಸಿವೆ, ಕರಿಬೇವು ಹಾಕಿ ಒಗ್ಗರಣೆ ಮಾಡಿಕೊಂಡು ಬಿಸಿ ಎಣ್ಣೆಗೆ ಖಾರದ ಪುಡಿುನ್ನು ಹಾಕಬೇಕು. ನಂತರ ಅದಕ್ಕೆ ಹೆಚ್ಚಿಟ್ಟು ಕೊಂಡ ಬಾಳೆದಿಂಡಿನ ಹೊಳನ್ನು ಹಾಕಿ ಉಪ್ಪು ಹುಳಿಪುಡಿ ಹಾಕಿ ಚೆನ್ನಾಗಿ ತಿರುಗಿಸಿ ಬಟ್ಟಲು ಮುಚ್ಚಿಡಿ. 5ನಿಮಿಷದ ನಂತರ ಅದು ಬೆಂದ ಮೇಲೆ ಮಸಾಲಾ ಪುಡಿ ಹಾಕಿ ತಿರುಗಿಸಿ. ಬೇಕಿದ್ದಲ್ಲಿ ಕಾಯಿತುರಿ ಹಾಕಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts