More

    ರಕ್ಷಾಬಂಧನ ದಿನ ಸ್ವಕ್ಷೇತ್ರದಿಂದ ಬಂದ ಮರದ ರಾಖಿ ಕಟ್ಟಿಕೊಳ್ಳಲಿದ್ದಾರೆ ಪ್ರಧಾನಿ ಮೋದಿ

    ನವದೆಹಲಿ: ವಾರಾಣಸಿಯ ಮಹಿಳಾ ಕರಕುಶಲಕರ್ಮಿಗಳು ರಕ್ಷಾಬಂಧನ ಹಬ್ಬಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ವಾಸ್ತವ ಗಡಿರೇಖೆ ಬಳಿಯ ಗಲ್ವಾನ್​ ಕಣಿವೆಯಲ್ಲಿನ ಯೋಧರಿಗಾಗಿ ಮರದ ರಾಖಿಗಳನ್ನು ಸಿದ್ಧಪಡಿಸಿ ರವಾನಿಸಿದ್ದಾರೆ. ವಾರಾಣಸಿಯನ್ನು ಪ್ರತಿನಿಧಿಸುವ ಪ್ರಧಾನಿ ಮೋದಿ ಅವರ ಸಂಸತ್​ ಸದಸ್ಯರ ಕಚೇರಿ ಮೂಲಕ ಈ ರಾಖಿಗಳು ರವಾನೆಗೊಂಡಿವೆ.

    ಶಾಲಿನಿ, ವಂದನಾ, ರೀಟಾ, ಪುಷ್ಪಾ, ಸೀತಾ ಎಂಬ ಮಹಿಳಾ ಕರಕುಶಲಕರ್ಮಿಗಳಲ್ಲದೆ ವೀರೇಂದ್ರ, ರಾಜ್​ಕುಮಾರ್​ ಮತ್ತು ರಾಮೇಶ್ವರ್​ ಸಿಂಗ್​ ಎಂಬ ಕರಕುಲಕರ್ಮಿಗಳ ಗುಂಪು ಈ ರಾಖಿಗಳನ್ನು ತಯಾರಿಸಿದೆ. ವಾರಾಣಸಿಯಲ್ಲಿರುವ ನರೇಂದ್ರ ಮೋದಿ ಅವರ ಸಂಸತ್​ ಸದಸ್ಯರ ಕಚೇರಿಗೆ ಈ ಗುಂಪು ತಲುಪಿಸಿದ ಮರದ ರಾಖಿಗಳನ್ನು ಕಚೇರಿಯ ಉಸ್ತುವಾರಿ ಶಿವ್​ ಶರಣ್​ ಪಾಠಕ್​ ಪಡೆದುಕೊಂಡು ಮಂಗಳವಾರವೇ ಅವನ್ನು ಪ್ರಧಾನಿ ಮೋದಿ ಅವರಿಗೆ ರವಾನಿಸುವುದಾಗಿ ಭರವಸೆ ನೀಡಿದರು ಎನ್ನಲಾಗಿದೆ.

    ಜಿಯಾಗ್ರಫಿಕಲ್​ ಇಂಡಿಕೇಷನ್​ (ಜಿಐ) ತಜ್ಞ ಮತ್ತು ಪದ್ಮಶ್ರೀ ರಜನೀಕಾಂತ್​ ಅವರು ಮರದ ರಾಖಿಗಳನ್ನು ವಿನ್ಯಾಸಗೊಳಿಸಿ, ಅವುಗಳನ್ನು ತಯಾರಿಸಲು ಕರಕುಶಲಕರ್ಮಿಗಳ ಗುಂಪಿಗೆ ಸಹಕರಿಸಿದ್ದಾರೆ. ರಾಖಿಗಳ ಜತೆಗೆ ಪ್ರಧಾನಿ ಮೋದಿ ಅವರಿಗೆ ಪತ್ರವನ್ನು ರವಾನಿಸಿರುವ ಈ ತಂಡ, ರಕ್ಷಾಬಂಧನದ ಹಬ್ಬದ ದಿನ ಮರದ ಒಂದು ರಾಖಿಯನ್ನು ತಮ್ಮ ಕೈಗೆ ಕಟ್ಟಿಕೊಳ್ಳುವುದಲ್ಲದೆ, ಉಳಿದ ರಾಖಿಗಳನ್ನು ಗಲ್ವಾನ್​ ಕಣಿವೆಯಲ್ಲಿ ನಿಯೋಜನೆಗೊಂಡಿರುವ ಯೋಧರಿಗೆ ರವಾನಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

    ಇದನ್ನೂ ಓದಿ: ಅಕ್ಷಯ್​ ಕುಮಾರ್ ಜತೆ ಸೂರ್ಯವಂಶಿ ಚಿತ್ರದಲ್ಲಿ ನಟಿಸಿದ ಕಲಾವಿದ ಇದೀಗ ತರಕಾರಿ ವ್ಯಾಪಾರಿ!

    ನಿಮ್ಮ ಆಶೀರ್ವಾದಗಳೊಂದಿಗೆ ಮತ್ತು ಆತ್ಮನಿರ್ಭರ ಭಾರತದಿಂದ ಸ್ಫೂರ್ತಿಗೊಂಡು ಮೊದಲ ಬಾರಿಗೆ ಕಾಶಿಯ ಜಿಐ ನೋಂದಾಯಿತ ಕರಕುಶಲ ವುಡನ್​ ಲ್ಯಾಕೀರ್​ವೇರ್​ ಆ್ಯಂಟ್​ ಟಾಯ್ಸ್​ ಮೂಲಕ ರಾಜ್ಯ ಪ್ರಶಸ್ತಿ ವಿಜೇತ ಕರಕುಶಲಕರ್ಮಿ ರಾಮೇಶ್ವರ್​ ಸಿಂಗ್​ ಸಹಕಾರದಲ್ಲಿ ಮರದ ರಾಖಿಗಳನ್ನು ತಯಾರಿಸಿದ್ದೇವೆ. ರಕ್ಷಾಬಂಧನದ ಹಬ್ಬದ ಸಂದರ್ಭದಲ್ಲಿ ಗಲ್ವಾನ್​ ಕಣಿವೆಯಲ್ಲಿ ದೇಶದ ಗಡಿಕಾಯುತ್ತಿರುವ ಧೀರ ಯೋಧರಿಗಾಗಿ ಇವನ್ನು ರವಾನಿಸುತ್ತಿದ್ದೇವೆ ಎಂದು ಕರಕುಶಲಕರ್ಮಿಗಳು ಪತ್ರದಲ್ಲಿ ಬರೆದಿದ್ದಾರೆ.

    ವಾರಣಾಸಿಯ ಜಿಐ ಕರಕುಶಲದಡಿ ಕರಕುಶಲಕರ್ಮಿಗಳು 50 ಸಾವಿರ ಮರದ ರಾಖಿಗಳನ್ನು ತಯಾರಿಸಿದ್ದಾರೆ. ಇವುಗಳನ್ನು ವಿತರಿಸುವ ಮೂಲಕ ನೂರಾರು ಕರಕುಶಲಕರ್ಮಿಗಳಿಗೆ ಉದ್ಯೋಗವನ್ನೂ ನೀಡಿದ್ದಾರೆ. ಕೋವಿಡ್​-19 ಪಿಡುಗಿನ ಹಿನ್ನೆಲೆಯಲ್ಲಿ ಅವರ ಈ ಕಾರ್ಯ ಶ್ಲಾಘನೀಯವಾಗಿದೆ.

    ಅರ್ಜುನ್​ ಸರ್ಜಾ ಪುತ್ರಿ ಐಶ್ವರ್ಯಾ ಕರೊನಾ ವರದಿ ನೆಗೆಟಿವ್​; ಆಸ್ಪತ್ರೆಯಿಂದ ಡಿಸ್ಚಾರ್ಜ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts