ಅಕ್ಷಯ್​ ಕುಮಾರ್ ಜತೆ ಸೂರ್ಯವಂಶಿ ಚಿತ್ರದಲ್ಲಿ ನಟಿಸಿದ ಕಲಾವಿದ ಇದೀಗ ತರಕಾರಿ ವ್ಯಾಪಾರಿ!

Akshay
Published on

ಕಳೆದ ನಾಲ್ಕು ತಿಂಗಳಿಂದ ಲಾಕ್​ಡೌನ್​ ಹಿನ್ನೆಲೆಯಲ್ಲಿ ಸಿನಿಮಾ ಕ್ಷೇತ್ರ ಸಂಪೂರ್ಣ ಸ್ಥಗಿತಗೊಂಡಿತ್ತು. ಈಗೀಗ ಚಿತ್ರೀಕರಣ ನಡೆಯುತ್ತಿದೆಯಾದರೂ, ಮೊದಲಿನಷ್ಟು ಬಿರುಸಾಗಿಲ್ಲ. ಹಾಗಾಗಿ ಕೆಲಸ ಇಲ್ಲದೆ, ಸಿಕ್ಕ ಸಿಕ್ಕ ಉದ್ಯೋಗದಲ್ಲಿ ತೊಡಗಿಸಿಕೊಂಡ ಕಲಾವಿದರೇ ಹೆಚ್ಚು. ಇದೀಗ ಇಲ್ಲೊಬ್ಬ ಸಿನಿಮಾ ಕಲಾವಿದ, ನಟನೆ ಕಯ ಬಿಟ್ಟು ತರಕಾರಿ ಮಾರಾಟಕ್ಕೆ ಇಳಿದಿದ್ದಾನೆ!

ರೋಹಿತ್​ ಶೆಟ್ಟಿ ನಿರ್ದೇಶನದಲ್ಲಿ ಅಕ್ಷಯ್​ ಕುಮಾರ್ ನಾಯಕತ್ವದಲ್ಲಿ ಸೂರ್ಯವಂಶಿ ಸಿನಿಮಾ ಸಿದ್ಧವಾಗಿದೆ. ಆ ಸಿನಿಮಾದಲ್ಲಿ ಒಂದು ಪಾತ್ರ ನಿಭಾಯಿಸಿದ್ದ ಒಡಿಶಾದ ಕಾರ್ತಿಕ್​ ಸಾಹೋ, ಇದೀಗ ತರಕಾರಿ ವ್ಯಾಪಾರದಲ್ಲಿ ನಿರತರಾಗಿದ್ದಾರೆ. ಅದರಲ್ಲಿ ಸದ್ಯ ಸಂಪಾದನೆ ಮುಂದುವರಿಸಿದ್ದು, ಮುಂದಿನ ದಿನಗಳಲ್ಲಿ ಸಿನಿಮಾಕ್ಷೇತ್ರದ ಬೆಳವಣಿಗೆ ನೋಡಿಕೊಂಡು ಮತ್ತೆ ಮುಂಬೈನತ್ತ ಬರುವ ಯೋಚನೆಯಲ್ಲಿದ್ದಾರೆ.

ಕಾರ್ತಿಕ್​ ಸಾಹೋ 17 ವರ್ಷದವನಿದ್ದಾಗಲೇ, ಮುಂಬೈಗೆ ಆಗಮಿಸಿದ್ದ. ಆರಂಭದಲ್ಲಿ ಅಮಿತಾಬ್​ ಬಚ್ಚನ್​, ಸಚಿನ್​ ತೆಂಡೂಲ್ಕರ್​ಗೆ ಬಾಡಿಗಾರ್ಡ್ ಆಗಿ ಕೆಲಸ ಮಾಡಿದ್ದರು. ಕೆಲ ಸಿನಿಮಾಗಳಲ್ಲಿ ಸಾಹಸ ಸನ್ನಿವೇಶಗಳಲ್ಲಿಯೂ ಕಾಣಿಸಿಕೊಂಡಿದ್ದರು. ಇದೀಗ ಅದೆಲ್ಲದಕ್ಕೂ ತಾತ್ಕಾಲಿಕ ಗುಡ್​ ಬೈ ಹೇಳಿ ತರಕಾರಿ ಮಾರಾಟ ಮಾಡುತ್ತಿದ್ದಾರೆ. (ಏಜೆನ್ಸೀಸ್​)​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net