More

    ಮೊಳಹಳ್ಳಿ ವಾರಾಹಿ ನದಿಯಲ್ಲಿ ಅಕ್ರಮ ಮರಳುಗಾರಿಕೆ, ನಾಲ್ಕು ಬೋಟ್ ವಶಕ್ಕೆ

    ಉಡುಪಿ: ಕುಂದಾಪುರ ತಾಲೂಕು ನಾನ್ ಸಿಆರ್‌ಜಡ್ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಸಲಾಗುತ್ತಿದ್ದ ನಾಲ್ಕು ದೊಡ್ಡ ದೋಣಿಗಳನ್ನು ಗಣಿ ಇಲಾಖೆ ಅಧಿಕಾರಿ ದಾಳಿ ನಡೆಸಿ ವಶ ಪಡಿಸಿಕೊಂಡಿದ್ದಾರೆ.
    ಮೊಳಹಳ್ಳಿ, ಮರತೂರು, ಕೈಲ್‌ಕೇರಿ, ಕೋಣೆಹಾರ ಭಾಗದ ವರಾಹಿ ನದಿಯಲ್ಲಿ ಟನ್‌ಗಟ್ಟಳೆ ಮರಳನ್ನು ಬಗೆದು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಗಣಿ ಇಲಾಖೆ ಹಿರಿಯ ಭೂ ವಿಜ್ಞಾನಿ ಸಂದೀಪ್ ಮತ್ತು ಭೂ ವಿಜ್ಞಾನಿ ಗೌತಮ್ ಶಾಸ್ತ್ರಿ ಅವರ ತಂಡ ಉಡುಪಿಯಿಂದ ಬೋಟ್ ಮತ್ತು ಕ್ರೇನ್ ತೆಗೆದುಕೊಂಡು ಹೋಗಿ ಶುಕ್ರವಾರ ಬೆಳಗ್ಗೆ ಕಾರ್ಯಾಚರಣೆ ನಡೆಸಿ 4 ಬೋಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
    ಅಧಿಕಾರಿಗಳ ದಾಳಿ ಮಾಹಿತಿ ಪಡೆದ ಅಕ್ರಮ ಮರಳುಕೋರರ ತಂಡ ಎರಡು ಬೋಟುಗಳನ್ನು ನೀರಿನಲ್ಲಿ ಮುಳುಗಿಸಿ ಪರಾರಿಯಾಗಿದೆ ಎಂದು ತಿಳಿದು ಬಂದಿದೆ. ಈ ಭಾಗದಲ್ಲಿ ರಾತ್ರಿ ಭಾಗದಲ್ಲಿ ಅಕ್ರಮ ಮರಳುಗಾರಿಕೆ ವ್ಯಾಪಕ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರು ದೂರಿದ್ದರು. ವಶಪಡಿಸಿಕೊಂಡ ಬೋಟುಗಳನ್ನು ಮೊಳಹಳ್ಳಿ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಲಾಗಿದ್ದು, ಕಾನೂನು ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts