More

    ಡಿಜಿಟಲ್ ಅಕ್ರಮಗಳ ಕುರಿತ ವರಾಹಚಕ್ರಂ ಚಿತ್ರಕ್ಕೆ ಚಾಲನೆ ನೀಡಿದ ಮಾಜಿ ಸಚಿವ ಆರ್. ಅಶೋಕ್

    ವಿಜಯವಾಣಿ ಸುದ್ದಿಜಾಲ ಬೆಂಗಳೂರು :

    ‘ಮನಸುಗಳ ಮಾತು ಮಧುರ’ ನಿರ್ದೇಶಕ ಮಂಜು ಮಸ್ಕಲ್‌ಮಟ್ಟಿ ಎಂಟು ವರ್ಷಗಳ ಗ್ಯಾಪ್ ನಂತರ ಮತ್ತೆ ವಾಪಸ್ಸಾಗಿದ್ದಾರೆ. ಇತ್ತೀಚೆಗಷ್ಟೆ ಅವರು ನಿರ್ದೇಶಿಸಲಿರುವ ‘ವರಾಹಚಕ್ರಂ’ ಚಿತ್ರದ ಮುಹೂರ್ತ ನೆರವೇರಿತು. ಮಾಜಿ ಸಚಿವ ಆರ್. ಅಶೋಕ್ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದರು. ‘ಈ ಡಿಜಿಟಲ್ ಯುಗದಲ್ಲಿ ನಡೆಯುತ್ತಿರುವ ಅನ್ಯಾಯ, ಮೋಸ, ಅಕ್ರಮಗಳ ಬಗ್ಗೆ ಚಿತ್ರದ ಕಥೆ ಸಾಗುತ್ತದೆ. ಆಧುನಿಕ ಪಂಚ ಪಾಂಡವರಂತೆ ಐವರು ನಾಯಕರು ಈ ಚಿತ್ರದಲ್ಲಿದ್ದು, ಅನ್ಯಾಯಗಳಿಗೆ ಹೇಗೆ ಅಂತ್ಯ ಹಾಡುತ್ತಾರೆ ಎಂಬುದೇ ಸ್ಟೋರಿ’ ಎಂದು ಮಾಹಿತಿ ನೀಡುತ್ತಾರೆ ನಿರ್ದೇಶಕ ಮಂಜು.

    ಇದನ್ನೂ ಓದಿ : ಅಕ್ಷಯ್​​ ಕುಮಾರ್​​​​ ಮಗಳು ನಿತಾರಾ ಹೇಗಿದ್ದಾಳೆ ಗೊತ್ತಾ..? ಅಮ್ಮನನ್ನೇ ಹೋಲುತ್ತಳೆ ಎಂದ ಪಾಪರಾಜಿಗಳು..!

    ಡಿಜಿಟಲ್ ಅಕ್ರಮಗಳ ಕುರಿತ ವರಾಹಚಕ್ರಂ ಚಿತ್ರಕ್ಕೆ ಚಾಲನೆ ನೀಡಿದ ಮಾಜಿ ಸಚಿವ ಆರ್. ಅಶೋಕ್

    ತೆಲುಗು ನಟ ಭಾನು ಚಂದರ್, ಪ್ರೇಮಾ, ಸಾಯಿ ಕುಮಾರ್ ಮುಖ್ಯ ಭೂಮಿಕೆಯಲ್ಲಿದ್ದು ಅರ್ಜುನ್ ದೇವ್, ರಾಣಾ, ಇಮ್ರಾನ್ ಷರೀಫ್​, ಆರ್ಯನ್ ಹಾಗೂ ಪ್ರತೀಕ್ ಗೌಡ ನಾಯಕರಾಗಿದ್ದಾರೆ. ಅವರಿಗೆ ನಾಯಕಿಯರಾಗಿ ಶೋಭಾ ರಾಣಿ, ಪ್ರಿಯಾ ತರುಣ್, ಅನನ್ಯಾ, ಜಾಹ್ನವಿ, ದೀಕ್ಷಾ ಮತ್ತು ಚೈತ್ರಾ ಕಾಣಿಸಿಕೊಳ್ಳಲಿದ್ದಾರೆ. ಉಳಿದಂತೆ ಚಿ. ಗುರುದತ್, ಶೋಭರಾಜ್ ಜತೆಗೆ ನಿರ್ದೇಶಕ ಮಂಜು, ನೇಹಾ ಅನ್ಸಾರಿ ತಾರಾಗಣದಲ್ಲಿದ್ದಾರೆ. ಪಾತ್ರವೊಂದಕ್ಕೆ ಬಾಲಿವುಡ್ ನಟ ಸೋನು ಸೂದ್ ಕರೆತರುವ ಪ್ರಯತ್ನವೂ ನಡೆದಿದೆ.

    ಇದನ್ನೂ ಓದಿ : BBKS10: ‘ಅವನೊಬ್ಬ ಮಹಾನ್​ ಸಾಧಕ’ ಎಂದ ತುಕಾಲಿ ಸಂತೋಷ್; ಅಷ್ಟಕ್ಕೂ​ ಹೇಳಿದ್ಯಾರಿಗೆ?

    ಡಿಜಿಟಲ್ ಅಕ್ರಮಗಳ ಕುರಿತ ವರಾಹಚಕ್ರಂ ಚಿತ್ರಕ್ಕೆ ಚಾಲನೆ ನೀಡಿದ ಮಾಜಿ ಸಚಿವ ಆರ್. ಅಶೋಕ್

    ಬಳ್ಳಾರಿ, ಹಿರಿಯೂರು, ಬೆಂಗಳೂರು, ಚಿತ್ರದುರ್ಗ, ತಮಿಳುನಾಡು, ಉತ್ತರಪ್ರದೇಶದಲ್ಲಿ ಚಿತ್ರೀಕರಣ ನಡೆಸುವ ಪ್ಲ್ಯಾನ್ ಚಿತ್ರತಂಡದ್ದು. ನಟಿ ಪ್ರೇಮಾ, ‘ಈ ಹಿಂದೆ ಮಾಡಿದ ಎಲ್ಲ ಪಾತ್ರಗಳಿಗಿಂತ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಸ್ವಲ್ಪ ನೆಗಟಿವ್, ಸ್ವಲ್ಪ ಪಾಸಿಟಿವ್ ಎರಡೂ ಶೇಡ್‌ಗಳಿರುವ ಪಾತ್ರ’ ಎಂದು ಹೇಳಿಕೊಂಡರು. ಚಿತ್ರದಲ್ಲಿ ಐದು ಹಾಡುಗಳಿದ್ದು ಡಾ. ವಿ. ನಾಗೇಂದ್ರ ಪ್ರಸಾದ್ ಸಂಗೀತ ನೀಡುವ ಜತೆಗೆ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಚಿತ್ರಕ್ಕೆ ಶರತ್ ಕುಮಾರ್ ಛಾಯಾಗ್ರಹಣ, ಭಾರ್ಗವ ಸಂಕಲನವಿರಲಿದೆ.

    ಡಿಜಿಟಲ್ ಅಕ್ರಮಗಳ ಕುರಿತ ವರಾಹಚಕ್ರಂ ಚಿತ್ರಕ್ಕೆ ಚಾಲನೆ ನೀಡಿದ ಮಾಜಿ ಸಚಿವ ಆರ್. ಅಶೋಕ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts