More

    ಪ್ರತಿಭಟನೆ ಹೆಸರಲ್ಲಿ ಆಸ್ತಿಪಾಸ್ತಿಗೆ ಹಾನಿ, ಆರಂಭವಾಗಿದೆ ದುಷ್ಕರ್ಮಿಗಳ ಆಸ್ತಿ ಜಪ್ತಿ

    ಲಖನೌ: ಕಳೆದ ವರ್ಷ ಡಿಸೆಂಬರ್​ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದಿದ್ದ ಪ್ರತಿಭಟನೆಯ ವೇಳೆ ಹಿಂಸಾಚಾರ ನಡೆದಿದ್ದು, ಸಾಕಷ್ಟು ಆಸ್ತಿಪಾಸ್ತಿ ನಷ್ಟವಾಗಿತ್ತು. ಇದೀಗ ಜಿಲ್ಲಾಡಳಿತ ಆ ಪ್ರತಿಭಟನೆಯಲ್ಲಿ ಪಾಲ್ಗೊಂಡು ಆಸ್ತಿಪಾಸ್ತಿ ನಷ್ಟಕ್ಕೆ ಕಾರಣರಾದವರ ಆಸ್ತಿಗಳನ್ನು ಜಪ್ತಿ ಮಾಡಲಾರಂಭಿಸಿದ್ದಾರೆ.

    ಆಸ್ತಿ ಜಪ್ತಿ ಮಾಡುವುದರ ಭಾಗವಾಗಿ ಜಿಲ್ಲಾಡಳಿತ ಲಖನೌನ ಹಸನ್​ಗಂಜ್​ ಪ್ರದೇಶದಲ್ಲಿದ್ದ ಸಿದ್ಧ ಉಡುಪುಗಳ ಮಳಿಗೆ ಮತ್ತು ಸಣ್ಣ ಅಂಗಡಿಯೊಂದನ್ನು ಜಪ್ತಿ ಮಾಡಿದ್ದಾರೆ. ಆಸ್ತಿಪಾಸ್ತಿ ನಷ್ಟವಾದ ಬಗ್ಗೆ ದಾಖಲಾದ ಎಫ್​ಐಆರ್​ಗಳನ್ನು ಆಧರಿಸಿ, ಪ್ರತಿಭಟನಾಕಾರರ ಆಸ್ತಿಗಳನ್ನು ಜಪ್ತಿ ಮಾಡಲಾಗುತ್ತಿದೆ ಎನ್ನಲಾಗಿದೆ.

    4 ಪೊಲೀಸ್​ ಠಾಣೆಗಳ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಎಫ್​ಐಆರ್​ ಪ್ರಕಾರ ಹಾನಿಗೊಳಗಾದ ಸಾರ್ವಜನಿಕ ಆಸ್ತಿಗಳ ವಿವರಗಳನ್ನು ಆಧರಿಸಿ ನಷ್ಟವನ್ನು ಭರಿಸಿಕೊಡುವಂತೆ ಸೂಚಿಸಿ 54 ಜನರಿಗೆ ನೋಟಿಸ್​ ನೀಡಲಾಗಿತ್ತು. ಇದರ ಭಾಗವಾಗಿ ಎರಡು ಅಂಗಡಿಗಳನ್ನು ಜಪ್ತಿ ಮಾಡಲಾಗಿದೆ. ಸಿದ್ಧ ಉಡುಪುಗಳ ಮಳಿಗೆ ಧರ್ಮವೀರ್​ ಸಿಂಗ್​ ಎಂಬುವರಿಗೆ ಸೇರಿದ್ದರೆ, ಸಣ್ಣ ಅಂಗಡಿ ಮಹೇನೂರ್​ ಚೌಧರಿ ಎಂಬುವರಿಗೆ ಸೇರಿದ್ದಾಗಿದೆ. ಆಸ್ತಿ ಜಪ್ತಿ ಮಾಡುವ ಪ್ರಕ್ರಿಯೆ ಮುಂದುವರಿಯಲಿದೆ ಎಂದು ಸದಾರ್​ ತಹಸೀಲ್ದಾರ್​ ಶಂಭು ಶರಣ್​ ಸಿಂಗ್​ ಹೇಳಿದ್ದಾರೆ.

    ಇದನ್ನೂ ಓದಿ: ಅಂತೂ ಕರೊನಿಲ್​ ಕಿಟ್​ ಮಾರಾಟಕ್ಕೆ ಅನುಮತಿ ನೀಡಿದ ಆಯುಷ್​ ಇಲಾಖೆ…ಆದ್ರೆ ಒಂದು ಷರತ್ತು ಅನ್ವಯ !

    ಉತ್ತರ ಪ್ರದೇಶ ಸಾರ್ವಜನಿಕ ಮತ್ತು ಖಾಸಗಿ ಆಸ್ತಿ ವಸೂಲಿ ಸುಗ್ರೀವಾಜ್ಞೆ 2020ರ ಪ್ರಕಾರ ಪ್ರತಿಭಟನೆ ವೇಳೆ ಆಸ್ತಿಪಾಸ್ತಿಗೆ ಆದ ನಷ್ಟವನ್ನು ಮರುಭರ್ತಿ ಮಾಡಿಕೊಳ್ಳುವ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್​ ವಿಶ್ವಭೂಷಣ್​ ಮಿಶ್ರಾ ತಿಳಿಸಿದ್ದಾರೆ.

    ಸಿಎಎ ಮತ್ತು ಎನ್​ಆರ್​ಸಿ ವಿರೋಧಿಸಿ ಡಿಸೆಂಬರ್​ 19 ಮತ್ತು 20ರಂದು ಲಖನೌನಲ್ಲಿ ಭಾರಿ ಪ್ರತಿಭಟನೆಗಳು ನಡೆದಿದ್ದವು. ಈ ಸಂದರ್ಭದಲ್ಲಿ ವಿವಿಧ ಸುದ್ದಿವಾಹಿನಿಗಳ ಒಬಿ ವ್ಯಾನ್​ಗಳು ಮತ್ತು ಕೋಟ್ಯಂತರ ರೂಪಾಯಿ ಮೌಲ್ಯದ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದ್ದವು. ಬಳಿಕ ಸಮೀಕ್ಷೆ ನಡೆಸಿದ್ದ ಜಿಲ್ಲಾಡಳಿತ 1.55 ಕೋಟಿ ರೂಪಾಯಿ ನಷ್ಟ ಭರಿಸಿಕೊಡುವಂತೆ ಸೂಚಿಸಿ 50 ಜನರಿಗೆ ನೋಟಿಸ್​ ರವಾನಿಸಿತ್ತು.

    ಖಾದ್ರಾ ಪ್ರದೇಶದಲ್ಲಿ ಒಟ್ಟು 21.76 ಲಕ್ಷ ರೂ. ಆಸ್ತಿಪಾಸ್ತಿ ಹಾನಿಯಾಗಿದ್ದು, 13 ಜನರಿಗೆ ಇದನ್ನು ಭರಿಸಿಕೊಡುವಂತೆ ಸೂಚಿಸಲಾಗಿತ್ತು. ಪರಿವರ್ತನ್​ ಚೌಕ್​ನಲ್ಲಿ ಆಗಿದ್ದ 69.65 ಲಕ್ಷ ರೂ. ಆಸ್ತಿ ನಷ್ಟವನ್ನು ಭರಿಸಿಕೊಡಲು 24 ಜನರಿಗೆ, ಹಳೇ ನಗರ ವ್ಯಾಪ್ತಿಯಲ್ಲಿ ಆಗಿದ್ದ 47.85 ಲಕ್ಷ ರೂ. ನಷ್ಟವನ್ನು ಭರಿಸಿಕೊಡಲು 10 ಜನರಿಗೆ ಹಾಗೂ ಕೈಸರ್​ಬಾಗ್​ನಲ್ಲಿನ 1.75 ಲಕ್ಷ ರೂ. ನಷ್ಟ ಭರಿಸಿಕೊಡಲು ಆರು ಜನರಿಗೆ ಸೂಚಿಸಲಾಗಿತ್ತು.

    ರೇಪ್​ ಮಾಡಿ, ಬಸಿರು ಮಾಡಿದ ಪೊಲೀಸಪ್ಪ, ದಯವಿಟ್ಟು ಕ್ಷಮಿಸಿ ಬಿಡಮ್ಮಾ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts