More

    1.24 ಕೋಟಿ ರೂ. ವಂಚನೆ, ಕ್ರಿಪ್ಟೋ ಆ್ಯಂಡ್ ಕರೆನ್ಸಿ ವ್ಯವಹಾರ ಹೂಡಿಕೆಯಲ್ಲಿ ಮೋಸ

    ಮಂಗಳೂರು: ಸ್ಟಾಕ್ ಮಾರ್ಕೆಟ್ ಟ್ರೇಡರ್ ಎಂದು ನಂಬಿಸಿ ಕ್ರಿಪ್ಟೋ ಆ್ಯಂಡ್ ಕರೆನ್ಸಿ ವ್ಯವಹಾರದಲ್ಲಿ ಹಣ ಹೂಡಿಕೆ ಮಾಡಿ ಲಾಭ ಗಳಿಸಬಹುದು ಸುಮಾರು 1.24 ಕೋಟಿ ರೂ. ಮೋಸ ಮಾಡಿರುವ ಬಗ್ಗೆ ವ್ಯಕ್ತಿಯೊಬ್ಬರು ಸೆನ್ ಠಾಣೆಗೆ ದೂರು ನೀಡಿದ್ದಾರೆ.

    ದೂರುದಾರರಿಗೆ ತಮ್ಮ ಸಹೋದ್ಯೋಗಿ ಮೂಲಕ 2021 ಮಾರ್ಚ್‌ನಲ್ಲಿ ಕೇರಳದ ಜಿಜೊ ಜಾನ್ ಪುತ್ತೆನವೆಟಿಲ್ ಎಂಬುವರು ಪರಿಚಯವಾಗಿದ್ದು, ಆತ ತನ್ನನ್ನು ಸ್ಟಾಕ್ ಮಾರ್ಕೆಟ್ ಟ್ರೇಡರ್ ಎಂದು ನಂಬಿಸಿದ್ದಾನೆ. ಆಗ ಕೋವಿಡ್ ಸಮಯವಾದ್ದರಿಂದ ಮುಖತಃ ಭೇಟಿಯಾಗಲು ಸಾಧ್ಯವಾಗುವುದಿಲ್ಲ ಎಂದು ಆತ ತನ್ನ ವಾಟ್ಸಾೃಪ್‌ನಿಂದ ಸಂದೇಶ ಕಳುಹಿಸಿ, ವಾಟ್ಸಾೃಪ್ ಕಾಲ್ ಮೂಲಕ ಕ್ರಿಪ್ಟೋ ಆ್ಯಂಡ್ ಕರೆನ್ಸಿ ಬಗ್ಗೆ ಮಾಹಿತಿ ನೀಡಿ ಹಣ ಹೂಡಿಕೆ ಮಾಡಲು ತಿಳಿಸಿದ್ದಾನೆ. ಹೂಡಿಕೆ ಮಾಡಿದ ಹಣದ ಶೇ.10ರಷ್ಟು ಹಣವನ್ನು ಪ್ರತಿ ತಿಂಗಳು ಪಾವತಿಸುವುದಾಗಿ ಭರವಸೆ ನೀಡಿದ್ದನು. ಆತನ ಮಾತನ್ನು ನಂಬಿದ ದೂರುದಾರರು 2021ರ ಮಾ.23ರಿಂದ ಜೂ.1ರವರೆಗೆ ಹಂತ ಹಂತವಾಗಿ 41 ಲಕ್ಷ ರೂ. ಐಎಂಪಿಎಸ್ ಮತ್ತು ನ್‌ಟೆ ಮೂಲಕ ಪಾವತಿಸಿದ್ದಾರೆ. ಅಕ್ಟೋಬರ್‌ನಲ್ಲಿ ವಿವಿಧ ಬ್ಯಾಂಕ್‌ಗಳಿಂದ ಸುಮಾರು 67 ಲಕ್ಷ ರೂ. ಸಾಲ ಪಡೆದು, .22ರಿಂದ 26ರ ನಡುವೆ 60 ಲಕ್ಷ ರೂ., ಪಾವತಿಸಿದ್ದಾರೆ. ಈ ರೀತಿಯಾಗಿ ಆರೋಪಿ 1.24 ಕೋಟಿ ರೂ. ಹೂಡಿಕೆ ಮಾಡಿಸಿಕೊಂಡು, ಸೆಪ್ಟೆಂಬರ್‌ನಲ್ಲಿ 9 ಲಕ್ಷ ರೂ. ಮಾತ್ರ ಮರು ಪಾವತಿಸಿದ್ದಾನೆ.

    ಹೂಡಿಕೆ ಮಾಡಿದ ಹಣ ಸಿಗಬಹುದೆಂದು ಕಾದ ಅವರಿಗೆ, ಆರೋಪಿ ಕರೆ ಸ್ವೀಕರಿಸಿದ ಕಾರಣ ತಾನು ಮೋಸ ಹೋಗಿರುವುದು ಖಚಿತಗೊಂಡು ಬಳಿಕ ಸೆನ್ ಠಾಣೆಯಲ್ಲಿ ದೂರು ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts