More

    ಹೆಚ್ಚಿನ ರಕ್ತದೊತ್ತಡ ಕಾಯಿಲೆಗಳ ನಿಯಂತ್ರಣಕ್ಕೆ ವ್ಯಾನ ಮುದ್ರೆ

    ಹೆಚ್ಚಿನ ರಕ್ತದೊತ್ತಡ ಕಾಯಿಲೆಗಳ ನಿಯಂತ್ರಣಕ್ಕೆ ವ್ಯಾನ ಮುದ್ರೆವ್ಯಾನ ಮುದ್ರೆ ಒಂದು ಮುದ್ರೆ ಅಥವಾ ಯೋಗದ ಕೈ ಸೂಚಕವಾಗಿದೆ. ಇದರಲ್ಲಿ ತೋರು ಬೆರಳು ಮತ್ತು ಮಧ್ಯದ ಬೆರಳನ್ನು ಹೆಬ್ಬೆರಳು ಸ್ಪರ್ಶಿಸಲು ಒಟ್ಟಿಗೆ ತರಲಾಗುತ್ತದೆ. ಹೆಬ್ಬೆರಳು ದೇಹದ ಬೆಂಕಿಯ ಅಂಶವನ್ನು ಪ್ರತಿನಿಧಿಸುತ್ತದೆ. ಮಧ್ಯದ ಬೆರಳು ಬಾಹ್ಯಾಕಾಶವನ್ನು ಮತ್ತು ತೋರು ಬೆರಳು ಗಾಳಿಯ ಅಂಶವನ್ನು ಪ್ರತಿನಿಧಿಸುತ್ತದೆ.

    ಇಲ್ಲಿ ಅಗ್ನಿ ತತ್ವ, ವಾಯು ತತ್ವ ಮತ್ತು ಆಕಾಶ ತತ್ವ ಜೊತೆ ಸೇರಿದಾಗ ದೇಹದ ರಕ್ತದ ಒತ್ತಡವನ್ನು ನಿಯಂತ್ರಿಸುತ್ತದೆ. ರಕ್ತದ ಒತ್ತಡ ಹೆಚ್ಚು ಇರುವವರು ದಿನಾಲೂ ಈ ಮುದ್ರೆಯನ್ನು ಅಭ್ಯಾಸ ಮಾಡಿದಾಗ ಬೇಗನೆ ನಿಯಂತ್ರಣಕ್ಕೆ ತರಲು ಸಹಾಯವಾಗುತ್ತದೆ. ವ್ಯಾನ ವಾಯು ಪ್ರಾಣದ ಐದು ಭಾಗಗಳಲ್ಲಿ ಒಂದಾಗಿದೆ. ನಮ್ಮ ಉಸಿರನ್ನು ಪಂಚ ಪ್ರಾಣ (ಐದು ವಿಧದ ಪ್ರಾಣ) ಎಂಬ ಐದು ಉಪ ಪ್ರವಾಹಗಳಾಗಿ ವಿಂಗಡಿಸಲಾಗಿದೆ. ಈ ಪ್ರವಾಹಗಳನ್ನು ಪ್ರಾಣ, ಉದಾನ, ವ್ಯಾನ, ಸಮಾನ ಮತ್ತು ಅಪಾನ ವಾಯು ಎಂದು ವರ್ಗೀಕರಿಸಲಾಗಿದೆ.

    ವಿಧಾನ: ಹೆಬ್ಬೆರಳಿನ ತುದಿಯನ್ನು ತೋರು ಬೆರಳು ಮತ್ತು ಮಧ್ಯದ ಬೆರಳಿನ ತುದಿಗೆ ಸೇರಿಸಿದಾಗ ವ್ಯಾನ ಮುದ್ರೆಯಾಗುತ್ತದೆ. ಇದನ್ನು 30 ರಿಂದ 40 ನಿಮಿಷಗಳವರೆಗೆ ಮಾಡಿದಲ್ಲಿ ಉತ್ತಮ ಫಲ ದೊರೆಯುವುದು. ವ್ಯಾನ ಮುದ್ರೆ ಮಾಡಿದ ಅನಂತರ ಕೊನೆಯಲ್ಲಿ ಪ್ರಾಣ ಮುದ್ರೆಯನ್ನು 10 ನಿಮಿಷ ಅಭ್ಯಾಸ ಮಾಡಿ. ಎರಡು ಕೈಯಲ್ಲಿ ಅಭ್ಯಾಸ ಮಾಡಿ. ಓಂ ವ್ಯಾನಾಯ ಸ್ವಾಹಾಃ ಎಂದು 108 ಬಾರಿ ಮಂತ್ರ 48 ದಿನ ಪಠಿಸಿ.

    ಹೆಬ್ಬೆರಳಿನ ಸ್ನಾಯುಗಳು ಪಂಪಿನಂತೆ ಕೆಲಸ ಮಾಡಿ ಸದಾ ಕಾಲವು ಶರೀರದ ಇಲ್ಲಾ ಭಾಗಗಳಿಗೂ ರಕ್ತವನ್ನು ಸರಬರಾಜು ಮಾಡುತ್ತವೆ. ಇಂತಹ ಹೃದಯ ರಕ್ತನಾಳಗಳು ಮುಚ್ಚಿ ಹೋಗಿ ರಕ್ತ ಸಂಚಾರ ನಿಂತು ಹೋದಲ್ಲಿ ಹೃದಯಾಘಾತವಾಗುತ್ತದೆ.

    ಹೃದಯಕ್ಕೆ ಸಮರ್ಪಕವಾಗಿ ರಕ್ತಸಂಚಾರವಾಗದೆ ಇರಲು ಕಾರಣಗಳು :ಧೂಮಪಾನ ಹಾಗೂ ಅತಿಯಾದ ಮದ್ಯಪಾನ, ಹೆಚ್ಚಿನ ಕೊಲೆಸ್ಟ್ರಾಲ್, ಸ್ಥೂಲಕಾಯ ಶರೀರ, ಅತಿಯಾದ ಮಧುಮೇಹ.

    ವ್ಯಾನಮುದ್ರೆಯ ಪ್ರಯೋಜನಗಳು: ಈ ಮುದ್ರೆಯು ರಕ್ತದೊತ್ತಡವನ್ನು ಸಾಮಾನ್ಯ ಮಟ್ಟದಲ್ಲಿ ನಿರ್ವಹಿಸುತ್ತದೆ. ಇದು ವಾತ ದೋಷದ ವಿಕಾರದಿಂದ ಉಂಟಾಗುವ ದೇಹದ ನೋವನ್ನು ಕಡಿಮೆ ಮಾಡುತ್ತದೆ. ಇದು ಎಲ್ಲಾ ನಾಡಿಗಳ ಶಕ್ತಿ ಮತ್ತು ಚಟುವಟಿಕೆಗಳನ್ನು ಸುಧಾರಿಸುತ್ತದೆ. ಇದು ಆಯಾಸ, ಸೋಮಾರಿತನ, ತಲೆತಿರುಗುವಿಕೆಯನ್ನು ತೆಗೆದುಹಾಕುತ್ತದೆ. ಕಡಿಮೆ ನಿದ್ರೆಯಿಂದಾಗಿ ಸಾಮಾನ್ಯ ದೌರ್ಬಲ್ಯವನ್ನು ಈ ಮುದ್ರೆಯ ಅಭ್ಯಾಸದಿಂದ ನಿವಾರಿಸಬಹುದು.

    ಉತ್ಸಾಹ, ಆಲೋಚನೆಗಳ ಹಾಗೂ ಗ್ರಹಿಕೆಯ ಕೊರತೆಯನ್ನು ವ್ಯಾನ ಮುದ್ರೆಯಿಂದ ನೀಗಿಸಬಹುದು. ದೇಹದ ಜಡತ್ವ ಹೋಗಲಾಡಿಸುತ್ತದೆ. ಅತಿಯಾದ ಬೆವರು, ಬಾಯಾರಿಕೆ, ಅತೀ ಮೂತ್ರವಿಸರ್ಜನೆಯನ್ನೂ, ಋತುಸ್ರಾವದ ಸಮಸ್ಯೆಯನ್ನು ಸರಿಪಡಿಸಬಹುದು. ಮನಸ್ಸಿನ ಗೊಂದಲಗಳು ನಿವಾರಣೆಯಾಗುತ್ತದೆ. ದೇಹದ ಶಾಖ ಶಕ್ತಿ ಕಡಿಮೆಯಾಗಿ ವ್ಯಕ್ತಿ ಪ್ರಜ್ಞಾಹೀನನಾಗುವ ಸಂದರ್ಭದಲ್ಲಿ ಈ ಮುದ್ರೆಯನ್ನು ಮಾಡುವ ಮೂಲಕ ಕಳೆದು ಹೋದ ಚೈತನ್ಯ ಮರಳಿ ಬರುತ್ತದೆ. ಮುಖ್ಯವಾಗಿ ರಕ್ತದೊತ್ತಡ ಕಾಯಿಲೆಗಳ ನಿಯಂತ್ರಣಕ್ಕೆ ಈ ಮುದ್ರೆ ಸಹಾಯಕವಾಗುತ್ತದೆ. ಹೊಟ್ಟೆಯುಬ್ಬರ, ತೇಗು ಬರುವುದು, ಅತಿಯಾದ ಬೆವರುವಿಕೆ, ಅತಿ ಮೂತ್ರ, ಆಲಸ್ಯ, ಅತಿ ನಿದ್ರೆ ಮುಂತಾದ ಅತಿರೇಕದ ತೊಂದರೆಗಳಿದ್ದಲ್ಲಿ ವ್ಯಾನ ಮುದ್ರೆಯನ್ನು ಮಾಡುತ್ತಿದ್ದರೆ, ಉತ್ತಮ ಫಲ ದೊರೆಯುವುದು. ಶರೀರದ ದಣಿವು ನಿವಾರಣೆಯಾಗಿ ಲವಲವಿಕೆ ಬರುತ್ತದೆ. ಶಾಂತಿ ದೊರಕುತ್ತದೆ. ಮನಸ್ಸನ್ನು ಸ್ಥಿಮಿತದಲ್ಲಿಡುತ್ತದೆ. ಮುದ್ರೆಗಳನ್ನು ಗುರುವಿನ ಮಾರ್ಗದರ್ಶನ, ಸಲಹೆ ಪಡೆದು ಅಭ್ಯಾಸ ಮಾಡಿ.

    ಎಲ್ಲ ಮಹಿಳೆಯರಿಗೂ ಸರ್ಕಾರಿ ಬಸ್​ನಲ್ಲಿ ಉಚಿತ ಪ್ರಯಾಣ; ಆದೇಶವೂ ಜಾರಿ, ನಿಯಮಗಳು ಏನೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts