More

    ಮೌಲ್ಯ ರೂಪಿಸುವುದೇ ನಿಜವಾದ ಶಿಕ್ಷಣ

    ಚನ್ನಮ್ಮನ ಕಿತ್ತೂರು: ನಮ್ಮಲ್ಲಿ ಜೀವನ ಮೌಲ್ಯಗಳನ್ನು ರೂಪಿಸುವುದು ಶಿಕ್ಷಣವಾಗಿದೆ ಎಂದು ಕವಿವಿ ಧಾರವಾಡದ ಬಸವೇಶ್ವರ ಪೀಠದ ಸಂಯೋಜಕ ಡಾ. ಚಂದ್ರಶೇಖರ ಕುಂದಗೋಳ ಹೇಳಿದರು.

    ಸ್ಥಳೀಯ ಕಿನಾವಿವ ಸಂಘದ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಐ.ಕ್ಯೂ.ಎ.ಸಿ, ವಿದ್ಯಾರ್ಥಿ ಒಕ್ಕೂಟ, ಕ್ರೀಡಾ ಚಟುವಟಿಕೆ ಹಾಗೂ ಇತರ ವಿಭಾಗಗಳನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ಮನಸ್ಸಿನ ಮಾಲಿನ್ಯ ತೊಳೆದುಕೊಂಡು ಅಂತರಂಗ ಶುದ್ಧಿ ಮಾಡಿಕೊಳ್ಳುವುದು ಮುಖ್ಯವಾಗಿದೆ ಎಂದರು. ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಈಜುಪಟು ರಾಘವೇಂದ್ರ ಅನ್ವೇಕರ ಮಾತನಾಡಿ, ನಮ್ಮಲ್ಲಿ ಸಾಧಿಸುವ ಛಲ ಇರಬೇಕು ಎಂದರು. ಅಧ್ಯಕ್ಷತೆವಹಿಸಿ ಮಾತನಾಡಿದ ಕಿನಾವಿವ ಸಂಘದ ಚೇರ್ಮನ್ ಜಗದೀಶ ವಸ್ತ್ರದ ಮಾತನಾಡಿ, ನಮ್ಮ ಸಂಸ್ಥೆಯು ಗ್ರಾಮೀಣ ಭಾಗದಲ್ಲಿ ಶಿಕ್ಷಣವನ್ನು ಉಣಬಡಿಸುತ್ತ ದಶಕಗಳಿಂದ ಕಾರ್ಯನಿರ್ವಹಿಸುತ್ತಿದೆ. ವಿದ್ಯಾರ್ಥಿಗಳು ಸಮಾಜದಲ್ಲಿ ಆದರ್ಶ ನಾಗರಿಕರಾಗಿ ಬದುಕಬೇಕು ಎಂದರು.

    ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರಾಚಾರ್ಯ ಗಿರಿಧರ ಗಣಾಚಾರಿ, ಪ್ರವೀಣ ಗಿರಿ, ಡಾ. ಸಂಗೀತಾ ತೋಲಗಿ, ಚೈತ್ರಾ ಪಠಾಣೆ, ದೀಪಾ ಪರವಣ್ಣವರ, ಶೃತಿ ಹೊಸಮನಿ, ಉಮಾಶ್ರೀ ಆಳ್ನಾವರ, ಪ್ರೊ. ಪ್ರಿಯಾಂಕಾ ದಾಮೋಣೆ, ಪ್ರೊ. ಆನಂದ ಕರೆಪ್ಪನವರ ಅವರನ್ನು ಸನ್ಮಾನಿಸಲಾಯಿತು. ಸಂಘದ ನಿರ್ದೇಶಕರಾದ ಡಿ.ಎಲ್.ಪಾಟೀಲ, ವಿ.ಆರ್. ಪಾಟೀಲ, ಅಕ್ಷತಾ ಮಾಟೊಳ್ಳಿ, ವೈಷ್ಣವಿ ದೇಗಾವಿ, ವಿದ್ಯಾರ್ಥಿನಿ ಪ್ರತಿನಿಧಿ ತೇಜಸ್ವಿನಿ ಮೆಟ್ಟಿನ, ಪ್ರೊ. ಎಚ್.ಕೆ.ನಾಗರಾಜ, ಪ್ರಾಚಾರ್ಯ ಡಾ.ಜಿ.ಕೆ.ಭೂಂನಗೌಡರ, ಡಾ.ಕೆ.ಆರ್.ಮೆಳವಂಕಿ, ಪ್ರೊ. ಸಿ.ಎಂ.ಗರಗದ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts