More

    ವಾಲಿಕಿಲ್ಲಾ ಮ್ಯಾಗೋಟದ ದುರ್ಗಾದೇವಿ ದೇವಾಲಯದಲ್ಲಿ ಸಾಪ್ತಾಹಿಕ ಧಾರ್ಮಿಕ ಕಾರ್ಯಕ್ರಮ ಸಂಪನ್ನ

    ಗಂಗಾವತಿ: ತಾಲೂಕಿನ ವಾಲಿಕಿಲ್ಲಾ ಮ್ಯಾಗೋಟದ ಶ್ರೀ ಆದಿಶಕ್ತಿ ದುರ್ಗಾದೇವಿ ದೇವಾಲಯದಲ್ಲಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಸಮಾರೋಪ ನಿಮಿತ್ತ ಶನಿವಾರ ಕುಂಭಾಭಿಷೇಕ ಮತ್ತು ಮಹಾಚಂಡಿಯಾಗ ಜರುಗಿದವು.


    ಐತಿಹಾಸಿಕ ಪ್ರಸಿದ್ಧ ದೇವಾಲಯ ನವೀಕರಿಸಲಾಗುತ್ತಿದ್ದು, ಮೊದಲ ಭಾಗವಾಗಿ ಗರ್ಭಗುಡಿ ಪೂರ್ಣಗೊಂಡಿದೆ. ಮೂರ್ತಿ ಪ್ರಾಣ ಪ್ರತಿಷ್ಠಾಪನೆಗಾಗಿ ಸಾಪ್ತಾಹಿಕ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಅನೆಗೊಂದಿ ಚಿಂತಾಮಣಿ ಬಳಿ ತುಂಗಭದ್ರಾ ನದಿಯಿಂದ 108 ಕುಂಭ ಮೆರವಣಿಗೆಯೊಂದಿಗೆ ಜಲಾಭಿಷೇಕ, ತುಂಗಾರತಿ ನಡೆಯಿತು. ಮೂರ್ತಿಗೆ ಅಭಿಷೇಕ, ಕುಂಕುಮಾರ್ಚನೆ, ಹೂವಿನ ಅಲಂಕಾರ, ಲಲಿತ ಸಹಸ್ರನಾಮ ಪಾರಾಯಣ, ಮಹಾಮಂಗಳಾರತಿ, ಮಹಾಚಂಡಿಯಾಗ ಮತ್ತು ಪೂರ್ಣಾಹುತಿ ನೆರವೇರಿಸಲಾಯಿತು.

    ದೇವಾಲಯದ ಮುಖ್ಯಸ್ಥ ಬ್ರಹ್ಮಾನಂದಯ್ಯ ಸ್ವಾಮೀಜಿ ಮಾತನಾಡಿ, ಪುರಾತನ ಕಾಲದ ದೇವಾಲಯ ಜೀರ್ಣೋದ್ಧಾರ ಕೈಗೆತ್ತಿಕೊಳ್ಳಲಾಗಿದ್ದು, ನವರಾತ್ರಿಯೊಳಗೆ ಎಲ್ಲ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು. ರಾಜವಂಶಸ್ಥ ರಾಜಾ ಶ್ರೀಕೃಷ್ಣದೇವರಾಯ, ನಯೋಪ್ರಾ ಅಧ್ಯಕ್ಷ ಎಸ್.ರಾಘವೇಂದ್ರ ಶ್ರೇಷ್ಟಿ, ದೇವಾಲಯ ಆಡಳಿತಾಧಿಕಾರಿ ರಾಜಣ್ಣಸ್ವಾಮಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts