More

    ನಟಭಯಂಕರ ಇನ್ನೂ ಜೀವಂತ!

    ಬದುಕಿದ್ದರೆ ಇಂದಿಗೆ 76 ತುಂಬಿ 77ನೇ ವಯಸ್ಸಿಗೆ ಕಾಲಿಡುತ್ತಿದ್ದರು ‘ನಟ ಭಯಂಕರ’ ವಜ್ರಮುನಿ. ಅವರ ಹುಟ್ಟುಹಬ್ಬಕ್ಕೆ ಸಾವಿರಾರು ಜನ ಹಾರೈಸುತ್ತಿದ್ದರು. ಅವರ ಚಿತ್ರಗಳ ಬಗ್ಗೆ, ಅಭಿನಯದ ಬಗ್ಗೆ, ವ್ಯಕ್ತಿತ್ವದ ಬಗ್ಗೆ ಮನದುಂಬಿ ಮಾತನಾಡುತ್ತಿದ್ದರು. ಆದರೆ, ವಜ್ರಮುನಿ ಇಂದು ದೈಹಿಕವಾಗಿ ನಮ್ಮೊಡನೆ ಇಲ್ಲ. ಅವರ ನೆನಪು ಮಾತ್ರ ಸದಾ ಕಾಡುತ್ತಲೇ ಇರುತ್ತದೆ.

    ಚೇತನ್ ನಾಡಿಗೇರ್

    ಅವರ ಅಭಿನಯ ನಿಂತು ಎರಡು ದಶಕಗಳಾಗಿವೆ. ಅವರು ನಿಧನರಾಗಿಯೇ 14 ವರ್ಷಗಳಾಗಿವೆ. ಅಷ್ಟಾದರೂ, ವಜ್ರಮುನಿ ಇಂದಿಗೂ ಯಾಕೆ ನೆನಪಾಗುತ್ತಾರೆ? ಉತ್ತರ ಅಷ್ಟೇನೂ ಕಷ್ಟವಲ್ಲ. ಅವರು ಮಾಡಿದ ಪಾತ್ರಗಳು ಮತ್ತು ಅವರ ಅಭಿನಯವೇ ಇನ್ನೂ ಅವರನ್ನು ಜನರ ಮನಸ್ಸಿನಲ್ಲಿ ಹಸಿರಾಗಿಸಿದೆ. ಇದರ ಜತೆಗೆ ಇನ್ನೂ ಒಂದು ಮಹತ್ವದ ಕಾರಣವಿದೆ. ಪ್ರಮುಖವಾಗಿ ವಜ್ರಮುನಿ ಅವರಿಗಿಂಥ ಮುನ್ನ ಮತ್ತು ಅವರ ನಂತರ, ಅಂಥ ಒಬ್ಬ ಖಳನಾಯಕನ ಪಾತ್ರ ಮಾಡುವವರು ಮತ್ತು ಅಂತಹ ಪಾತ್ರಗಳಿಂದಲೇ ಜನರ ನೆನಪಿನಲ್ಲಿ ಶಾಶ್ವತವಾಗಿ ದಾಖಲಾದವರು ಕನ್ನಡ ಚಿತ್ರರಂಗಕ್ಕೆ ಸಿಗಲೇ ಇಲ್ಲ.

    ಇದನ್ನೂ ಓದಿ: ಅಮ್ಮಂದಿರ ದಿನದ ಸ್ಪೆಶಲ್​: ಬಾಲಿವುಡ್​ ತಾಯಂದಿರ ಸಂಭ್ರಮ ನೋಡಿ!

    60ರ ದಶಕದ ಕೊನೆಗೆ, ಕನ್ನಡ ಚಿತ್ರರಂಗದಲ್ಲಿ ಬೆರಳಣಿಕೆಯಷ್ಟು ಕಲಾವಿದರು ನೆಗೆಟಿವ್ ಪಾತ್ರಗಳನ್ನು ಮಾಡುತ್ತಿದ್ದರು. ಹಾಗಿರುವಾಗಲೇ ‘ಸಾವಿರ ಮೆಟ್ಟಿಲು’ ಚಿತ್ರದ ಮೂಲಕ ವಜ್ರಮುನಿ ಎಂಬ ಹೊಸ ನಟನನ್ನು ಪರಿಚಯಿಸಿದರು ಪುಟ್ಟಣ್ಣ ಕಣಗಾಲ್. ಹಾಗೆ ಪರಿಚಯಿಸುವುದಕ್ಕೆ ಕಾರಣವಾಗಿದ್ದು ‘ಪ್ರಚಂಡ ರಾವಣ’ ಎಂಬ ನಾಟಕ ಎಂಬುದು ಎಲ್ಲರಿಗೂ ಗೊತ್ತೇ ಇದೆ. ತಮ್ಮ ಅಣ್ಣ ಕಣಗಾಲ್ ಪ್ರಭಾಕರ ಶಾಸ್ತ್ರಿ ವಿರಚಿತ ‘ಪ್ರಚಂಡ ರಾವಣ’ ನಾಟಕದಲ್ಲಿ ವಜ್ರಮುನಿ ಅವರು ರಾವಣನ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸುವುದನ್ನು ನೋಡಿದ ಪುಟ್ಟಣ್ಣ, ‘ಸಾವಿರ ಮೆಟ್ಟಿಲು’ ಚಿತ್ರದ ಮೂಲಕ ಪರಿಚಯಿಸಬೇಕೆಂದು ತೀರ್ವನಿಸಿದರಂತೆ.

    ನಟಭಯಂಕರ ಇನ್ನೂ ಜೀವಂತ!ಅದರಂತೆ, ಆ ಚಿತ್ರದ ಮೂಲಕ ವಜ್ರಮುನಿ ಮೊದಲ ಬಾರಿಗೆ ಕ್ಯಾಮೆರಾ ಎದುರಿಸಿದರೂ, ಆ ಚಿತ್ರ ಕಾರಣಾಂತರಗಳಿಂದ ನಿಂತು ಹೋಯಿತು. ‘ಪ್ರಥಮ ಚುಂಬನಂ ದಂತ ಭಗ್ನಂ’ ಎಂಬ ಮಾತಿನಂತೆ, ತಮ್ಮ ಮೊದಲ ಚಿತ್ರವೇ ನಿಂತು ಹೋದ ಬೇಸರದಲ್ಲಿದ್ದ ವಜ್ರಮುನಿ ಅವರಿಗೆ ಎರಡನೇ ಅವಕಾಶ ನೀಡಿದ್ದು ಮತ್ತದೇ ಪುಟ್ಟಣ್ಣ ಕಣಗಾಲ್. ಡಾ. ರಾಜಕುಮಾರ್ ಅಭಿನಯದ ‘ಮಲ್ಲಮ್ಮನ ಪವಾಡ’ ಚಿತ್ರವನ್ನು ಕೈಗೆತ್ತಿಕೊಂಡಿದ್ದ ಪುಟ್ಟಣ್ಣ, ಚಿತ್ರದಲ್ಲಿನ ದುಷ್ಟ ತಮ್ಮನ ಪಾತ್ರಕ್ಕೆ ಆಯ್ಕೆ ಮಾಡಿದ್ದು ವಜ್ರಮುನಿ ಅವರನ್ನ. ಮೂಲ ಚಿತ್ರದಲ್ಲಿ ಶಿವಾಜಿ ಗಣೇಶನ್ ಆ ಪಾತ್ರವನ್ನು ಮಾಡಿದ್ದರು. ಅಂಥ ತೂಕದ ಪಾತ್ರವನ್ನು ಹೊಸಬರಿಂದ ಮಾಡಿಸುವುದು ಎಷ್ಟು ಸರಿ ಎಂದು ಹಲವರು ಪ್ರಶ್ನಿಸಿದ್ದರಂತೆ. ಆದರೆ, ಪುಟ್ಟಣ್ಣ ಕಣಗಾಲ್ ಮಾತ್ರ ಆ ಪಾತ್ರಕ್ಕೆ ವಜ್ರಮುನಿ ಅವರೇ ಸರಿ ಎಂದು ಹಠ ಹಿಡಿದು ಅವಕಾಶ ಕೊಟ್ಟರಂತೆ.

    ಆ ನಂತರ ನಡೆದಿದ್ದೆಲ್ಲಾ ಇತಿಹಾಸ. ವಜ್ರಮುನಿ ಅವರ ಅಭಿನಯ ಅದೆಷ್ಟು ಸೂಪರ್ ಹಿಟ್ ಆಯಿತು ಎಂದರೆ, ಅಲ್ಲಿಂದ ಅವರಿಗೆ ಸಾಕಷ್ಟು ಚಿತ್ರಗಳಲ್ಲಿ ವಿಲನ್ ಪಾತ್ರ ಮಾಡುವ ಅವಕಾಶಗಳು ಸಿಕ್ಕವು. ‘ಸಿಪಾಯಿ ರಾಮು’, ‘ಸಂಪತ್ತಿಗೆ ಸವಾಲ್’ ‘ಮಯೂರ’, ‘ಬಹದ್ದೂರ್ ಗಂಡು’, ‘ಗಿರಿ ಕನ್ಯೆ’, ‘ಕಳ್ಳ ಕುಳ್ಳ’, ‘ಅಂತ’, ‘ಅಪೂರ್ವ ಸಂಗಮ’ ಮುಂತಾದ ಹಲವು ಚಿತ್ರಗಳಲ್ಲಿ ಅವರ ಅಭಿನಯ ಸಾಕಷ್ಟು ಮೆಚ್ಚುಗೆ ಪಡೆಯಿತು. ಅವರ ಧ್ವನಿ, ಡೈಲಾಗ್ ಹೇಳುವ ಶೈಲಿ, ಒರಟಾದ ಮುಖ, ತೀಕ್ಷ್ಣ ಕಣ್ಣುಗಳು ಅವರಿಗೆ ಪ್ಲಸ್ ಆಗಿ, ಬೇಡಿಕೆ ಹೆಚ್ಚಿಸಿದವು. ಈ ವೈಶಿಷ್ಟ್ಯಗಳೇ, ಜನ ಅವರನ್ನು ‘ನಟ ಭೈರವ’ ಮತ್ತು ‘ನಟ ಭಯಂಕರ’ ಎಂಬ ಬಿರುದುಗಳಿಂದ ಗುರುತಿಸುವಂತೆ ಮಾಡಿದವು.

    ಇದನ್ನೂ ಓದಿ: ವಿಜಯ್​ ದೇವರಕೊಂಡ ಬರ್ತ್​ಡೇ: ಕಾಮ್ರೆಡ್​ ಕ್ರಷ್​ಗೆ ರಶ್ಮಿಕಾ ಮಂದಣ್ಣ ವಿಶ್​ ಹೇಗಿದೆ ನೋಡಿ!!

    ನಟಭಯಂಕರ ಇನ್ನೂ ಜೀವಂತ!ಹಾಗೆ ನೋಡಿದರೆ, ಕನ್ನಡ ಚಿತ್ರರಂಗದಲ್ಲಿ ವಿಲನ್ ಪಾತ್ರಗಳಿಗೆ ಸ್ಟಾರ್ ಸ್ಟೇಟಸ್ ತಂದುಕೊಟ್ಟ ನಟ ಎಂದರೆ, ಅದು ವಜ್ರಮುನಿ. ಅವರು ತಮ್ಮ ಪಾತ್ರಗಳು ಮತ್ತು ಅಭಿನಯದ ಮೂಲಕ ಹಲವರಿಗೆ ಸ್ಪೂರ್ತಿಯಾದರು. ಅವರನ್ನು ನೋಡಿ ಹಲವು ಮಂದಿ ನೆಗೆಟಿವ್ ಪಾತ್ರ ಮಾಡುವುದಕ್ಕೆ ಮುಂದೆ ಬಂದರು. 60ರ ದಶಕದಲ್ಲಿ ಬೆರಳಣಿಕೆಯಷ್ಟು ಇದ್ದ ವಿಲನ್ ಪಾತ್ರಧಾರಿಗಳ ಸಂಖ್ಯೆ, 70ರ ದಶಕದಲ್ಲಿ ವೃದ್ದಿಯಾಯಿತು. ಒಂದು ಚಿತ್ರದಲ್ಲಿ ಮೂರೂ, ನಾಲ್ಕು ಖಳನಾಯಕರಿರುವಷ್ಟು ಈ ಪರಂಪರೆ ಜನಪ್ರಿಯವಾಯಿತು. ಸಂಖ್ಯೆ ಎಷ್ಟೇ ಹೆಚ್ಚಾದರೂ, ಅವರ ಮುಂಚೂಣಿಯಲ್ಲಿ ನಿಂತರು ವಜ್ರಮುನಿ. ನಟರಾಗಿ ಸಕ್ರಿಯರಾಗಿದ್ದ ಅವರು, ಒಂದು ಹಂತದಲ್ಲಿ ‘ಗಂಡುಭೇರುಂಡ’, ‘ಬ್ರಹ್ಮಾಸ್ತ್ರ’ ಮತ್ತು ‘ತಾಯಿಗಿಂತ ದೇವರಿಲ್ಲ’ ಚಿತ್ರಗಳನ್ನು ನಿರ್ವಿುಸುವ ಮೂಲಕ ನಿರ್ವಪಕರೂ ಆದರು. ನಟನೆ ಮತ್ತು ನಿರ್ವಣದಲ್ಲಿ ಅದೆಷ್ಟೇ ತೊಡಗಿಸಿಕೊಂಡರೂ, ರಾಜಕೀಯದಲ್ಲೂ ಗುರುತಿಸಿಕೊಂಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತರು.

    ಇದನ್ನೂ ಓದಿ: VIDEO|‘ಬೆಲ್​ ಬಾಟಂ’ ಚಿತ್ರದ ಈ ಕಳ್ಳ ವಿಡಿಯೋವನ್ನು ನೀವು ನೋಡಿರಲು ಸಾಧ್ಯವೇ ಇಲ್ಲ!!

    ಹೀಗೆ 25ಕ್ಕೂ ಹೆಚ್ಚು ವರ್ಷಗಳ ಕಾಲ ಕನ್ನಡ ಚಿತ್ರರಂಗದಲ್ಲಿ ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಂಡಿದ್ದ ವಜ್ರಮುನಿ, 90ರ ದಶಕದ ಕೊನೆಯ ಹೊತ್ತಿಗೆ ಅನಾರೋಗ್ಯದಿಂದ ವಿಮುಖರಾದರು. ಅವರು ಕೊನೆಯದಾಗಿ ಬಣ್ಣ ಹಚ್ಚಿದ ಚಿತ್ರ ‘ದಾಯಾದಿ’. ಆದರೆ, ಬಿಡುಗಡೆಯಾದ ಅವರ ಕೊನೆಯ ಚಿತ್ರ ಎಂದರೆ ಅದು ‘ಸಾವಿರ ಮೆಟ್ಟಿಲು’. ವಿಶೇಷವೆಂದರೆ, ಇದೇ ಚಿತ್ರಕ್ಕೆ ಅವರು ಮೊದಲು ಬಣ್ಣ ಹಚ್ಚಿದ್ದು. ಕಾರಣಾಂತರಗಳಿಂದ ಚಿತ್ರ ನಿಂತು ಹೋಗಿ, 38 ವರ್ಷಗಳ ನಂತರ ಚಿತ್ರಕಥೆಯಲ್ಲಿ ಹಲವು ಮಾರ್ಪಾಡುಗಳೊಂದಿಗೆ ಬಿಡುಗಡೆಯಾಯಿತು. ಚಿತ್ರದ ಫ್ಲಾಶ್​ಬ್ಯಾಕ್ ಭಾಗದಲ್ಲಿ ವಜ್ರಮುನಿ ಅವರನ್ನು ನೋಡಬಹುದು. ಬಹುಶಃ ಒಬ್ಬ ನಟ ಬಣ್ಣ ಹಚ್ಚಿದ ಮೊದಲ ಚಿತ್ರವೇ, ಅವರ ಚಿತ್ರವಾಗಿ ಜೀವನದ ಕೊನೆಯ ಚಿತ್ರ ಬಿಡುಗಡೆ ಆದ ಉದಾಹರಣೆ ಇನ್ನೆಲ್ಲೂ ಸಿಗಲ್ಲ.

    ಫಾರ್ಮ್​ಹೌಸ್​ನಲ್ಲಿ ಇಬ್ಬರು ಗರ್ಲ್​ ಫ್ರೆಂಡ್ಸ್​ ಜತೆ ಏನ್ಮಾಡ್ತಿದ್ದಾರೆ ಸಲ್ಮಾನ್​?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts