More

    ಪ್ರಥಮ್ ಹುಡುಗರು ಬೀದರ್‌ನಲ್ಲಿ ಏನು ಮಾಡಿದ್ದಾರೆ ಗೊತ್ತಾ?

    ಕರೊನಾ ಕಾಟದಿಂದ ದೇಶವೇ ಲಾಕ್‌ಡೌನ್ ಆಗಿದೆ. ಅಗತ್ಯವಿರುವವರಿಗೆ ಎಲ್ಲರೂ ತಮ್ಮ ಕೈಲಾದ ಸಹಾಯ ಮಾಡುತ್ತಲೇ ಇದ್ದಾರೆ. ಪ್ರಥಮ್ ಸಹ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಈಗಾಗಲೇ ಅವರು ‘ನಟಭಯಂಕರ’ ಚಿತ್ರದ ನಿರ್ಮಾಪಕ ನೀಲೇಶ್ ಅವರ ಜತೆಗೆ ಸೇರಿ ತುಮಕೂರಿನಲ್ಲಿ ಅಗತ್ಯವಿರವವರಿಗೆ ದಿನಸಿ ಮತ್ತು ತರಕಾರಿಯನ್ನು ಉಚಿತವಾಗಿ ಹಂಚಿದ್ದಾರೆ.

    ಈ ಮಧ್ಯೆ ಪ್ರಥಮ್ ಅವರ ಅಭಿಮಾನಿಗಳು ದೂರದ ಬೀದರ್‌ಗೆ ಹೋಗಿ, ಅಲ್ಲಿ ಹಲವರಿಗೆ ಸಹಾಯ ಮಾಡಿ ಬಂದಿದ್ದಾರೆ. ಈ ಕುರಿತು ಮಾತನಾಡುವ ಅವರು, ‘ಮಾರ್ಕ್ ಮತ್ತು ಹುಡುಗರು, 20 ಟೂವೀಲ್ಹರ್‌ಗಳಲ್ಲಿ ಬೆಂಗಳೂರಿನಿಂದ ಬೀದರ್‌ಗೆ ಹೋಗಿದ್ದಾರೆ. ಬೀದರ್‌ನಲ್ಲಿ ಬರೀ ಲಾಕ್‌ಡೌನ್ ಅಷ್ಟೇ ಅಲ್ಲ. ಇಡೀ ನಗರವನ್ನ ಸಂಪೂರ್ಣವಾಗಿ ಸೀಲ್‌ಡೌನ್ ಮಾಡಿದ್ದಾರೆ. ಆದರೂ ಅಷ್ಟು ದೂರ ಹೋದ ಅಭಿಮಾನಿಗಳು, ಅಲ್ಲಿ ಹಲವರಿಗೆ ಊಟ, ರೇಶನ್ ಕೊಟ್ಟು ಬಂದಿದ್ದಾರೆ. ಪ್ರತಿ ದಿನ 250ಕ್ಕೂ ಹೆಚ್ಚು ಜನರಿಗೆ ಸಹಾಯ ಮಾಡಿದ್ದಾರೆ’ ಎನ್ನುತ್ತಾರೆ ಪ್ರಥಮ್.

    ಈ ಮಧ್ಯೆ ಅವರಿಗೆ ಹಲವರು ನೆರವು ನೀಡುತ್ತಿದ್ದು, ಇತ್ತೀಚೆಗೆ ಬಾಲಚಂದ್ರ ಜಾರಕಿಹೊಳಿ ಮಗ ಭೀಮಶೀ ಫೋನ್ ಮಾಡಿ ಒಂದಿಷ್ಟು ಹಣ ನೀಡಿದ್ದಾರೆ. ‘ಇನ್ನು ನನ್ನ ವಾಟ್ಸಪ್ ಸ್ಟೇಟಸ್ ನೋಡಿ, ಭೀಮಿಶೀ ಹಣ ಕೊಡುವುದಾಗಿ ಫೋನ್ ಮಾಡಿದ್ದರು. ಅವರು ಇನ್ನೂ ಇಂಜಿನಿಯರಿಂಗ್ ಓದುತ್ತಿದ್ದಾರೆ. ತಮ್ಮ ಪಾಕೆಟ್ ಮನಿಯಿಂದ ಹಣ ಉಳಿಸಿ, 30 ಸಾವಿರ ಕೊಟ್ಟಿದ್ದಾರೆ. ಇನ್ನು ಸಚಿವ ಎಸ್.ಟಿ. ಸೋಮಶೇಖರ್ ಅವರಿಗೆ ಫೋನ್ ಮಾಡಿದ್ದೆ. ಅವರು ಅಗತ್ಯವಿರುವವರಿಗೆ 75 ಕಿಟ್‌ಗಳನ್ನು ಕಳಿಸಿಕೊಟ್ಟಿದ್ದಾರೆ. ಇದನ್ನು ಸದ್ಯದಲ್ಲೇ ಚಲನಚಿತ್ರ ಕಾರ್ಮಿಕರು ಮತ್ತು ಕಲಾವಿದರಿಗೆ ಹಂಚಲಿದ್ದೇನೆ.

    ಮಲಯಾಳಂನ ಸೂಪರ್​ ಹಿಟ್ ‘ಹೆಲನ್​‘ ಚಿತ್ರದ ತೆಲುಗು ರಿಮೇಕ್​ನಲ್ಲಿ ನಟಿಸ್ತಾರಾ ಅನುಪಮಾ ಪರಮೇಶ್ವರನ್​?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts