More

    ಕೋವಿಶೀಲ್ಡ್​ ಲಸಿಕೆ ತಯಾರಕ ಉದ್ಯಮಿ ಲಂಡನ್​ನಲ್ಲಿ ಖರೀದಿಸುತ್ತಿರುವ ಮನೆಯ ಬೆಲೆ ಎಷ್ಟು ಗೊತ್ತೇ?

    ನವದೆಹಲಿ: ಕೋವಿಶೀಲ್ಡ್​ ಲಸಿಕೆ ಗೊತ್ತಿಲ್ಲವೇ? ಎರಡು ವರ್ಷಗಳ ಕಾಲ ಭಾರತ ಸೇರಿದಂತೆ ಜಗತ್ತನ್ನು ಕಾಡಿದ್ದ ಕೋವಿಡ್ ಹೆಮ್ಮಾರಿ ನಿಯಂತ್ರಿಸುವ ಭಾರತೀಯ ಲಸಿಕೆ ಇದು. ಈ ಲಸಿಕೆ ತಯಾರಿಸುವ ಭಾರತದ ಔಷಧ ಉದ್ಯಮಿ ಈಗ ಬ್ರಿಟನ್​ ರಾಜಧಾನಿ ಲಂಡನ್​ನಲ್ಲಿ ಮನೆಯೊಂದನ್ನು ಖರೀದಿಸಲು ಮುಂದಾಗಿದ್ದಾರೆ. ಈ ಮನೆ ಖರೀದಿಗೆ ಅವರು ನೀಡುತ್ತಿರುವ ಹಣ ಎಷ್ಟು ಗೊತ್ತೇ?

    ಬರೋಬ್ಬರಿ 1446 ಕೋಟಿ ರೂಪಾಯಿ.

    ಲಸಿಕೆ ತಯಾರಕರಾದ ಅದರ್ ಪೂನಾವಾಲಾ ಅವರೇ ಲಂಡನ್‌ನ ಅತ್ಯಂತ ದುಬಾರಿ ಮನೆಯನ್ನು 1446 ಕೋಟಿ ರೂಪಾಯಿಗೆ ಖರೀದಿಸಲಿದ್ದಾರೆ. ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್​ಐಐ) ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಆಗಿರುವ ಅದರ್ ಪೂನಾವಾಲಾ ಅವರು ಈ ವರ್ಷದಲ್ಲೇ ಈ ಐಷಾರಾಮಿ ಮನೆ ಖರೀದಿಸುತ್ತಿದ್ದಾರೆ.

    ಕೋವಿಶೀಲ್ಡ್ ಲಸಿಕೆ ತಯಾರಿಸುವ 42 ವರ್ಷದ ಭಾರತೀಯ ಉದ್ಯಮಿ ಅದರ್​ 25,000 ಚದರ ಅಡಿಯ ಈ ಮಹಲಿನ ಒಪ್ಪಂದವನ್ನು 13 ಕೋಟಿ ಪೌಂಡ್​ಗೆ ಮಾಡಿಕೊಂಡಿದ್ದಾರೆ. ಪೊಲೆಂಡಿನ ದಿವಂಗತ ಉದ್ಯಮಿ ಜಾನ್ ಕುಲ್ಸ್​ಜಿಕ್​ ಅವರ ಮಗಳು ಡೊಮಿನಿಕಾ ಕುಲ್ಸ್​ಜಿಕ್​ ಅವರೊಂದಿಗೆ ಮನೆ ಖರೀದಿ ಒಪ್ಪಂದಕ್ಕೆ ಬಂದಿದ್ದಾರೆ.

    1920ರ ದಶಕದಲ್ಲಿ ನಿರ್ಮಾಣ ಮಾಡಲಾದ ಅರಮನೆ ಇದಾಗಿದೆ. ಅಬರ್ಕಾನ್​ವೇ ಹೌಸ್ ಈ ಮಹಲಿನ ಹೆಸರು. ಬ್ರಿಟನ್​ಗೆ ತೆರಳಿದ ಸಂದರ್ಭದಲ್ಲಿ ಈ ಮನೆಯು ಅದರ್ ಅವರ ಕುಟುಂಬ ಹಾಗೂ ಕಂಪನಿಯ ಅಧಿಕಾರಿಗಳ ಬಳಕೆ ಬರಲಿದೆ ಎನ್ನಲಾಗಿದೆ.

    ಹೈಡ್ ಪಾರ್ಕ್ ಬಳಿಯ ಬೆಲೆಬಾಳುವ ಮೇಫೇರ್ ಪ್ರದೇಶದಲ್ಲಿರುವ ಈ ಆಸ್ತಿಯನ್ನು ಪೂನಾವಾಲಾ ಕುಟುಂಬ ನಡೆಸುವ ಎಸ್​ಐಐ ಕಂಪನಿಯ ಬ್ರಿಟನ್​ ಅಂಗಸಂಸ್ಥೆಯಾದ ಸೀರಮ್ ಲೈಫ್ ಸೈನ್ಸಸ್ ಸ್ವಾಧೀನಪಡಿಸಿಕೊಳ್ಳಲಿದೆ.
    .
    2020ರಲ್ಲಿ 21 ಕೋಟಿ ಪೌಂಡ್​ಗೆ ಮಾರಾಟ ಮಾಡಲಾದ 2-8a ರಟ್‌ಲ್ಯಾಂಡ್ ನಿವಾಸದ ನಂತರ ಮಾರಾಟಗೊಳ್ಳುತ್ತಿರುವ ಎರಡನೇ ಅತಿದುಬಾರಿ ಮನೆ ಇದಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts