More

    ರೈತರ ಬದುಕಿನ ಮೇಲೆ ಕಲ್ಲು ಚಪ್ಪಡಿ: ಉಗ್ರಪ್ಪ ಆರೋಪ

    ಚಿತ್ರದುರ್ಗ: ಆಧುನಿಕ ಭಸ್ಮಾರನಂತೆ ವರ್ತಿಸುತ್ತಿರುವ ನರೇಂದ್ರ ಮೋದಿ ಸರ್ಕಾರ,ರೈತ ವಿರೋಧಿ ಕಾನೂನುಗಳ ಜಾರಿ ಮೂಲಕ ರೈತ ರ ಬದುಕಿನ ಮೇಲೆ ಚಪ್ಪಡಿ ಕಲ್ಲು ಎಳೆಯುತ್ತಿದೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆಪಾದಿಸಿದರು. ಗುರುವಾರ ಸುದ್ದಿ ಗೋಷ್ಠಿಯ ಲ್ಲಿ ಮಾತನಾಡಿ,ಕೋವಿಡ್‌ನ ಸಂಕಷ್ಟ ಸಮಯವನ್ನು ದುರುಪಯೋಗ ಪಡಿಸಿಕೊಂಡು,ಯಾವುದೇ ಚರ್ಚೆಮಾಡದೇ ಬಹುಮತ ಇದೆ ಎಂಬ ಒಂದೇ ಕಾರಣಕ್ಕೆ ಕಾಯ್ದೆಗಳನ್ನು ಜಾರಿಗೊಳಿಸುವ ಮೂಲಕ ಗ್ರಾಮೀಣ ಭಾರತದ ನಾಶಕ್ಕೆ ಮುಂದಾಗಿದೆ.

    ಅಂಬಾನಿ,ಆದಾನಿ ನಿರ್ದೇಶನದಂತೆ ಕೇಂದ್ರ ಸರ್ಕಾರ ನಡೆಯುತ್ತಿದೆ. ನಿಜಕ್ಕೂ ಕಾಯ್ದೆಗಳು ಜನಪರವಾಗಿವೇ ಎಂದಾದರೆ ಸಂಸತ್ತಿನ ವಿಶೇಷ ಅಧಿವೇಶನ ಕರೆದು ಕಾಯ್ದೆಗಳ ಕುರಿತಂತೆ ಕೇಂದ್ರ ವಿಸ್ತ್ರತವಾಗಿ ಚರ್ಚಿಸ ಬೇಕೆಂದರು. ಮೋದಿ ಅವರಂತೆ ಮುಖ್ಯಮಂತ್ರಿ ಯ ಡಿಯೂರಪ್ಪ ಕೂಡ ಜನವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸುತ್ತಿದ್ದಾರೆ. ಭೂ ಸುಧಾರಣೆ ಕಾಯ್ದೆಯಿಂದ ಕೃಷಿ ಸಂಪೂರ್ಣ ನಾಶವಾಗಲಿದೆ. ಗೋಹತ್ಯೆ ನಿಷೇಧ ಕಾಯ್ದೆ ವೃತ್ತಿ ಮತ್ತು ಆಹಾರ ಹಕ್ಕಿನ ಉಲ್ಲಂಘನೆಯಾಗಿದೆ.

    ಯಡಿಯೂರಪ್ಪ ಹಾಗೂ ಮೋದಿ ಅವರಿಗೆ ಧಂ ಇದ್ದರೆ ಬೀಫ್ ರಫ್ತನ್ನು ನಿಷೇಧಿಸಲಿ. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಬೆಳಗ್ಗೆ ಒಂದು,ರಾತ್ರಿ ಒಂದು ನಿಲುವು ಪ್ರದರ್ಶಿಸುತ್ತಿದ್ದಾರೆ. ಅವರ ಹತಾಶೆಯಿಂದ ಅಥವಾ ಬಿಜೆಪಿ ಪ್ರಭಾವಕ್ಕೆ ಒಳಗಾಗಿ ಮಾತನಾ ಡುತ್ತಿದ್ದಾರೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts