More

    ಭುಜದ ಸ್ನಾಯುಗಳನ್ನು ಬಲಪಡಿಸುವ ಉತ್ಥಾನ ಮಂಡೂಕಾಸನ (ನೆಟ್ಟಗೆ ಕಪ್ಪೆ ಭಂಗಿ)

    | ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ
    ಈ ಸರಣಿಯ ಇಂದಿನ ಅಂಕಣದಲ್ಲಿ ಭುಜದ ಸ್ನಾಯುಗಳನ್ನು ಬಲಪಡಿಸುವ ಉತ್ಥಾನ ಮಂಡೂಕಾಸನ (ನೆಟ್ಟಗೆ ಕಪ್ಪೆ ಭಂಗಿ) ಕುರಿತ ವಿವರಣಾತ್ಮಕ ಮಾಹಿತಿಯನ್ನು ನೀಡುತ್ತಿದ್ದೇನೆ. ಸಂಸ್ಕೃತದಲ್ಲಿ ಮಂಡೂಕ ಎಂದರೆ ಕಪ್ಪೆ. ದೇಹವು ನೆಟ್ಟಗೆ ಕಪ್ಪೆಯನ್ನು ಹೋಲುತ್ತದೆ. ಈ ಆಸನದಲ್ಲಿ ಬೆನ್ನು, ಭುಜ, ಕಾಲುಗಳಿಗೆ ಉತ್ತಮ ವ್ಯಾಯಾಮ ಒದಗಿ ಬರುತ್ತದೆ.

    ಅಭ್ಯಾಸ ಕ್ರಮ: ಜಮಖಾನ ಹಾಸಿದ ನೆಲದ ಮೇಲೆ ವಜ್ರಾಸನದಲ್ಲಿ ಕುಳಿತುಕೊಳ್ಳಿ. ಅನಂತರ ಮೊಣಕಾಲುಗಳನ್ನು ವಿಸ್ತರಿಸಿ. ಉಸಿರನ್ನು ತೆಗೆದುಕೊಳ್ಳುತ್ತ ಕೈಗಳನ್ನು ಭುಜದ ಮೇಲೆ ತೆಗೆದುಕೊಂಡು ತಲೆಯ ಹಿಂದೆ ಕೈಗಳನ್ನು ಸೇರಿಸಿ (ಕತ್ತರಿ ಆಕಾರದಲ್ಲಿ). ಈ ಸ್ಥಿತಿಯಲ್ಲಿ ಸಾಮಾನ್ಯ ಉಸಿರಾಟ ಸ್ವಲ್ಪ ಹೊತ್ತು ನಡೆಸಿ. ಆಮೇಲೆ ಸಹಜ ಸ್ಥಿತಿಗೆ ಬನ್ನಿ. ಈ ರೀತಿ ಎರಡು ಬಾರಿ ಅಭ್ಯಾಸ ಮಾಡಿ, ಆದರೆ ಹೆಚ್ಚು ಅಭ್ಯಾಸ ಬೇಡ.

    ಉಪಯೋಗಗಳು: ಬೆನ್ನು ಮೂಳೆಯ ಬಲವರ್ಧನೆಗೆ ಇದು ಸಹಕಾರಿ. ಸ್ವಾದಿಷ್ಠಾನ ಚಕ್ರ ಸಕ್ರಿಯಗೊಳಿಸಲು ಸಹಾಯ ಮಾಡುತ್ತದೆ. ಸೊಂಟ, ಎದೆಗೂಡು, ಗರ್ಭಕಂಠದ ಭಾಗ ಪುನಶ್ಚೇತನಗೊಳ್ಳುತ್ತದೆ. ಶ್ವಾಸಕೋಶದ ಶಕ್ತಿಯನ್ನು ಸುಧಾರಿಸುತ್ತದೆ. ಕಿಬ್ಬೊಟ್ಟೆಯ ಮತ್ತು ಭುಜದ ಸ್ನಾಯುಗಳು ಬಲಗೊಳ್ಳುತ್ತವೆ. ಮೊಣಕಾಲು ಮತ್ತು ಪಾದದ ಕೀಲುಗಳು ಬಲಗೊಳ್ಳುತ್ತವೆ. ಜೀರ್ಣಕಾರಿ ಮತ್ತು ವಿಸರ್ಜನಾ ವ್ಯವಸ್ಥೆಗಳ ಕಾರ್ಯವನ್ನು ಸುಧಾರಿಸುತ್ತದೆ.

    ವಿಶೇಷ ಸೂಚನೆ: ತೀವ್ರ ಸಂಧಿವಾತ, ಹರ್ನಿಯಾ, ಮಂಡಿನೋವು ಇದ್ದವರು ಈ ಆಸನ ಅಭ್ಯಾಸ ಮಾಡುವುದು ಬೇಡ. ಕಾಲಿನ ಹೆಬ್ಬೆರಳುಗಳು ಪರಸ್ಪರ ಸ್ಪರ್ಶಿಸಲಿ.

    ರೇಪ್​ ಮಾಡಿದ್ರು ಅಂತ ಸುಳ್ಳು ಹೇಳಿದ ವಿದ್ಯಾರ್ಥಿನಿ; ಇನ್​ಸ್ಟಾಗ್ರಾಮ್​ನಲ್ಲಿ 5 ಅಕೌಂಟ್​ ಹೊಂದಿದ್ದವಳಿಂದ ಕಟ್ಟುಕತೆ!

    ಇದೊಂದು ರೈಲ್ವೆ ಕ್ರಾಸಿಂಗ್​ನಲ್ಲಿ ಬರೀ ಕಚೋರಿಗಾಗಿ ರೈಲೇ ನಿಂತು ಬಿಡುತ್ತದೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts