ಇದೊಂದು ರೈಲ್ವೆ ಕ್ರಾಸಿಂಗ್​ನಲ್ಲಿ ಬರೀ ಕಚೋರಿಗಾಗಿ ರೈಲೇ ನಿಂತು ಬಿಡುತ್ತದೆ!

ನವದೆಹಲಿ: ಸಾಮಾನ್ಯವಾಗಿ ಒಮ್ಮೆ ಹೊರಟ ರೈಲು ನಿಗದಿತ ಸ್ಟೇಷನ್​ ಬಿಟ್ಟು ಬೇರೆಲ್ಲೂ ನಿಲ್ಲುವುದಿಲ್ಲ. ಅದು ಸಾಗುವ ಹಾದಿಯಲ್ಲಿ ಏನೇ ಎದುರಾದರೂ ಲೆಕ್ಕಿಸದೆ ಹೊಡೆದುಕೊಂಡು ಮುಂದಕ್ಕೆ ಹೋಗಿಬಿಡುತ್ತದೆ. ಆದರೆ ಇಲ್ಲೊಂದು ಕಡೆ ಕಚೋರಿಗೇ ರೈಲನ್ನು ನಿಲ್ಲಿಸುವ ತಾಕತ್ತಿದೆ. ಅಂಥದ್ದೊಂದು ಇದೊಂದು ಪ್ರದೇಶದಲ್ಲಿ ನಿತ್ಯವೂ ಕಾಣಿಸುತ್ತದೆ. ರಾಜಸ್ಥಾನದ ಆಲ್ವಾರ್​ನ ರೈಲ್ವೆ ಕ್ರಾಸಿಂಗ್​ನಲ್ಲಿ ಕಚೋರಿಗಾಗಿಯೇ ರೈಲು ಕ್ರಾಸಿಂಗ್​ನಲ್ಲಿ ನಿಲ್ಲುತ್ತದೆ. ಆಲ್ವಾರ್​ನ ದೌಡ್​ಪುರ್​ ರೈಲ್ವೆ ಕ್ರಾಸಿಂಗ್​ನಲ್ಲಿ ಇಂಥದ್ದೊಂದು ದೃಶ್ಯ ಸಾಮಾನ್ಯವಾಗಿ ಪ್ರತಿ ಮುಂಜಾನೆಯೂ ಕಾಣಸಿಗುತ್ತದೆ. ಈ ರೈಲ್ವೆ ಕ್ರಾಸಿಂಗ್ ಬರುತ್ತಿದ್ದಂತೆ ಎರಡೂ ಕಡೆಯ … Continue reading ಇದೊಂದು ರೈಲ್ವೆ ಕ್ರಾಸಿಂಗ್​ನಲ್ಲಿ ಬರೀ ಕಚೋರಿಗಾಗಿ ರೈಲೇ ನಿಂತು ಬಿಡುತ್ತದೆ!