More

    ಒಂದೇ ರಾತ್ರಿ 2 ಬಾರಿ ಸಂಭೋಗಿಸಲು ನಿರಾಕರಿಸಿದ ಪತ್ನಿಯನ್ನೇ ಕೊಂದು ಹೈಡ್ರಾಮ! ಈತ ಕಟ್ಟಿದ ಕಥೆ ಅಷ್ಟಿಷ್ಟಲ್ಲ

    ಲಕ್ನೋ: ಇಲ್ಲೊಬ್ಬ ಭೂಪ ಒಂದೇ ರಾತ್ರಿ ದಿನ ಎರಡು ಭಾರಿ ಲೈಂಗಿಕ ಸಂಪರ್ಕಕ್ಕೆ ನಿರಾಕರಿಸಿದ ಪತ್ನಿಯನ್ನೇ ಕೊಂದು ಶವವನ್ನ 50 ಕಿ.ಮೀ.ದೂರದಲ್ಲಿ ಎಸೆದು ಪೊಲೀಸರ ಬಳಿ ಹೈಡ್ರಾಮ ಮಾಡಿದ್ದಾನೆ. ವಾರದ ಬಳಿಕ ಇವನ ಅಸಲಿ ಮುಖ ಬಯಲಾಗಿದ್ದು, ಜೈಲು ಸೇರಿದ್ದಾನೆ.

    ಇಂತಹ ದುರ್ಘಟನೆ ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ನಡೆದಿದೆ. ಮೊಹಮ್ಮದ್ ಅನ್ವರ್(35) ಕೊಲೆ ಆರೋಪಿ. 9 ವರ್ಷದ ಹಿಂದೆ ಮೊಹಮ್ಮದ್ ಅನ್ವರ್​ಗೆ ಮದುವೆ ಆಗಿತ್ತು. ದಂಪತಿಗೆ ಮೂರು ಮಕ್ಕಳಿದ್ದಾರೆ. ಸ್ವಂತ ಬೇಕರಿ ನಡೆಸುತ್ತಿದ್ದ ಮೊಹಮ್ಮದ್ ಅನ್ವರ್, ಅಮ್ರೋಹಾ ಜಿಲ್ಲೆಯಲ್ಲಿ ಪತ್ನಿ ಮತ್ತು ಮಕ್ಕಳ ಜತೆ ವಾಸವಿದ್ದ. ಕೆಳಮಹಡಿಯಲ್ಲಿ ಬೇಕರಿ ಇತ್ತು. ಮೊದಲ ಮಹಡಿಯಲ್ಲಿ ಕುಟುಂಬ ವಾಸವಿತ್ತು. ಡಿ.5ರ ರಾತ್ರಿ ಪತ್ನಿ ಜತೆ ಸಂಭೋಗ ಬೆಳೆಸಿದ್ದ. ಅದೇ ರಾತ್ರಿ ಮತ್ತೊಮ್ಮೆ ಲೈಂಗಿಕ ಸಂಪರ್ಕ ಹೊಂದುವ ಬಯಕೆಯನ್ನ ಪತ್ನಿಗೆ ತಿಳಿಸಿದ್ದ. ಇದಕ್ಕೆ ನಿರಾಕರಿಸಿದ ಪತ್ನಿ, ದೇಹಸ್ಥಿತಿ ಉತ್ತಮವಾಗಿಲ್ಲ. ಇವತ್ತಿಗೆ ಸಾಕು ಎಂದಿದ್ದಳು. ಆದರೂ ಪತ್ನಿಯನ್ನ ಪೀಡಿಸಿದ್ದ. ಸಾಧ್ಯವೇ ಇಲ್ಲ ಎಂದ ಪತ್ನಿ ಮೇಲೆ ಕುಪಿತಗೊಂಡ ಪತಿ, ಆಕೆಯ ಕುತ್ತಿಗೆಯನ್ನು ಬಿಗಿದು ಕೊಂದಿದ್ದ.

    ಬಳಿಕ ಪತ್ನಿಯ ಶವವನ್ನು ಮನೆಯಿಂದ 50 ಕಿ.ಮೀ. ದೂರದಲ್ಲಿ ಎಸೆದು ಏನೂ ಗೊತ್ತಿಲ್ಲ ಎಂಬಂತೆ ಪೊಲೀಸ್​ ಠಾಣೆಗೆ ಬಂದು ಪತ್ನಿ ನಾಪತ್ತೆಯಾಗಿದ್ದಾಳೆ ಎಂದು ಕೇಸ್​ ದಾಖಲಿಸಿದ್ದ. ಡಿ.6ರಂದು ಮಹಿಳೆಯೊಬ್ಬರ ಶವ ಠಾಕುರ್ದ್ವಾರದ ರತುಪುರ ಗ್ರಾಮದಲ್ಲಿ ಪತ್ತೆಯಾಗಿತ್ತು. ಗುರುತು ಪತ್ತೆ ಹಚ್ಚಲು ಪೊಲೀಸರು ಸಮೀಪದ ಠಾಣೆಗಳಿಗೆ ಸಂದೇಶ ರವಾನಿಸಿದ್ದರು. ಮಿಸ್ಸಿಂಗ್​​ ಕೇಸ್​ ಬಗ್ಗೆ ತನಿಖೆ ನಡೆಸುವಾಗ ಅಮ್ರೋಹಾ ಜಿಲ್ಲೆಯಲ್ಲಿ ಅನ್ವರ್​ರ ಮತ್ನಿ ನಾಪತ್ತೆ ಕೇಸ್​ ದಾಖಲಾಗಿರುವುದು ಗೊತ್ತಾಯಿತು. ಶವದ ಗುರುತು ಪತ್ತೆ ಹಚ್ಚಲು ಮೊಹಮ್ಮದ್ ಅನ್ವರ್​ನನ್ನು ಕರೆದೊಯ್ದಿದ್ದರು. ಆ ವೇಳೆ ಗೊಂದಲದ ಹೇಳಿಕೆ ಕೊಟ್ಟಿದ್ದ. ಅನುಮಾನಗೊಂಡ ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ ಸತ್ಯ ಬಾಯ್ಬಿಟ್ಟಿದ್ದಾನೆ.(ಏಜೆನ್ಸೀಸ್​)

    ನಟ ಅನಿರುದ್ಧ್​ಗೆ ಮತ್ತೊಮ್ಮೆ ಶಾಕ್​! ಎಸ್​.ನಾರಾಯಣ್​ರ ಮುಂದಿನ ನಡೆ ಏನು? ಇಂದು ಮಧ್ಯಾಹ್ನವೇ ನಿರ್ಧಾರ ಆಗುತ್ತಾ ಭವಿಷ್ಯ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts