More

    ಕೇಕ್​ ಕತ್ತರಿಸಿ ಮಗಳ ಮೊದಲ ಪಿರಿಯಡ್ಸ್​ ಸಂಭ್ರಮಿಸಿದ ಕುಟುಂಬ: ತಂದೆ ಹೇಳಿದ ಮಾತಿಗೆ ಭಾರೀ ಮೆಚ್ಚುಗೆ

    ಡೆಹ್ರಾಡೂನ್​: ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ ಅಥವಾ ಗೆಲುವಿನ ಸಂದರ್ಭದಲ್ಲಿ ಕೇಕ್​ ಕತ್ತರಿಸಿ ಸಂಭ್ರಮಿಸುವುದನ್ನು ನೋಡಿದ್ದೇವೆ. ಆದರೆ, ಮುಟ್ಟಿನ ಅವಧಿ ಅಥವಾ ಪಿರಿಯಡ್ಸ್​ ಅನ್ನು ಕೇಕ್​ ಕತ್ತರಿಸಿ ಸಂಭ್ರಮಿಸಿರುವ ಬಗ್ಗೆ ಎಂದಾದರೂ ಕೇಳಿದ್ದೀರಾ? ಇದನ್ನು ಕೇಳಲು ವಿಚಿತ್ರ ಅನಿಸಿದರೂ ಉತ್ತರಾಖಂಡದ ಒಂದು ಕುಟುಂಬ ಈ ರೀತಿಯ ಆಚರಣೆ ಮಾಡುವ ಮೂಲಕ ನೆಟ್ಟಿಗರ ಗಮನ ಸೆಳೆದಿದೆ.

    ಉತ್ತರಾಖಂಡದ ಕಾಶೀಪುರದ ಉಧಾಮ್​ ಸಿಂಗ್​ ನಗರದಲ್ಲಿ ವಾಸಿರುವ ಜೀತೇಂದ್ರ ಭಟ್​ ಕುಟುಂಬ ತಮ್ಮ ಮಗಳ ಮೊದಲ ಪಿರಿಯಡ್ಸ್ ಅನ್ನು​​ ಬಹಳ ಅದ್ಧೂರಿಯಾಗಿ ಆಚರಣೆ ಮಾಡಿದೆ. ಮನೆಯನ್ನೆಲ್ಲ ಬಲೂನ್​ಗಳಿಂದ ಸಿಂಗಾರ ಮಾಡಿ, ಬಂಧ-ಬಳಗದ ಸಮ್ಮುಖದಲ್ಲಿ ಕೇಕ್​ ಕತ್ತಿರಿಸುವ ಮೂಲಕ ಮಗಳ ಮೊದಲ ಪಿರಿಯಡ್ಸ್​ ಅನ್ನು ಸಂಭ್ರಮಿಸಿದೆ.

    ಜೀತೆಂದ್ರ ಭಟ್​ ವೃತ್ತಿಯಲ್ಲಿ ಸಂಗೀತ ಶಿಕ್ಷಕರಾಗಿದ್ದಾರೆ. ಮುಟ್ಟು ವಿಶ್ವದ ಅತ್ಯಂತ ಪವಿತ್ರ ಧರ್ಮವಾಗಿದೆ ಎಂಬ ಸಾಮಾಜಿಕ ಸಂದೇಶ ಕೊಡಲು ಇಂತಹ ನಿರ್ಧಾರ ತೆಗೆದುಕೊಂಡಿದ್ದಾಗಿ ಜೀತೆಂದ್ರ ಭಟ್​ ತಿಳಿಸಿದ್ದಾರೆ.

    ಇದನ್ನೂ ಓದಿ: ಜಿಲ್ಲೆಯಲ್ಲಿ ಐದು ದಿನ ತುಂತುರು ಮಳೆ: ಜು.28ರಿಂದ ಏಳು ದಿನ ಸರಾಸರಿ ಮಳೆ ನಿರೀಕ್ಷೆ

    ಸಾಮಾಜಿಕ ಸಂದೇಶವೇನು?

    ನಾನು ಚಿಕ್ಕವನಿದ್ದಾಗ ಪಿರಿಯಡ್ಸ್​ ಬಗ್ಗೆ ಹೆಚ್ಚೇನು ಗೊತ್ತಿರಲಿಲ್ಲ. ನಾನು ದೊಡ್ಡವನಾದಂತೆ, ಮಹಿಳೆಯರು ಮತ್ತು ಹುಡುಗಿಯರ ಋತುಚಕ್ರದ ಬಗ್ಗೆ ಮಾತನಾಡುವುದನ್ನು ಮತ್ತು ಕೀಳಾಗಿ ನೋಡುವುದನ್ನು ಗಮನಿಸಿದೆ. ಈ ಸಮಯದಲ್ಲಿ ಮಹಿಳೆಯರು ಏನೇ ಸ್ಪರ್ಶಿಸಿದರೂ ಅದು ಅಪವಿತ್ರ ಎಂದು ಹೇಳುತ್ತಾರೆ. ಈ ಎಲ್ಲ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ನಾನು ನನ್ನ ಮಗಳ ಮೊದಲ ಮುಟ್ಟನ್ನು ಸಂಭ್ರಮಿಸುವ ಯೋಚನೆ ಮಾಡಿದೆ. ಇದು ಅಪವಿತ್ರದ ರೋಗವಲ್ಲ ಅಥವಾ ಅಸ್ಪೃಶ್ಯತೆಯಲ್ಲ ಆದರೆ, ಇದು ಸಂತೋಷದ ದಿನ ಎಂದು ಜೀತೆಂದ್ರ ಭಟ್ ಹೇಳಿದ್ದಾರೆ.

    ಪ್ರಯತ್ನಕ್ಕೆ ಫಲ ಸಿಗಲಿದೆ

    ಜೀತೆಂದ್ರ ಅವರ ಈ ಹೊಸ ಪ್ರಯತ್ನಕ್ಕೆ ಸ್ಥಳೀಯರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಮತ್ತು ಈ ಪ್ರಯತ್ನಕ್ಕೆ ಫಲ ಸಿಗಲಿದೆ. ಮಹಿಳೆಯರ ಮುಟ್ಟಿನ ಮೇಲಿರುವ ಅಪವಿತ್ರ ಎಂಬ ತಪ್ಪು ಕಲ್ಪನೆ ಹೋಗಲು ಇದು ನೆರವಾಗುತ್ತದೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಎಂದಿನಂತೆ ದೇವರ ಪೂಜೆ ಮಾಡಿ 

    ಈ ಬಗ್ಗೆ ಸ್ತ್ರೀರೋಗತಜ್ಞ ಡಾ. ನವಪ್ರೀತ್​ ಕೌರ್​ ಎಂಬುವರು ಮಾತನಾಡಿ, ಇದೊಂದು ಉತ್ತಮವಾದ ನಡೆ. ಮುಟ್ಟನ್ನು ಅಸ್ಪೃಶ್ಯತೆ ಎಂದು ಪರಿಗಣಿಸಿರುವುದು ಸಂಪೂರ್ಣ ತಪ್ಪು ತಿಳುವಳಿಕೆ. ಇದೊಂದು ರೋಗವಲ್ಲ ಮತ್ತು ಇದೊಂದು ಅಸ್ಪೃಶ್ಯತೆಯಲ್ಲ. ಪೀರಿಯಡ್ಸ್​ ಸಮಯದಲ್ಲೂ ಸ್ನಾನ ಮಾಡಿ ಎಂದಿನಂತೆ ದೇವರ ಪೂಜೆ ಮಾಡಿ ಮತ್ತು ದೇವಸ್ಥಾನಕ್ಕೂ ಹೋಗಿ ಎಂದು ವೈದ್ಯರು ಹೇಳಿದರು. (ಏಜೆನ್ಸೀಸ್​)

    ಪಾಕಿಸ್ತಾನಕ್ಕೆ ವಾಪಸ್ ಕಳುಹಿಸಬೇಡಿ; ಪ್ರಧಾನಿ ಮತ್ತು ಯುಪಿ ಸಿಎಂಗೆ ಸೀಮಾ ಹೈದರ್ ಮನವಿ

    VIDEO| ಈ ಸೀಟ್​ ನಂದೆಂದು ವೃದ್ಧನನ್ನು ಹಿಗ್ಗಾಮುಗ್ಗಾ ಥಳಿಸಿದ ಜೋಡಿ

    ಹೃದಯ ಕಾಯಿಲೆಯ ಅಪಾಯವನ್ನು ನಿಯಂತ್ರಿಸಲು ಈ 5 ಆಹಾರಗಳನ್ನು ಸೇವಿಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts