VIDEO| ಈ ಸೀಟ್​ ನಂದೆಂದು ವೃದ್ಧನನ್ನು ಹಿಗ್ಗಾಮುಗ್ಗಾ ಥಳಿಸಿದ ಜೋಡಿ

US Theatre
Published on

ಫ್ಲೋರಿಡಾ: ಚಿತ್ರಮಂದರಿದಲ್ಲಿ ಹಿರಿಯ ನಾಗರೀಕರೊಬ್ಬರು ತಮ್ಮ ಆಸನದಿಂದ ಬೇರೆಡೆಗೆ ತೆರಳುವಂತೆ ಸೂಚಿಸಿದ್ದಕ್ಕೆ ಕುಪಿತಗೊಂಡು ಅವರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ಯುನೈಟೆಡ್ಸ್​ ಸ್ಟೇಟ್ಸ್​ನ ಫ್ಲೋರಿಡಾದಲ್ಲಿ ನಡೆದಿದೆ.

ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಪೊಲೀಸರು ಆರೋಪಿ ಜೋಡಿಯನ್ನು ಪತ್ತೆ ಹಚ್ಚಲು ವಿಶೇಷ ತಂಡ ಒಂದನ್ನು ರಚಿಸಿ ಶಂಕಿತರ ಫೋಟೋವನ್ನು ಬಿಡುಗಡೆ ಮಾಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಹಲ್ಲೆಗೊಳಗಾದ ವೃದ್ಧ ನಾನು ಹಾಗೂ ನನ್ನ ಮಡದಿ ಸಿನಿಮಾವನ್ನು ವೀಕ್ಷಿಸಲು ವೈಐಪಿ ಸಾಲಿನಲ್ಲಿ ಮುಂಗಡ ಕಾಯ್ದಿರಿಸಿ ಟಿಕೆಟ್​ ಪಡೆದಿದ್ದವು. ಆದರೆ, ನಮ್ಮ ಸೀಟಿನಲ್ಲಿ ಜೋಡಿಗಳಿಬ್ಬರು ಕೂತ್ತಿರುವುದನ್ನು ಗಮನಿಸಿ ಇದು ನಮ್ಮ ಜಾಗ ಬೇರೆಡೆಗೆ ತೆರಳುವಂತೆ ಹೇಳಿದೆ.

ಇದಕ್ಕೊಪ್ಪದ ಜೋಡಿ ಮೊದಲಿಗೆ ಗಲಾಟೆ ತೆಗೆದರು ಮತ್ತು ಏಕಾಏಕಿ ನನ್ನ ಮೇಲೆ ಹಲ್ಲೆ ಮಾಡಲು ಶುರು ಮಾಡಿದ್ದರು. ಈ ವೇಳೆ ಚಿತ್ರಮಂದಿರದಲ್ಲಿದ್ದ ಇತರರು ನನ್ನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಯ ನಂತರ ಜೋಡಿಗಳಿಬ್ಬರು ಪರಾರಿಯಾಗಿದ್ದು, ಪೊಲೀಸರು ವಿಶೇಷ ತಂಡ ಒಂದನ್ನು ರಚಿಸಿ ಕಾರ್ಯನಿರ್ವಹಿಸುತ್ತಿರುವುದಾಗಿ ಹಲ್ಲೆಗೊಳಗಾದ ವೃದ್ಧ ತಿಳಿಸಿದ್ದಾರೆ.

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಆರೋಪಿಗಳ ಫೋಟೋವನ್ನು ಬಿಡುಗಡೆ ಮಾಡಿದ್ದು, ಸಾರ್ವಜನಿಕರು ತನಿಖೆಗೆ ಸಹಕರಿಸುವಂತೆ ಪೊಲೀಸರು ವಿನಂತಿಸಿಕೊಂಡಿದ್ದಾರೆ. ವೈರಲ್​ ವಿಡಿಯೋ ಕುರಿತು ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಹ ಕೇಳಿ ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net