More

    ISIS ಜತೆಗೆ ನಂಟು; ಅಲಿಗಢ ವಿಶ್ವವಿದ್ಯಾಲಯದ ವಿದ್ಯಾರ್ಥಿ ಅರೆಸ್ಟ್​

    ಆಲಿಗಢ: ISIS ಉಗ್ರಗಾಮಿ ಸಂಘಟನೆಯೊಂದಿಗೆ ನಿಕಟ ಸಂಪರ್ಕ ಹೊಂದಿದ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ದಳ(NIA) ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿಯನ್ನು ವಶಕ್ಕೆ ಪಡೆದಿದೆ.

    ಬಂಧಿತನನ್ನು ಜಾರ್ಖಂಡ್​ ಮೂಲದ ಫೈಜಾನ್​ ಅನ್ಸಾರಿ ಅಲಿಯಾಸ್​ ಫೈಜ್​(19) ಎಂದು ಗುರುತಿಸಲಾಗಿದ್ದು, ಈತ ISIS ಜತೆಯಾಗಿ ದೇಶದಲ್ಲಿ ವಿದ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ.

    NIA

    ಇದನ್ನೂ ಓದಿ: ನೈಸರ್ಗಿಕ ಅನಿಲಕ್ಕಾಗಿ 10 ಸಾವಿರ ಅಡಿ​ ಭೂಮಿ ಕೊರೆಯಲು ಮುಂದಾದ ಚೀನಾ

    ಫೈಜಾನ್​ ಸಾಮಾಜಿಕ ಜಾಲತಾಣದ ಮೂಲಕ ಐಸಿಸ್​ನೊಂದಿಗೆ ಸಂಪರ್ಕ ಬೆಳೆಸಿದ್ದ. ಈ ಕುರಿತು ಮಾಹಿತಿ ಪಡೆದ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಆತನ ಬಾಡಿಗೆ ಮನೆ ಹಾಗೂ ಜಾರ್ಖಂಡ್​ನ ಲೋಹರ್​ದಾಗ್​ನಲ್ಲಿರುವ ಸ್ವಗೃಹದ ಮೇಲೆ ದಾಳಿ ನಡೆಸಿ ಎಲೆಕ್ಟ್ರಾನಿಕ್​ ಉಪಕರಣಗಳನ್ನು ವಶಕ್ಕೆ ಪಡೆದಿದ್ದರು.

    ವಶಪಡಿಸಿಕೊಂಡ ವಸ್ತುಗಳನ್ನು ಪರಿಶೀಲಿಸಿದಾಗ ಆರೋಪಿಯೂ ಐಸಿಸ್​ ಜೊತೆ ನಿರಂತರ ಸಂಪರ್ಕ ಹೊಂದಿದ್ದ ಮತ್ತು ಭಾರತದಲ್ಲಿ ವಿದ್ವಂಸಕ ಕೃತ್ಯ ಎಸಗಲು ಯುವಕರನ್ನು ನೇಮಕ ಮಾಡಿಕೊಳ್ಳುವ ಜವಾಬ್ದಾರಿಯನ್ನು ಸಹ ಹೊತ್ತಿದ್ದ. ಖಚಿತ ಮಾಹಿತಿ ಮೇರೆಗೆ ಈತನನ್ನು ಬಂಧಿಸಲಾಗಿದ್ದು ಶೀಘ್ರದಲ್ಲೇ ಶಂಕಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಚಾರ್ಜ್​ಶೀಟ್​ ಸಲ್ಲಿಸಲಾಗುವುದು ಎಂದು NIAನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts