VIDEO| ಮನೆಯವರ ಇಷ್ಟಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಕ್ಕೆ ಸಹೋದರಿಯ ತಲೆ ಕಡಿದ

UP Behead
Published on

ಲಖನೌ: ಕುಟುಂಬದ ಇಷ್ಟಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಕ್ಕಾಗಿ ವ್ಯಕ್ತಿಯೋರ್ವ ತನ್ನ ಸಹೋದರಿಯ ತಲೆ ಕಡಿದು ಅದನ್ನು ಹಿಡಿದುಕೊಂಡು ತಿರುಗಾಡಿರುವ ಘಟನೆ ಉತ್ತರಪ್ರದೇಶದ ಬಾರಾಬಂಕಿಯಲ್ಲಿ ನಡೆದಿದೆ.

ಬಂಧಿತ ಆರೋಪಿಯನ್ನು ಮೊಹಮ್ಮದ್​ ರಿಯಾಜ್​(24) ಎಂದು ಗುರುತಿಸಲಾಗಿದ್ದು, ಕುಟುಂಬದ ಇಷ್ಟಕ್ಕೆ ವಿರುದ್ಧವಾಗಿ ನಡೆದುಕೊಂಡಿದಕ್ಕಾಗಿ ಸಹೋದರಿಯ ತಲೆಯನ್ನು ಕಡಿದು ದ್ವೇಷವನ್ನು ತೀರಿಸಿಕೊಂಡಿದ್ದಾನೆ.

ಪ್ರಕರಣದ ಹಿನ್ನಲೆ

ಆರೋಪಿ ಮೊಹಮ್ಮದ್​ ರಿಯಾಜ್​ ಸಹೋದರಿ ಅನ್ಯ ಸಮುದಾಯದ ಯುವಕನನ್ನು ಪ್ರೀತಿಸುತ್ತಿದ್ದಳು. ಈ ವಿಚಾರವನ್ನು ತಿಳಿದು ಕುಟುಂಬಸ್ಥರು ವಿರೋಧಿಸಿದ್ದರು ಮತ್ತು ಯುವಕನಿಂದ ದೂರ ಉಳಿಯುವಂತೆ ಸೂಚಿಸಿದ್ದರು. ಇದರ ಹೊರತಾಗಿಯೂ ಯುವತಿ ಮನೆಯವರ ಇಷ್ಟಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಳು.

ಇದರಿಂದ ಕುಪಿತಗೊಂಡ ಆರೋಪಿಯು ತನ್ನ ಸಹೋದರಿಯ ತಲೆಯನ್ನು ಮನೆ ಮುಂದೆಯೇ ಕಡಿದು ಅದನ್ನು ಹಿಡಿದು ನೆರೆ ಹೊರೆ ಪ್ರದೇಶದಲ್ಲಿ ತಿರುಗಾಡಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿ FIR ಹಾಕಿದ್ದಾರೆ.

ಯುವತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಕುಟುಂಬಸ್ಥರ ಹೇಳಿಕೆಯನ್ನು ಪಡೆದು ಆರೋಪಿಯನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net