More

    ಉತ್ತರಾಖಂಡ ಮುಖ್ಯಮಂತ್ರಿ ರಾಜೀನಾಮೆ! ಕಾರಣವನ್ನು ಹೈ ಕಮಾಂಡ್​ ಬಳಿ ಕೇಳಿ ಎಂದ ನಾಯಕ

    ಡೆಹ್ರಾಡೂನ್​: ಉತ್ತರಾಖಂಡದ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್​ ರಾವತ್​ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆಗೆ ಕಾರಣವನ್ನು ಕೇಳಿದಾಗ ಹೈ ಕಮಾಂಡ್​ನ್ನು ಕೇಳಿ ಎಂದು ಹೇಳಿದ್ದಾರೆ.

    ತ್ರಿವೇಂದ್ರ ಸಿಂಗ್​ ಅವರು ರಾಜ್ಯಪಾಲ ಬೇಬಿ ರಾಣಿ ಮೌರ್ಯ ಅವರಿಗೆ ಮಂಗಳವಾರ ಸಂಜೆ ರಾಜೀನಾಮೆ ಪತ್ರ ಕೊಟ್ಟಿದ್ದಾರೆ. ನಾಲ್ಕು ವರ್ಷಗಳ ಕಾಲ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಲು ಬಿಜೆಪಿ ನನಗೆ ಅವಕಾಶ ಮಾಡಿಕೊಟ್ಟಿದೆ. ಅದಕ್ಕೆ ನಾನು ಋಣಿಯಾಗಿದ್ದೇನೆ ಎಂದು ಅವರು ಹೇಳಿದ್ದಾರೆ. ರಾಜೀನಾಮೆಗೆ ಕಾರಣವೇನೆಂದು ಕೇಳಿದಾಗ, ಅದಕ್ಕೆ ಕಾರಣವನ್ನು ನೀವು ದೆಹಲಿಯಲ್ಲಿರುವ ಬಿಜೆಪಿ ನಾಯಕರನ್ನು ಕೇಳಬೇಕು ಎಂದು ತಿಳಿಸಿದ್ದಾರೆ. ಪಕ್ಷದಲ್ಲಿನ ಎಲ್ಲಾ ನಿರ್ಧಾರಗಳನ್ನು ಸಾಮೂಹಿಕ ರೀತಿಯಲ್ಲಿ ತೆಗೆದುಕೊಳ್ಳಲಾಗುತ್ತದೆ. ನಾನು ಈಗ ಬೇರೊಬ್ಬರಿಗೆ ಅಧಿಕಾರವನ್ನು ರವಾನಿಸಬೇಕು ಎಂದು ಪಕ್ಷವು ಒಟ್ಟಾಗಿ ನಿರ್ಧರಿಸಿದೆ. ಅದಕ್ಕೆ ಕಾರಣವನ್ನು ನೀವು ದೆಹಲಿಯಲ್ಲೇ ಕೇಳಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

    ತ್ರಿವೇಂದ್ರ ಅವರ ಕಾರ್ಯಶೈಲಿ ವಿಭಿನ್ನವಾಗಿದೆ. ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಹಲವಾರು ಉತ್ತರಾಖಂಡ ಮಂತ್ರಿಗಳು ಮತ್ತು ಶಾಸಕರು ಹೈ ಕಮಾಂಡ್​ಗೆ ಮನವಿ ಮಾಡಿದ್ದರು ಎನ್ನಲಾಗಿದೆ. (ಏಜೆನ್ಸೀಸ್​)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಮತ್ತೆ ಇಳಿಯಿತು ಚಿನ್ನದ ದರ! ಈಗ ಎಷ್ಟಾಗಿದೆ ಗೊತ್ತೇ?

    ಸಾವಿರ ಮಹಿಳೆಯರ ಬಾಯಲ್ಲಿ ಶಿವ ತಾಂಡವ! ಶಿವನ ಭಕ್ತಿಯಲ್ಲಿ ಮಿಂದೆದ್ದ ವಾರಣಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts