More

    ಮದುವೆಯಾದ ಎರಡೇ ದಿನದಲ್ಲಿ ವಿವಾಹಿತೆ ನೇಣಿಗೆ ಶರಣು: ಕನ್ನಡಿ ಮೇಲಿತ್ತು ಡೆತ್​ನೋಟ್​

    ಲಖನೌ: ಮದುವೆಯಾದ ಎರಡೇ ದಿನದಲ್ಲಿ 21 ವರ್ಷದ ನವವಿವಾಹಿತೆಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಮುಜಾಫರ್​ನಗರದ ಛರ್ತ್ವಾಲ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಬರುವ ಕುಟೆಸ್ರಾ ಗ್ರಾಮದಲ್ಲಿ ನಡೆದಿರುವುದಾಗಿ ಗುರುವಾರ ಪೊಲೀಸರು ತಿಳಿಸಿದ್ದಾರೆ.

    ನೇಹಾ ಮೃತ ವಿವಾಹಿತೆ. ತನ್ನ ಕೊಠಡಿಯಲ್ಲಿ ಸೀಲಿಂಗ್​ ಫ್ಯಾನ್​ಗೆ ನೇಣು ಬಿಗಿದ ಸ್ಥಿತಿಯಲ್ಲಿ ಬುಧವಾರ ಸಂಜೆ ನೇಹಾ ಮೃತದೇಹ ಪತ್ತೆಯಾಗಿದೆ. ಸಾವಿಗೂ ಮುನ್ನ ಕೊಠಡಿಯ ಕನ್ನಡಿಯಲ್ಲಿ ಡೆತ್​ನೋಟ್​​ ಬರೆಯಲಾಗಿದೆ. ಅದರಲ್ಲಿ ನನ್ನ ಅತ್ತೆ ಅಮಾಯಕಳಾಗಿದ್ದು, ನನ್ನ ಸಾವಿಗೆ ಅವರು ಹೊಣೆಯಲ್ಲ ಎಂದು ಉಲ್ಲೇಖಿಸಲಾಗಿದೆ.

    ಇದನ್ನೂ ಓದಿ: 10 ವರ್ಷದಿಂದಲೂ ಪೊಲೀಸ್​ ಮೆದುಳಿನಲ್ಲಿದೆ ಬುಲೆಟ್​: ಹೀಗಿದ್ರೂ ಎಲ್ಲರಂತೆ ಜೀವಿಸೋದು ಹೇಗೆ ಸಾಧ್ಯ!

    ಅಂದಹಾಗೆ ನೇಹಾ ಸಚಿನ್​ (22) ಎಂಬಾತನನ್ನು ಸೋಮವಾರವಷ್ಟೇ ಮದುವೆಯಾಗಿದ್ದಳು. ಬಾಳಿ ಬದುಕಬೇಕಾಗಿದ್ದ ನೇಹಾ ದಿಢೀರ್​ ನಿರ್ಧಾರ ತೆಗೆದುಕೊಂಡಿದ್ದೇಕೆ ಎಂಬುದು ಪೋಷಕರನ್ನು ಕಾಡುತ್ತಿದೆ.

    ತುಂಬಾ ಹೊತ್ತಾದರೂ ತನ್ನ ಕೊಠಡಿಯಿಂದ ನೇಹಾ ಹೊರಬರದಿದ್ದಾಗ ಅವರ ಅತ್ತೆ ಹೋಗಿ ಬಾಗಿಲ ಬಳಿ ನಿಂತು ನೋಡಿದಾಗ ಆಕೆ ನೇಣು ಬಿಗಿದುಕೊಂಡಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಇದನ್ನೂ ಓದಿ: VIDEO| ಕಿವಿಯೊಳಗಿಂದ ಬರ್ತಿದ್ದ ವಿಚಿತ್ರ ಶಬ್ದ ಕೇಳಿ ಗಾಬರಿಯಿಂದ ಆಸ್ಪತ್ರೆಗೆ ಹೋದ ಮಹಿಳೆಗೆ ಕಾದಿತ್ತು ಶಾಕ್​!

    ವಿವಾಹಿತೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ ಮತ್ತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್​)

    ಹೆಂಡ್ತಿ ಹೊರಗೆ ಬರಲ್ಲ, ಜತೆಗೆ ಮಲಗಲ್ಲ, ಕೆಲ್ಸ ಮಾಡಲ್ಲ… ವಿಚ್ಛೇದನ ಕೊಡಿ ಎಂದವನಿಗೆ ಹೈಕೋರ್ಟ್‌ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts