More

    ಹೆಂಡ್ತಿ ಹೊರಗೆ ಬರಲ್ಲ, ಜತೆಗೆ ಮಲಗಲ್ಲ, ಕೆಲ್ಸ ಮಾಡಲ್ಲ… ವಿಚ್ಛೇದನ ಕೊಡಿ ಎಂದವನಿಗೆ ಹೈಕೋರ್ಟ್‌ ಹೇಳಿದ್ದೇನು?

    ನವದೆಹಲಿ: ಹೊಸದಾಗಿ ಮದುವೆಯಾಗಿ ಬಂದಿರುವ ಹೆಣ್ಣುಮಗಳನ್ನು ಮೊದಲು ಗಂಡನ ಮನೆಯಲ್ಲಿ ಅಡ್ಜೆಸ್ಟ್‌ ಆಗೋಕೆ ಬಿಡಿ. ಆಕೆ ರೂಮು ಬಿಟ್ಟು ಬರಲ್ಲ, ಕೆಲ್ಸ ಮಾಡಲ್ಲ ಎಂದೆಲ್ಲಾ ಕಂಪ್ಲೇಂಟ್‌ ಮಾಡುವ ಮೊದಲು ಅತ್ತೆ ಮನೆಯೂ ಆಕೆಯದ್ದೇ ಮನೆ ಎಂಬ ಫೀಲ್‌ ಬರುವ ಹಾಗೆ ಮಾಡಿ. ಅದನ್ನು ಬಿಟ್ಟು ಕೆಲ್ಸ ಮಾಡದೇ ಅತ್ಯಂತ ಕ್ರೂರವಾಗಿ ನಡೆದುಕೊಳ್ಳುತ್ತಾಳೆ ಎನ್ನುವುದರಲ್ಲಿ ಅರ್ಥವಿಲ್ಲ ಎಂದು ದೆಹಲಿ ಹೈಕೋರ್ಟ್‌ ವಿಚ್ಛೇದನಕ್ಕೆ ಕೋರಿದ್ದ ಗಂಡನಿಗೆ ಬುದ್ಧಿಮಾತು ಹೇಳಿದೆ.

    ವಿಚ್ಛೇದನ ನೀಡಲು ಕೌಟುಂಬಿಕ ಕೋರ್ಟ್‌ ನಿರಾಕರಿಸಿದ್ದನ್ನು ಪ್ರಶ್ನಿಸಿ ವಿಶಾಲ್ ಸಿಂಗ್ ಎಂಬ ಯುವಕ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಆಶಾ ಮೆನನ್ ಅವರಿದ್ದ ಪೀಠ ವಜಾ ಮಾಡುವ ಮೂಲಕ ಗಂಡ ಮತ್ತು ಅತ್ತೆಗೆ ಬುದ್ಧಿಮಾತು ಹೇಳಿದೆ. ಹೆಂಡತಿಯ ನಡವಳಿಕೆ ಸರಿಯಿಲ್ಲ, ಕೆಲಸ ಮಾಡುವುದಿಲ್ಲ. ಫಂಕ್ಷನ್‌ಗೆ ಕರೆದರೆ ಬರುವುದಿಲ್ಲ ಇತ್ಯಾದಿ ವಿಶಾಲ್‌ ವಾದವಾಗಿತ್ತು.

    ವಧುವಾಗಿ ಬಂದಾಗ ಮೊದಲಿಗೆ ಹೊಸ ಪರಿಸರದಲ್ಲಿ ಹಿಂಜರಿಕೆ ಸಹಜ. ಆಕೆಯನ್ನು ಅತ್ತೆಯ ಮನೆಯಲ್ಲಿ ತಮ್ಮ ಕುಟುಂಬದ ಸದಸ್ಯರಾಗಿ ಸ್ವೀಕರಿಸಬೇಕು, ಗಂಡ ಕೂಡ ಆಕೆಗೆ ಅದೇ ರೀತಿಯ ಫೀಲ್‌ ಬರುವಂತೆ ಮಾಡಬೇಕು ಎಂದು ಪೀಠ ಹೇಳಿದೆ.

    ಇದನ್ನೂ ಓದಿ: ಹೆಂಡತಿಯನ್ನು ಆಕೆ ಪಾಲಕರು ಬಿಡ್ತಿಲ್ಲ, ಕರೆಸಿಕೊಳ್ಳೋದು ಹೇಗೆ?

    ವಿಶಾಲ್ ಮತ್ತು ಪ್ರಿಯಾ 2012ರಲ್ಲಿ ವಿವಾಹವಾಗಿದ್ದರು. ಸ್ವಲ್ಪ ಸಮಯ ಗಂಡನ ಮನೆಯಲ್ಲಿದ್ದ ಆಕೆ ನಂತರ ತವರಿಗೆ ವಾಪಸಾಗಿದ್ದಳು. ನಂತರ ಗಂಡನ ಮನೆಯಲ್ಲಿ ತನಗೆ ಹಿಂಸೆ ಆಗುತ್ತಿರುವುದಾಗಿ ದೂರಿದ್ದ ಆಕೆ, ವಾಪಸ್‌ ಬರಲು ನಿರಾಕರಿಸಿದ್ದಳು. ತವರಿಗೆ ಹೋಗುವಾಗ ತನ್ನೆಲ್ಲ ಒಡೆವೆ, ವಸ್ತ್ರಗಳನ್ನೂ ಒಯ್ದಿದ್ದಳು.

    ನಂತರ ತಾನು ಮಾಡಿದ್ದು ತಪ್ಪು ಎಂದು ಅರಿವಾಗಿ ತನ್ನ ವರ್ತನೆಗೆ ಕ್ಷಮೆಯಾಚಿಸುತ್ತಲೇ ಇದ್ದಳು. ಆದರೆ ಇಷ್ಟು ದಿನ ಆಕೆ ಬರದುದ್ದರಿಂದ ಕೋಪಗೊಂಡಿದ್ದ ವಿಶಾಲ್‌ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ. ಮದುವೆಯಾದ ಕೆಲವು ದಿನ ತನ್ನ ಜತೆ ದೈಹಿಕ ಸಂಪರ್ಕ ನಡೆಸಿದ್ದರೂ ನಂತರ ಆಕೆ ಹಿಂಜರಿದಳು, ತವರಿಗೆ ಹೋದಳು ಎಂದಿದ್ದ ವಿಶಾಲ‌, ಆಕೆಯ ಶೀಲದ ಬಗ್ಗೆಯೂ ಸಂದೇಹ ವ್ಯಕ್ತಪಡಿಸಿದ್ದ.

    ಇದರಿಂದ ಕೋರ್ಟ್‌ ಆತನ ಕ್ರಮಕ್ಕೆ ತೀವ್ರ ಅಸಮಾಧಾನಗೊಂಡಿತು. ಮದುವೆಯಾಗಿ ಬಂದಾಗ ದೈಹಿಕ ಸಂಪರ್ಕಕ್ಕೆ ಮೊದಮೊದಲು ಯುವತಿ ಹಿಂಜರಿಯುವುದು ಸಹಜವೇ. ಅವೆಲ್ಲಾ ಕ್ರೌರ್ಯವಾಗಲಾರದು. ಅದನ್ನು ಗಂಡನಾದವ ಅರ್ಥ ಮಾಡಿಕೊಂಡು ಆಕೆಯ ಜತೆ ಪ್ರೀತಿಯಿಂದ ವರ್ತಿಸಬೇಕು. ಅದನ್ನು ಬಿಟ್ಟು ಶೀಲದ ಬಗ್ಗೆ ಸಂದೇಹ ವ್ಯಕ್ತಪಡಿಸುವುದು ಸರಿಯಲ್ಲ ಎಂದು ತರಾಟೆಗೆ ತೆಗೆದುಕೊಂಡಿತು. ಜತೆಗೆ ವಿಚ್ಛೇದನ ನೀಡಲು ನಿರಾಕರಿಸಿತು.

    ಫೈಟ್‌ಗೆ ಸಜ್ಜು: ₹38 ಸಾವಿರ ಕೋಟಿ ವೆಚ್ಚದ ಯುದ್ಧವಿಮಾನ, ಕ್ಷಿಪಣಿ ಖರೀದಿಗೆ ತಯಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts