More

    ಕೊಪ್ಪಳ ಕೆಆರ್​ಐಡಿಎಲ್​ ಇಇ ಝರಣಪ್ಪ ಎಂ.ಚಿಂಚೋಳಿಕರ್​ ವಜಾ

    ಕೊಪ್ಪಳ: ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ನಿಯಮಿತದ ಜಿಲ್ಲಾ ಕಾರ್ಯಪಾಲಕ ಅಭಿಯಂತರ ಝರಣಪ್ಪ ಎಂ.ಚಿಂಚೋಳಿಕರ್​ ವಿರುದ್ಧ ಆರ್ಥಿಕ ಅವ್ಯವಹಾರ ಸಾಬೀತಾದ ಹಿನ್ನೆಲೆಯಲ್ಲಿ ಸೇವೆಯಿಂದ ವಜಾಗೊಳಿಸಿ ಕೆಆರ್​ಐಡಿಎಲ್​ ವ್ಯವಸ್ಥಾಪಕ ನಿರ್ದೇಶಕ ಬಸವರಾಜು ಬುಧವಾರ ಆದೇಶಿಸಿದ್ದಾರೆ.

    ಮಾಜಿ ಸಚಿವ ಹಾಲಪ್ಪ ಆಚಾರ್​ ಹೆಚ್ಚುವರಿ ಸುವರ್ಣ ಗ್ರಾಮ ಯೋಜನೆಗಳಲ್ಲಿ 2016&18ರಲ್ಲಿ ಅವ್ಯವಹಾರ ನಡೆದ ಬಗ್ಗೆ ದೂರು ಸಲ್ಲಿಸಿದ್ದರು. ವರದಿ ಪರಿಶೀಲಿಸದ ಅಧಿಕಾರಿಗಳು ಅಂದಿನ ಇಇ ಜೆ.ಎಂ.ಕೊರಬು ಮತತ್​ಉ ಪ್ರಸ್ತುತ ಇಇ ಇರುವ ಝರಣಪ್ಪ ಎಂ.ಚಿಂಚೋಳಿಕರ್​ಗೆ ನೋಟಿಸ್​ ನೀಡಿದರೂ ಉತ್ತರಿಸಿರಲಿಲ್ಲ.

    ತನಿಖಾ ಸಂಸ್ಥೆ ನೇಮಿಸಿ ಪರಿಶೀಲಿಸಿದಾಗ ಕೊರಬು ಅವಧಿಯಲ್ಲಿ 6.12 ಕೋಟಿ ರೂ. ಹಾಗೂ ಚಿಂಚೋಳಿಕರ್​ ಅವಧಿಯಲ್ಲಿ 1.55 ಕೋಟಿ ರೂ. ಅವ್ಯವಹಾರ ಆಗಿದೆ ಎಂಬುದು ಬೆಳಕಿಗೆ ಬಂದಿದೆ. ಈ ಸಂಬಂಧ ತನಿಖಾ ವಿಚಾರಣೆಗೂ ಅಧಿಕಾರಿಗಳು ಹಾಜರಾಗಿಲ್ಲ.

    ನಿವೃತ್ತ ಜಿಲ್ಲಾ ನ್ಯಾಯಾಧೀಶ ಬಸವರಾಜ ಎಸ್​ ತಡಹಾಳ ನೇತೃತ್ವದಲ್ಲಿ ತನಿಖಾ ಆಯೋಗ ರಚಿಸಿ ವಿಚಾರಣೆ ನಡೆಸಲಾಗಿದೆ. ಇಲ್ಲಿಯೂ ಅಧಿಕಾರಿಗಳು ಲಿಖಿತ ಹೇಳಿಕೆ, ದಾಖಲೆ ಸಲ್ಲಿಸಿಲ್ಲ. ಬದಲಾಗಿ ಶಾಸಕರೂ ಸೂಚಿಸಿದ್ದಕ್ಕೆ ಕಾಮಗಾರಿ ನಡೆಸಲಾಗಿದೆ ಎಂದು ಸಬೂಬು ಹೇಳಿದ್ದಾರೆ.

    2016-17ರಲ್ಲಿ ಮಂಜೂರಾದ 19,226 ಮೀಟರ್​ ಸಿಸಿ ರಸ್ತೆ ಪೈಕಿ 14,500 ಮೀಟರ್​ ನಿರ್ಮಿಸಿದ್ದು, 4725 ಮೀಟರ್​ ಸುಳ್ಳು ಲೆಕ್ಕ ತೋರಿಸಲಾಗಿದೆ. 956 ಮೀ. ಚರಂಡಿಯಲ್ಲಿ 507 ಮೀಟರ್​ ನಿರ್ಮಿಸಿ, 447 ಮೀಟರ್​ ಕಾಮಗಾರಿ ನಡೆಸಿಲ್ಲ.

    2017-18ರಲ್ಲಿ 8526 ಮೀಟರ್​ ಸಿಸಿ ರಸ್ತೆಯಲ್ಲಿ 5844 ಮೀಟರ್​ ನಿರ್ಮಿಸಲಾಗಿದೆ. ಬಾಕಿ 2681 ಮೀಟರ್​ ಕಾಮಗಾರಿ ನಡೆದಿಲ್ಲ. 1572 ಮೀಟರ್​ ಚರಂಡಿ ಪೈಕಿ ಕೇವಲ 571 ಮೀಟರ್​ ನಿರ್ಮಿಸಿ 1001 ಮೀಟರ್​ ಸುಳ್ಳು ಲೆಕ್ಕ ತೋರಿಸಲಾಗಿದೆ. ಈ ಬಗ್ಗೆ ವಿಚಾರಣೆಲ್ಲಿ ಸಾಬೀತಾಗಿದ್ದು, ಚಿಂಚೋಳಿಕರ್​ ವಜಾಕ್ಕೆ ನ್ಯಾಯಾಧೀಶರು ಶೀಾರಸ್ಸು ಮಾಡಿದ್ದಾರೆ.

    ಅದರಂತೆ ಕೆಆರ್​ಐಡಿಎಲ್​ ಕೊಪ್ಪಳ ವಿಭಾಗದ ಇಇ ಝರಣಪ್ಪ ಚಿಂಚೋಳಿಕರ್​ನ್ನು ಸಂಸ್ಥೆಯಿಂದ ವಜಾಗೊಳಿಸಲಾಗಿದೆ. ಅಕ್ರಮ ಎಸಗಿರುವ 1,55,44,897ರೂ. ಮೊತ್ತವನ್ನು ಒಂದೇ ಕಂತಿನಲ್ಲಿ ಸಂಸ್ಥೆಗೆ ಜಮಾ ಮಾಡುವಂತೆ ಸೂಚಿಸಲಾಗಿದೆ. ತಪ್ಪಿದಲ್ಲಿ ನ್ಯಾಯಾಲಯದಲ್ಲಿ ದಾವೆ ಹೂಡುವುದಾಗಿ ಆದೇಶದಲ್ಲಿ ತಿಳಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts