More

    ದೇವರೊಂದಿಗೆ ದೈವದ ಕಾರ್ಯ ಶ್ಲಾಘನೀಯ

    ಕವಿತಾಳ: ಬೆಂಚಮರಡಿ ಗ್ರಾಮದ ಉಟಕನೂರು ಮರಿಬಸವಲಿಂಗಸ್ವಾಮಿಗಳ ಭಕ್ತರು ದೇವರ ಕಾರ್ಯದೊಂದಿಗೆ ಬಡವರಿಗೆ ಅನುಕೂಲವಾಗಲಿ ಎಂದು ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸುವ ಮೂಲಕ ದೈವದ ಕಾರ್ಯವನ್ನೂ ಮಾಡುತ್ತಿದ್ದಾರೆ ಎಂದು ಉಟಕನೂರು ಮಠದ ಪೀಠಾಧಿಪತಿ ಮರಿಬಸವರಾಜ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

    ಮರಿಬಸವಲಿಂಗಸ್ವಾಮಿಗಳ 31ನೇ ಜಾತ್ರಾ ಮಹೋತ್ಸವ ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶನಿವಾರ ಮಾತನಾಡಿದರು. ಮರಿಬಸವಲಿಂಗ ಸ್ವಾಮಿಗಳು ನಡೆದಾಡುವ ದೇವರಾಗಿದ್ದರು. ಅವರು ನಡೆದಾಡಿದ ಗ್ರಾಮಗಳು ಪಾವನವಾಗಿವೆ. ಅದರಂತೆ ಬೆಂಚಮರಡಿ ಗ್ರಾಮದ ಪ್ರತಿಯೊಬ್ಬರ ಮೇಲೆಯೂ ಸ್ವಾಮಿಗಳ ಶ್ರೀರಕ್ಷೆಯಿರಲಿದೆ ಎಂದರು.

    ಮಲ್ಲದಗುಡ್ಡದ ಅಯ್ಯಪ್ಪಸ್ವಾಮಿ ಮಾತನಾಡಿ, 360ಕ್ಕೂ ಹೆಚ್ಚು ಕಡೆ ಉಟಕನೂರು ತಾತನ ಜಾತ್ರೆ ನಡೆಯುತ್ತದೆ. ಬೆಂಚಮರಡಿ ಭಕ್ತರು ಜಾತ್ರೆ ಅಂಗವಾಗಿ ನೂತನ ರಥ ನಿರ್ಮಿಸಿರುವುದು ಭಕ್ತರ ಭಕ್ತಿಯ ಪ್ರತೀಕವಾಗಿದೆ ಎಂದರು. ಅರ್ಚಕ ಮಲ್ಲಯ್ಯಸ್ವಾಮಿ, ನಾಗನಗೌಡ ಶಿಕ್ಷಕ, ಅಖಂಡಸ್ವಾಮಿ, ಬಸನಗೌಡ ಹಣಗಿ, ನಾಗರಾಜ ಅಂಗಡಿ, ರಡ್ಡೆಪ್ಪ ಕೊನ್ನಪೂರ, ಬಸವರಾಜ ಬುದ್ದಿನ್ನಿ, ಶರಣಪ್ಪಗೌಡ ದಳಪತಿ, ಭೀಮಣ್ಣ ಗೊಲ್ಲರ, ಮೌನೇಶ ಚಲುವಾದಿ, ಅಮರೇಶ ನಾಯಕ, ನಾಗರಾಜ ಅಂಗಡಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts