More

    ಅಲ್ಟಿಮೇಟ್ ಟೇಬಲ್ ಟೆನಿಸ್ ಟೂರ್ನಿ ಅನಿರ್ದಿಷ್ಟಾವಧಿವರೆಗೆ ಮುಂದೂಡಿಕೆ

    ನವದೆಹಲಿ: 4ನೇ ಆವೃತ್ತಿಯ ಅಲ್ಟಿಮೇಟ್ ಟೇಬಲ್ ಟೆನಿಸ್ (ಯುಟಿಟಿ) ಟೂರ್ನಿಯನ್ನು ಅನಿರ್ದಿಷ್ಟಾವಧಿವರೆಗೆ ಮುಂದೂಡಲಾಗಿದೆ. ಪೂರ್ವನಿಗದಿಯಂತೆ ಆಗಸ್ಟ್ 14 ರಿಂದ 31 ರವರೆಗೆ ನಿಗದಿಯಾಗಿತ್ತು. ಕರೊನಾ ವೈರಸ್ ಭೀತಿಯಿಂದಾಗಿ ಕಳೆದ 4 ತಿಂಗಳಿಂದಲೂ ಟೇಬಲ್ ಟೆನಿಸ್ ಸ್ಥಗಿತಗೊಂಡಿದೆ. ಟೇಬಲ್ ಟೆನಿಸ್ ಪುನರಾರಂಭದ ಕುರಿತು ಅಂತಾರಾಷ್ಟ್ರೀಯ ಟೇಬಲ್ ಟೆನಿಸ್ ಫೆಡರೇಷನ್‌ಗೆ (ಐಟಿಟಿಎಫ್) ಸ್ಪಷ್ಟ ಮಾಹಿತಿ ಇಲ್ಲ. ಜತೆಗೆ ವೃತ್ತಿ ಟೂರ್ ಟೂರ್ನಿಗಳ ಆರಂಭ ಮತ್ತಷ್ಟು ವಿಳಂಬವಾಗುವ ಸಾಧ್ಯತೆಗಳಿವೆ.

    ಇದನ್ನೂ ಓದಿ: VIDEO | ಪಿಪಿಇ ಕಿಟ್​ ಧರಿಸಿ ಕುಣಿದ ಚಾಹಲ್​ ಭಾವಿ ಪತ್ನಿ ಧನಶ್ರೀ!

    2017ರಲ್ಲಿ ಆರಂಭಗೊಂಡ ಯುಟಿಟಿ, ಪ್ರಸಕ್ತ ವರ್ಷ ಟೋಕಿಯೊ ಒಲಿಂಪಿಕ್ಸ್ ಮುಕ್ತಾಯಗೊಂಡ ಬೆನ್ನಲ್ಲೇ ಲೀಗ್ ಆರಂಭಿಸುವ ಯೋಜನೆ ರೂಪಿಸಲಾಗಿತ್ತು. ಇದೀಗ ಟೋಕಿಯೊ ಒಲಿಂಪಿಕ್ಸ್ ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿದ್ದರೆ, ಯುಟಿಟಿ ಲೀಗ್ ಅನ್ನು ಅನಿರ್ದಿಷ್ಟಾವಧಿಗೆ ಮುಂದೂಡಿಕೆ ಮಾಡಲಾಗಿದೆ. ಯುಟಿಟಿ ಆಯೋಜಿಸಲು ಕೇಂದ್ರ ಹಾಗೂ ಸರ್ಕಾರಗಳಿಂದ ಅನುಮತಿ ಅಗತ್ಯ, ಜತೆಗೆ ಆಟಗಾರರ ಲಭ್ಯತೆ ಕೂಡ ಮುಖ್ಯವಾಗುತ್ತದೆ. ಇದೆಲ್ಲವನ್ನು ಗಮನಿಸಿದ ಮುಂದೂಡಿಕೆ ಮಾಡಲಾಗಿದೆ ಎಂದು ಯುಟಿಟಿ ಆಯೋಜಕ 11 ಸ್ಪೋರ್ಟ್ಸ್ ನಿರ್ದೇಶಕ ಕಮಲೇಶ್ ಮೆಹ್ತಾ ತಿಳಿಸಿದ್ದಾರೆ.

    ಇದನ್ನೂ ಓದಿ: ಲಂಕಾ ಪ್ರೀಮಿಯರ್​ ಲೀಗ್​ ದಿಢೀರ್​ ಮುಂದೂಡಿಕೆ, ಕ್ವಾರಂಟೈನ್​ ನಿಯಮವೇ ಕಾರಣ!

    ಎಲ್ಲವೂ ಅಂದುಕೊಂಡಂತೆ ಆದರೆ, ವರ್ಷಾಂತ್ಯದಲ್ಲಿ ಈ ಲೀಗ್ ಆಯೋಜಿಸಲು ತೀರ್ಮಾನಿಸಲಾಗಿದ್ದು, ಶೀಘ್ರವೇ ನೂತನ ದಿನಾಂಕ ಪ್ರಕಟಿಸಲಾಗುವುದು ಎಂದು ಕಮಲೇಶ್ ಹೇಳಿದ್ದಾರೆ. ಯಾವುದಕ್ಕೂ ಕಾದು ನೋಡಬೇಕಿದೆ ಎಂದರು. ಜರ್ಮನಿ, ಸ್ವೀಡನ್, ಚೈನೀಸ್ ತೈಪೆ, ಹಾಂಕಾಂಗ್ ಹಾಗೂ ಪೋರ್ಚುಗಲ್ ಆಟಗಾರರು ಯುಟಿಟಿಯಲ್ಲಿ ಭಾಗವಹಿಸುತ್ತಿದ್ದಾರೆ. ಭಾರತದ ಸ್ಟಾರ್ ಆಟಗಾರರಾದ ಶರತ್ ಕಮಲ್, ಜಿ.ಸತ್ಯನ್ ಹಾಗೂ ಮನಿಕಾ ಬಾತ್ರ ಲೀಗ್‌ನ ಸ್ಟಾರ್ ಆಟಗಾರರಾಗಿದ್ದಾರೆ.

    ಪತ್ನಿ, ಮಕ್ಕಳ ಹೆಸರು ಕೈ ಮೇಲೆ ಹಚ್ಚೆ ಹಾಕಿಸಿಕೊಂಡ ಸುರೇಶ್​ ರೈನಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts