More

    ಭಾರತ ತಂಡಕ್ಕೆ ಕಡೆಗಣನೆ, ಹೈಕೋರ್ಟ್ ಮೆಟ್ಟಿಲೇರಿದ ಟಿಟಿ ಆಟಗಾರ್ತಿ ಮನಿಕಾ ಬಾತ್ರಾ

    ನವದೆಹಲಿ: ಸ್ಟಾರ್ ಆಟಗಾರ್ತಿ ಮನಿಕಾ ಭಾತ್ರಾ ಮುಂಬರುವ ಏಷ್ಯನ್ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ಗೆ ತಮ್ಮನ್ನು ಭಾರತ ತಂಡದಿಂದ ಕೈಬಿಟ್ಟಿರುವುದನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ರಾಷ್ಟ್ರೀಯ ಶಿಬಿರಕ್ಕೆ ಹಾಜರಾಗದ ಕಾರಣದಿಂದಾಗಿ ಮನಿಕಾ ಅವರನ್ನು ಆಯ್ಕೆಗೆ ಪರಿಗಣಿಸಲಾಗಿಲ್ಲ ಎಂದು ಭಾರತೀಯ ಟೇಬಲ್ ಟೆನಿಸ್ ಒಕ್ಕೂ ಟ (ಟಿಟಿಎಫ್​ಐ) ಈ ಮುನ್ನ ತಿಳಿಸಿತ್ತು. ಏಷ್ಯನ್ ಚಾಂಪಿಯನ್‌ಷಿಪ್ ಸೆಪ್ಟೆಂಬರ್ 28ರಿಂದ ದೋಹಾದಲ್ಲಿ ನಡೆಯಲಿದೆ.

    ಮನಿಕಾ ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಾಲಯ, ಈ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರದ ಅಭಿಪ್ರಾಯವನ್ನು ಕೇಳಿದ್ದು, 2 ದಿನಗಳ ಕಾಲಾವಕಾಶವನ್ನೂ ನೀಡಲಾಗಿದೆ. ಪ್ರಕರಣದ ಮುಂದಿನ ವಿಚಾರಣೆ ಗುರುವಾರ ನಡೆಯಲಿದೆ.

    ಕಳೆದ ಟೋಕಿಯೊ ಒಲಿಂಪಿಕ್ಸ್ ವೇಳೆ ರಾಷ್ಟ್ರೀಯ ಕೋಚ್ ಸೌಮ್ಯದೀಪ್ ರಾಯ್‌ಗೆ ತಮ್ಮ ಪಂದ್ಯದ ವೇಳೆ ಕೋರ್ಟ್ ಪಕ್ಕದಲ್ಲಿ ಕುಳಿತುಕೊಳ್ಳಲು ಬಿಡದೆ ಅಶಿಸ್ತು ಪ್ರದರ್ಶಿಸಿದ್ದಾರೆ ಎಂದು ಟಿಟಿಎಫ್​ಐ ಈ ಮುನ್ನ, ಮನಿಕಾಗೆ ನೋಟಿಸ್ ನೀಡಿತ್ತು. ಇದಕ್ಕೆ ಪ್ರತಿಯಾಗಿ ಮನಿಕಾ, ಈ ಹಿಂದೆ ಒಲಿಂಪಿಕ್ಸ್ ಅರ್ಹತಾ ಸುತ್ತಿನ ವೇಳೆ ಸೌಮ್ಯದೀಪ್ ತಮಗೆ ಪಂದ್ಯ ಕೈಚೆಲ್ಲುವಂತೆ ಹೇಳಿದ್ದರು ಎಂದು ಆರೋಪಿಸಿದ್ದರು. ತಮ್ಮ ಅಕಾಡೆಮಿಯ ವಿದ್ಯಾರ್ಥಿನಿ ಸುತೀರ್ಥ ಮುಖರ್ಜಿ ಒಲಿಂಪಿಕ್ಸ್ ಅರ್ಹತೆ ಗಳಿಸುವಂತೆ ಮಾಡಲು ಅವರು ಈ ಫಿಕ್ಸಿಂಗ್ ಆಮಿಷ ಒಡ್ಡಿದ್ದರು ಎಂದೂ ಮನಿಕಾ ದೂರಿದ್ದರು.

    ಆದರೆ ಮನಿಕಾ ಆಗಲೇ ಯಾಕೆ ಈ ಬಗ್ಗೆ ದೂರು ಸಲ್ಲಿಸರಲಿಲ್ಲ ಎಂದು ಟಿಟಿಎಫ್​ಐ ಆರೋಪವನ್ನು ತಳ್ಳಿಹಾಕಿತ್ತು. ಬಳಿಕ ಅಂತಾರಾಷ್ಟ್ರೀಯ ಟೂರ್ನಿಗಳ ಆಯ್ಕೆಗೆ ಪರಿಗಣಿಸಲು ರಾಷ್ಟ್ರೀಯ ಶಿಬಿರಕ್ಕೆ ಹಾಜರಾತಿ ಕಡ್ಡಾಯಗೊಳಿಸಿತ್ತು. ಆದರೆ ಮನಿಕಾ ತಮ್ಮ ವೈಯಕ್ತಿಕ ಕೋಚ್ ಜತೆಗೆ ಅಭ್ಯಾಸ ನಡೆಸುತ್ತಿದ್ದ ಕಾರಣ ಶಿಬಿರಕ್ಕೆ ಹಾಜರಾಗಿರಲಿಲ್ಲ.

    ಅಫ್ಘಾನಿಸ್ತಾನದಲ್ಲಿ ಐಪಿಎಲ್ ಪಂದ್ಯಗಳ ಪ್ರಸಾರ ನಿಷೇಧಿಸಿದ ತಾಲಿಬಾನಿಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts