More

    ಅಂತರ್ಜಾಲ, ಸಾಮಾಜಿಕ ಮಾಧ್ಯಮಗಳನ್ನು ಮಿತವಾಗಿ ಬಳಸಿ

    ಕಂಪ್ಲಿ: ಅಂತರ್ಜಾಲ, ಸಾಮಾಜಿಕ ಮಾಧ್ಯಮಗಳನ್ನು ಹಿತ-ಮಿತವಾಗಿ ಬಳಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಯುವಜನತೆ ಜಾಗೃತಿ ತೋರಬೇಕು ಎಂದು ಇಲ್ಲಿನ ಸಾಂಗತ್ರಯ ಸಂಸ್ಕೃತ ಪಾಠಶಾಲೆ ನಿವೃತ್ತ ಪ್ರಾಚಾರ್ಯ ಎಂ.ಎಸ್.ಶಶಿಧರಶಾಸ್ತ್ರಿಗಳು ಹೇಳಿದರು.

    ಸಾಮಾಜಿಕ ಮಾಧ್ಯಮ

    ಇಲ್ಲಿನ ಗುರುಮಠದಲ್ಲಿ ಓದ್ಸೋ ಕರಿಬಸಯ್ಯನವರ ಶಿವಾನಂದಾಶ್ರಮದಿಂದ ಶುಕ್ರವಾರ ಹಮ್ಮಿಕೊಂಡಿದ್ದ 225ನೇ ಶಿವಾನುಭವ ಪ್ರವಚನದಲ್ಲಿ ಮಾತನಾಡಿ, ಸಾಮಾಜಿಕ ಜಾಲತಾಣಗಳನ್ನು ಬದುಕಿಗೆ ಪೂರಕವಾಗಿ ಬಳಸಿಕೊಳ್ಳಬೇಕು. ಮನರಂಜನೆ ನೆಪದಲ್ಲಿ ಸಾಮಾಜಿಕ ಜಾಲತಾಣಗಳನ್ನು ತಪ್ಪಾಗಿ ಬಳಸಿದಲ್ಲಿ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

    ಇದನ್ನೂ ಓದಿ:ಹಣ, ಆಸ್ತಿಗಿಂತ ಮಿಗಿಲಾದದ್ದು ಶಿಕ್ಷಣ

    ವಿದ್ಯಾರ್ಥಿಗಳು ಉನ್ನತ ಶಿಕ್ಷಣ, ಹುದ್ದೆಗಳಿಸುವಲ್ಲಿ ಅಂತರ್ಜಾಲ, ಸಾಮಾಜಿಕ ಮಾಧ್ಯಮದ ಬಳಕೆಯಾಗಬೇಕಿದೆ ಎಂದರು.
    ವೀರಶೈವ ಸಂಘದ ಪದಾಧಿಕಾರಿ ಎಸ್.ಡಿ.ಬಸವರಾಜ, ಪಾಠಶಾಲೆ ಸಿದ್ರಾಮಯ್ಯ, ಗುರುಮಠದ ವ್ಯವಸ್ಥಾಪಕ ಎಚ್.ಎಂ.ಜಗದೀಶ, ಅರ್ಚಕ ಕೆ.ಎಂ.ಚಂದ್ರಶೇಖರಸ್ವಾಮಿ, ಎಲೆಕ್ಟ್ರೀಷಿಯನ್ ಯೋಗರಾಜ್, ಸಾಂಗತ್ರಯ ಸಂಸ್ಕೃತ ಪಾಠಶಾಲೆ ವಿದ್ಯಾರ್ಥಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts