More

    ಹಣ, ಆಸ್ತಿಗಿಂತ ಮಿಗಿಲಾದದ್ದು ಶಿಕ್ಷಣ

    ಸೊರಬ: ದೇಶದ ಆಸ್ತಿ ಪ್ರಜೆಗಳೇ ಆಗಿದ್ದು, ಉತ್ತಮ ಪ್ರಜೆಗಳನ್ನು ನಿರ್ಮಾಣ ಮಾಡುವಲ್ಲಿ ಶಿಕ್ಷಣದ ಪಾತ್ರ ಹಿರಿದು ಎಂದು ಶ್ರೀ ಕ್ಷೇತ್ರ ಸಿಗಂದೂರು ಧರ್ಮದರ್ಶಿ ರಾಮಪ್ಪ ಹೇಳಿದರು.
    ಗುರುವಾರ ತಾಲೂಕಿನ ಹೊಸಬಾಳೆ ಗ್ರಾಮದಲ್ಲಿ ಶಕುಂತಲಾ ಪ್ರೌಢಶಾಲೆಯ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಹಣ, ಆಸ್ತಿಗಿಂತ ಮಿಗಿಲಾದದ್ದು ಶಿಕ್ಷಣ. ನಾರಾಯಣಗುರುಗಳು ಕೂಡ ಶಿಕ್ಷಣ, ಸಂಘಟನೆಗೆ ಒತ್ತು ನೀಡಿದ್ದರು. ಗ್ರಾಮೀಣ ಶಾಲಾ ಪ್ರಗತಿಯಲ್ಲಿ ಪಾಲಾಕರ ಪಾತ್ರವೂ ಹಿರಿದಾಗಿರಬೇಕು. ಸಿಕ್ಕಿರುವ ಅವಕಾಶಗಳನ್ನು ಶಾಂತಿ, ಸಮಾಧಾನದಿಂದ ಉತ್ತಮ ರೀತಿಯಲ್ಲಿ ಬಳಸಿಕೊಂಡಾಗ ಮಾತ್ರ ಸಮಾಜ ನಮ್ಮ ಬೆನ್ನಿಗೆ ನಿಲ್ಲುತ್ತದೆ ಎಂದರು.
    ಸಂಸ್ಥೆಯ ಅಧ್ಯಕ್ಷ ಕೆ.ಅಜ್ಜಪ್ಪ ಮಾತನಾಡಿ, ಸದುದ್ದೇಶ ಇಟ್ಟುಕೊಂಡು ಆರಂಭಿಸಿದ ಶಕುಂತಲಾ ಪ್ರೌಢಶಾಲೆ ಇಂದು ಜನಮನ್ನಣೆ ಪಡೆದುಕೊಂಡಿದೆ. ಇಲ್ಲಿ ಅಧ್ಯಯನ ಮಾಡಿದ ಬಹುಪಾಲು ವಿದ್ಯಾರ್ಥಿಗಳು ಉದ್ಯೋಗ ಪಡೆಯುವ ಜತೆಗೆ ಉನ್ನತ ಸ್ಥಾನಮಾನ ಹೊಂದಿದ್ದಾರೆ. ಕ್ರೀಡೆ, ಸಾಂಸ್ಕøತಿಕ ಕ್ಷೇತ್ರದಲ್ಲೂ ಶಾಲೆ ಗುರುತಿಸಿಕೊಂಡಿದೆ ಎಂದು ತಿಳಿಸಿದರು.
    ಸಂಸ್ಥೆಯ ಕಾರ್ಯದರ್ಶಿ ಎಚ್.ಎಸ್.ವೀರಭದ್ರಪ್ಪ, ಹೊಸಬಾಳೆ ಗ್ರಾಪಂ ಅಧ್ಯಕ್ಷ ಭುಜೇಂದ್ರ, ಉಪಾಧ್ಯಕ್ಷೆ ವಿನೋದಾ ಪರಸಪ್ಪ, ಸದಸ್ಯೆ ರೋಹಿಣಿ, ಪಿಎಸಿಎಸ್ ಅಧ್ಯಕ್ಷ ಕುಮಾರ್, ರಾಜಾರಾಂ ಹೆಗಡೆ, ಶಿವಕುಮಾರ ಸ್ವಾಮಿ, ನಾಗರಾಜ್ ಕೈಸೋಡಿ, ನಿಂಗಪ್ಪ, ತಿಮ್ಮಣ್ಣ, ಚಂದ್ರಶೇಖರ್, ವಿನಾಯಕ ರಾವ್, ಸಂತೋಷ್, ಮುಖ್ಯಶಿಕ್ಷಕ ಕೆ.ಮಂಜಪ್ಪ, ಶಿಕ್ಷಕರಾದ ಈರಪ್ಪಯ್ಯ, ಧರ್ಮಪ್ಪ, ಶಿವಪ್ಪ, ನಾರಾಯಣಸ್ವಾಮಿ, ಗುತ್ಯಪ್ಪ, ಗಂಗಾಧರ್, ಎಸ್.ಸೀಮಾ, ಶರಾವತಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts