More

    ನೂರಾರು ಭಾರತೀಯರನ್ನು ಗಡಿಪಾರು ಮಾಡಿದ ಅಮೆರಿಕ, ಉಳಿದವರ ಸ್ಥಿತಿ ಅಯೋಮಯ!

    ವಾಷಿಂಗ್ಟನ್: ಅಮೆರಿಕದಲ್ಲಿ ಉದ್ಯೋಗ, ಶಿಕ್ಷಣಕ್ಕಾಗಿ ಹೋಗುತ್ತಿರುವ ಭಾರತೀಯರ ಪ್ರಮಾಣ ಅತ್ಯಧಿಕ ಸಂಖ್ಯೆಯಲ್ಲಿದೆ. ಆದರೆ ಇದೀಗ 161 ಭಾರತೀಯರನ್ನು ಅಮೆರಿಕ ಗಡಿಪಾರು ಮಾಡಿದೆ.

    ಅಷ್ಟಕ್ಕೂ ಇಂಥದ್ದೊಂದು ಆದೇಶ ಹೊರಬೀಳಲು ಕಾರಣ ಇವರೆಲ್ಲರೂ ದಕ್ಷಿಣ ಗಡಿಭಾಗವಾದ ಮೆಕ್ಸಿಕೋದಿಂದ ಕಾನೂನು ಬಾಹಿರವಾಗಿ ಅಮೆರಿಕಕ್ಕೆ ನುಸುಳಿದ್ದರು. ಇವರ ಪೈಕಿ ಮೂವರು ಮಹಿಳೆಯರು ಇದ್ದಾರೆ.

    ಅಕ್ರಮವಾಗಿ ಅಮೆರಿಕದೊಳಕ್ಕೆ ಪ್ರವೇಶಿಸಿದ್ದ 1,739 ಭಾರತೀಯರು ಅಮೆರಿಕದ 95 ಜೈಲುಗಳಲ್ಲಿ ಬಂಧಿಯಾಗಿರುವುದಾಗಿ ಉತ್ತರ ಅಮೆರಿಕನ್ ಪಂಜಾಬಿ ಅಸೋಸಿಯೇಷನ್(ಎನ್ ಎಪಿಎ)ನ ಕಾರ್ಯಕಾರಿ ನಿರ್ದೇಶಕ ಸಟ್ನಾಮ್ ಸಿಂಗ್ ತಿಳಿಸಿದ್ದಾರೆ. ಗಡಿಪಾರು ಮಾಡಿರುವವರನ್ನು ಹೊರತುಪಡಿಸಿ ಉಳಿದವರ ಬಗ್ಗೆ ಯಾವುದೇ ಮಾಹಿತಿ ನೀಡಲು ಅವರು ನಿರಾಕರಿಸಿದ್ದಾರೆ!

    ಇದನ್ನೂ ಓದಿ: VIDEO: “ಆತ್ಮನಿರ್ಭರ್​ ಭಾರತ್​”ಗೆ ಸುಪ್ರಸಿದ್ಧ ಸಂಗೀತಗಾರರಿಂದ ಹೀಗೊಂದು ನಮನ… ಟ್ವಿಟರ್​ನಲ್ಲಿ ಶ್ಲಾಘನೆಗಳ ಮಹಾಪೂರ…​

    ಗಡಿಪಾರಾದ ಎಲ್ಲರನ್ನೂ ವಿಶೇಷ ವಿಮಾನದಲ್ಲಿ ಪಂಜಾಬ್​ನ ಅಮೃತಸರಕ್ಕೆ ಕಳುಹಿಸಲಾಗಿದೆ. ಇದರಲ್ಲಿ ಹರಿಯಾಣದ 76 ಮಂದಿ, ಪಂಜಾಬ್​ನ 56, ಗುಜರಾತ್​ನ 12, ಉತ್ತರಪ್ರದೇಶದ 5, ಮಹಾರಾಷ್ಟ್ರದ 4, ಕೇರಳ, ತೆಲಂಗಾಣ, ತಮಿಳುನಾಡಿನ ತಲಾ ಇಬ್ಬರು ಹಾಗೂ ಆಂಧ್ರಪ್ರದೇಶ ಮತ್ತು ಗೋವಾದ ಒಬ್ಬರು ಸೇರಿದ್ದಾರೆ.

    ಅಷ್ಟಕ್ಕೂ ಈ ರೀತಿ ಗಡಿಪಾರು ಮಾಡುತ್ತಿರುವುದು ಇದೇ ಮೊದಲಲ್ಲ. ಐಸಿಇ (ಇಮಿಗ್ರೇಶನ್ ಆ್ಯಂಡ್ ಕಸ್ಟಮ್ಸ್ ಎನ್ ಫೋರ್ಸ್ ಮೆಂಟ್) ವರದಿ ಪ್ರಕಾರ, 2018ರಲ್ಲಿ ಅಮೆರಿಕ 611 ಭಾರತೀಯರು ಹಾಗೂ 2019ರಂದು 1,616 ಮಂದಿಯನ್ನು ಗಡಿಪಾರು ಮಾಡಿತ್ತು.

    ಇದನ್ನೂ ಓದಿ: ಕರ್ನಾಟಕದ ಮೇಲೆ ಕರೊನಾ ಕೆಂಗಣ್ಣು- ಬೆಂಬಿಡದ ಮುಂಬೈ ನಂಟು… ಅರ್ಧ ದಿನದಲ್ಲೇ 84 ಪ್ರಕರಣ!

    ಅಷ್ಟಕ್ಕೂ ಇವರೆಲ್ಲಾ ಅಕ್ರಮವಾಗಿ ಅಮೆರಿಕ ಪ್ರವೇಶಿಸುವ ಹಿಂದೆಯೂ ಶಾಕಿಂಗ್​ ಸುದ್ದಿ ಇದೆ. ಅದೇನೆಂದರೆ, ಇವರ ಪೈಕಿ ಹೆಚ್ಚಿನವರು ಭಾರತದಲ್ಲಿ ವಿವಿಧ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿ ಕೋರ್ಟ್​ ಕೇಸ್​ ಎದುರಿಸುತ್ತಿರುವವರು. ಭಾರತದ ಕೋರ್ಟ್​ಗಳಲ್ಲಿ ವಾರೆಂಟ್​ ಜಾರಿಯಾಗಿದ್ದಲ್ಲಿ ಅಥವಾ ಅವರು ಬಂಧನಕ್ಕೆ ಒಳಗಾಗುವ ಸಾಧ್ಯತೆ ಇರುವವರನ್ನೇ ಕೆಲವು ಮಧ್ಯವರ್ತಿಗಳು ಟಾರ್ಗೆಟ್​ ಮಾಡುತ್ತಾರೆ.

    ಜೈಲಿನಿಂದ ತಪ್ಪಿಸಿಕೊಂಡರೆ ಸಾಕು ಎನ್ನುತ್ತಿರುವ ಈ ಆರೋಪಿಗಳು ಸುಲಭದಲ್ಲಿ ದಲ್ಲಾಳಿಗಳ ಮಾತಿಗೆ ಸೋಲುತ್ತಾರೆ. ಅಮೆರಿಕ ಸೇರಿದಂತೆ ಕೆಲವು ದೇಶಗಳಿಗೆ ಇಂಥವನ್ನು ಸಾಗಹಾಕಲು ಯಶಸ್ವಿಯಾಗುತ್ತಿರುವ ದಲ್ಲಾಳಿಗಳು ಅಲ್ಲಿ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವ ವಾಗ್ದಾನ ಮಾಡಿರುತ್ತಾರೆ. ಇದರಿಂದ ಒಬ್ಬೊಬ್ಬರಿಂದ 35 ರಿಂದ 40 ಲಕ್ಷ ರೂಪಾಯಿವರೆಗೂ ವಸೂಲಿ ಮಾಡುತ್ತಾರೆ. ಈ ಕುಕೃತ್ಯಕ್ಕೆ ಕೆಲವು ಅಧಿಕಾರಿಗಳೂ ಸಾಥ್​ ನೀಡುತ್ತಿದ್ದಾರೆ.

    ಇದನ್ನೂ ಓದಿ: ಸೈಕಲ್​ ಕದ್ದ, ಚೀಟಿ ಬರೆದಿಟ್ಟ- ಅದನ್ನು ಓದಿದ ಸೈಕಲ್​ ಮಾಲೀಕ ಕಣ್ಣೀರಾದ… ಅಂಥದ್ದೇನಿತ್ತು ಆ ಚೀಟಿಯಲ್ಲಿ?

    ಎಷ್ಟೇ ದುಡ್ಡು ಖರ್ಚಾದರೂ ಪರವಾಗಿಲ್ಲ ಎಂದುಕೊಳ್ಳುವ ಈ ಆರೋಪಿಗಳು ಅಧಿಕಾರಿಗಳ ಕಣ್ಣು ತಪ್ಪಿಸಿ ಅಕ್ರಮವಾಗಿ ನುಸುಳಲು ಶಕ್ಯರಾಗಿರುತ್ತಾರೆ. ಆದರೆ ಅಮೆರಿಕದಲ್ಲಿ ಇಂಥ ವಲಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಂಧಿಯಾಗುತ್ತಿದ್ದು, ಅಲ್ಲಿನ ಜೈಲುಗಳಲ್ಲಿ ಇದ್ದಾರೆ. ಕೆಲವರನ್ನು ಗಡಿಪಾರು ಮಾಡಿದರೆ, ಇನ್ನು ಕೆಲವರು ಅಲ್ಲಿಯ ಜೈಲುಗಳಿಂದ ಹೊರಬರದೇ ಒದ್ದಾಡುತ್ತಿರುತ್ತಾರೆ.

    ಈ ಬಗ್ಗೆ ಪಂಜಾಬ್​ ಸರ್ಕಾರ ಸಾಕಷ್ಟು ಕ್ರಮ ತೆಗೆದುಕೊಳ್ಳುತ್ತಿದ್ದರೂ ಪ್ರಯೋಜನ ಆಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts