More

    ಏಳು ಲಕ್ಷ ದಾಟಿತು ಕರೊನಾ ಸೋಂಕುಪೀಡಿತರ ಸಂಖ್ಯೆ ಅಮೆರಿಕದಲ್ಲಿ…

    ವಾಷಿಂಗ್ಟನ್​:ಕರೊನಾ COVID 19 ಸೋಂಕು ಪೀಡಿತರ ಸಂಖ್ಯೆ ಅಮೆರಿಕದಲ್ಲಿ 7 ಲಕ್ಷದ ಗಡಿದಾಟಿದೆ. ಆ ಮೂಲಕ ಅತಿಹೆಚ್ಚು ಸೋಂಕುಪೀಡಿತರನ್ನು ಹೊಂದಿದ ರಾಷ್ಟ್ರವಾಗಿ ಅಮೆರಿಕ ಕಾಣಿಸಿಕೊಂಡಿದೆ. ಜಾನ್ಸ್​ ಹಾಪ್​ಕಿನ್ಸ್​ ಯೂನಿವರ್ಸಿಟಿ ಅಮೆರಿಕದ ಡೇಟಾವನ್ಜು ಗಮನಿಸುತ್ತಿದ್ದು, ಅದರ ಅಂಕಿ ಅಂಶ ಪ್ರಕಾರವೇ 7 ಲಕ್ಷ ಪಾಸಿಟಿವ್ ಕೇಸ್​ಗಳು ಅಲ್ಲಿ ದೃಢಪಟ್ಟಿವೆ.

    ಜಗತ್ತಿನಲ್ಲಿ ಅತಿಹೆಚ್ಚು ಅಂದರೆ 7,00,282 ಕರೊನಾ ಪಾಸಿಟಿವ್ ಕೇಸ್​ಗಳೊಂದಿಗೆ ಅಮೆರಿಕ ಮುಂಚೂಣಿಯಲ್ಲಿದೆ.ಸ್ಥಳೀಯ ಕಾಲಮಾನ ಶುಕ್ರವಾರ ರಾತ್ರಿ 8.30ರ ಅಂಕಿ ಅಂಶಗಳ ಪ್ರಕಾರ ಈ ಡೇಟಾ ಇದ್ದು, 36,773 ಜನ ಮೃತಪಟ್ಟಿದ್ದಾರೆ. ಕಳೆದ 24 ಗಂಟೆಗಳ ಅವಧಿಯಲ್ಲಿ 3,856 ಸಾವು ಸಂಭವಿಸಿದೆ ಎಂದು ಬಾಲ್ಟಿಮೋರ್​ನಲ್ಲಿರುವ ಈ ಜಾನ್ಸ್​ ಹಾಪ್​ಕಿನ್ಸ್ ಯೂನಿವರ್ಸಿಟಿ ಹೇಳುತ್ತಿದೆ.

    ನ್ಯೂಯಾರ್ಕ್​ ನಗರದಲ್ಲಿ ಈ ವಾರ ಸಂಭವಿಸಿರುವ ಸಾವಿನ ಸಂಖ್ಯೆ ಅಂದಾಜು 3,778 ಆಗಿರಬಹುದು. ಅಮೆರಿಕದ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಶನ್​ ಹೇಳುವ ಪ್ರಕಾರ ಶುಕ್ರವಾರ ರಾತ್ರಿ ತನಕ 33,049 ಜನ ಸಾವನ್ನಪ್ಪಿದ್ದಾರೆ. ಇದರಲ್ಲಿ 4,226 ಸೋಂಕು ಪೀಡಿತರು ಇರಬಹುದೆಂಬ ಶಂಕೆಯುಳ್ಳವರ ಸಂಖ್ಯೆಯೂ ಸೇರಿಕೊಂಡಿದೆ.

    ಜಾಗತಿಕವಾಗಿ ಗಮನಿಸಿದರೆ ಅಮೆರಿಕದ ನಂತರದ ಸ್ಥಾನದಲ್ಲಿ ಇಟೆಲಿ ಇದ್ದು ಅಲ್ಲಿ 22,745 ಜನ ಸಾವನ್ನಪ್ಪಿದ್ದಾರೆ. ಸ್ಪೇನ್​ನಲ್ಲಿ 19,478 ಜನ, ಫ್ರಾನ್ಸ್​ನಲ್ಲಿ 18,681 ಜನ, ಬ್ರಿಟನ್​ನಲ್ಲಿ 14,576ಜನ ಸಾವನ್ನಪ್ಪಿದ್ದಾರೆ.(ಏಜೆನ್ಸೀಸ್)

    VIDEO| ದೆವ್ವ ಬಂತು ದೆವ್ವ!: ಕರೊನಾ ಲಾಕ್​ಡೌನ್ ಶುರುವಾದಾಗಿನಿಂದ ಈ ಗ್ರಾಮದಲ್ಲಿ ದೆವ್ವದ್ದೇ ಕಾಟ…

    ಒಂದೇ ಒಂದು ಆ್ಯಪಲ್​ ನಿಂದಾಯಿತು ಭಾರಿ ಅನಾಹುತ!- ಡಿಎನ್​ಎ ಪರೀಕ್ಷೆ ಮಾಡಿ ಅದನ್ನು ಹಿಡಿದವರನ್ನು ಪತ್ತೆ ಹಚ್ಚಿದ ಪೊಲೀಸರು- ಮುಂದೇನಾಯಿತು?!!!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts