More

    ಮಾರಕ ವೈರಸ್​ ಕೊರೊನಾ ಭೀತಿ; ಭಾರತ, ಇರಾನ್​ನಂತಹ ದೇಶಗಳ ಮೇಲೆ ಅಮೆರಿಕ ಗುಪ್ತಚರ ಸಂಸ್ಥೆ ಕಣ್ಣು!

    ವಾಷಿಂಗ್ಟನ್​: ಜಾಗತಿಕವಾಗಿ ಆತಂಕಕ್ಕೆ ಕಾರಣವಾಗಿರುವ ಕೊರೊನಾ ವೈರಸ್​ನ್ನು ನಿಯಂತ್ರಿಸುವ ಬಗ್ಗೆ ಅಮೆರಿಕದ ಗುಪ್ತಚರ ಸಂಸ್ಥೆಗಳು ಕಣ್ಣಿಟ್ಟಿವೆ. ವೈರಸ್​ ಜಾಗತಿಕವಾಗಿ ಹರಡುತ್ತಿದ್ದು, ಇದಕ್ಕೆ ವಿವಿಧ ದೇಶದ ಸರ್ಕಾರಗಳು ಹೇಗೆ ಸ್ಪಂದಿಸುತ್ತಿವೆ ಎಂಬ ಬಗ್ಗೆ ನಿಗಾ ವಹಿಸಿವೆ.

    ಅಲ್ಲದೆ ಮಾರಕ ವೈರಸ್​ ತಡೆಯಲು ಭಾರತ ಹೇಗೆ ಸನ್ನದ್ಧವಾಗಿದೆ ಎಂಬ ಬಗ್ಗೆ ಯುಎಸ್​ ಗುಪ್ತಚರ ಸಂಸ್ಥೆ ಆತಂಕ ವ್ಯಕ್ತಪಡಿಸಿದೆ ಎಂದು ತಿಳಿದು ಬಂದಿದೆ. ಭಾರತದಲ್ಲಿ ಮಾರಕ ವೈರಸ್​ನ ಆತಂಕಗಳಿದ್ದರೂ ಇಲ್ಲಿ ಕೇವಲ ಬೆರಳೆಣಿಕೆಯ ಶಂಕಿತರು ಮಾತ್ರ ಇದ್ದಾರೆ. ಆದರೂ ಜನಸಂಖ್ಯೆ ಹೆಚ್ಚಳ ಇರುವ ಕಾರಣ ಬಲು ಬೇಗ ರೋಗ ಹರಡಲು ಕಾರಣವಾಗುತ್ತದೆ. ಇದರಿಂದ ಆತಂಕ ಹೆಚ್ಚಿದೆ.

    ಯುಎಸ್​ ಗುಪ್ತಚರ ಸಂಸ್ಥೆಯು ಇರಾನ್​ ಮೇಲೆ ತೀವ್ರ ನಿಗಾ ವಹಿಸಿದೆ. ಏಕೆಂದರೆ ಅಲ್ಲಿ ಮಾರಕ ವೈರಸ್​ ಕಾಣಿಸಿಕೊಂಡಿದ್ದು ಆತಂಕವಾದರೆ, ಅಲ್ಲಿನ ಆರೋಗ್ಯ ಉಪ ಸಚಿವರೇ ವೈರಸ್​ ಪೀಡಿತರಾಗಿದ್ದಾರೆ.

    ಅಮೆರಿಕವು ಮಾರಕ ವೈರಸ್​ ಕೊರೊನಾ ಎದುರಿಸುವಲ್ಲಿ ಸಫಲವಾಗದ ದೇಶಗಳ ಬಗ್ಗೆ ಹೆಚ್ಚು ಆತಂಕ ವ್ಯಕ್ತಪಡಿಸಿದೆ. ಮುಂದುವರಿಯುತ್ತಿರುವ ದೇಶಗಳು ಹೇಗೆ ರೋಗವನ್ನು ನಿಯಂತ್ರಿಸುತ್ತವೆ ಎನ್ನುವ ಬಗ್ಗೆ ಗಮನ ಹರಿಸಲಾಗುತ್ತಿದೆ ಎಂದು ಯುಎಸ್​ ಕಾರ್ಯದರ್ಶಿ ಮೈಕ್​ ಪೊಂಪೆ ತಿಳಿಸಿದ್ದಾರೆ.

    ಅಲ್ಲಿನ ಗುಪ್ತಚರ ಅಧಿಕಾರಿಗಳು ಯುಎಸ್​ನ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಇಂಟೆಲಿಜೆನ್ಸ್ ಕಮಿಟಿಗೆ ಈ ಬಗ್ಗೆ ವರದಿ ನೀಡಿದ್ದಾರೆ. ಜತೆಗೆ ಈ ಕಮಿಟಿ, ಗುಪ್ತಚರ ಅಧಿಕಾರಿಗಳಿಂದ ಪ್ರತಿನಿತ್ಯದ ಆಗುಹೋಗುಗಳನ್ನು ವರದಿ ಪಡೆಯುತ್ತಿದೆ.

    ರಾಷ್ಟ್ರೀಯ ಭದ್ರತೆ ಮತ್ತು ಆರ್ಥಿಕ ಆಯಾಮಗಳ ಮೇರೆಗೆ ಆಯಾ ದೇಶಗಳ ಸ್ಥಿತಿಯನ್ನು ನಿರ್ಧರಿಸಲಾಗುತ್ತದೆ. ಅಲ್ಲದೆ ಆ ದೇಶಗಳ ಸರ್ಕಾರಗಳ ಪ್ರಯತ್ನದ ಬಗ್ಗೆ ಹಾಗೂ ಮಾರಕ ವೈರಸ್​ ಏಕಾಏಕಿ ಹರಡುವಿಕೆಯನ್ನು ಮೇಲ್ವಿಚಾರಣೆ ಮಾಡುವಲ್ಲಿ ಕಮಿಟಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಕಮಿಟಿ ಅಧಿಕಾರಿಗಳು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

    ವೈರಸ್ ಪ್ರಭಾವವನ್ನು ಪತ್ತೆಹಚ್ಚಲು ಯುಎಸ್ ಏಜೆನ್ಸಿಗಳು ರಹಸ್ಯ ಮಾಹಿತಿದಾರರು ಅಷ್ಟೇ ಅಲ್ಲದೆ, ಎಲೆಕ್ಟ್ರಾನಿಕ್ ಕದ್ದಾಲಿಕೆ ಸಾಧನಗಳವರೆಗೆ ಹಲವು ಶ್ರೇಣಿಯ ಗುಪ್ತಚರ ಸಾಧನಗಳನ್ನು ಬಳಸುತ್ತಿವೆ ಎಂಬ ಮಾಹಿತಿ ಮಾಧ್ಯಮಗಳಿಗೆ ದೊರೆತಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts