More

    ಭಾರತದೊಂದಿಗೆ ಗಡಿ ಕ್ಯಾತೆ ತೆಗೆದ ಚೀನಾ ಸ್ವಾಟೆಗೆ ತಿವಿದ ಅಮೆರಿಕ

    ನವದೆಹಲಿ: ದಕ್ಷಿಣ ಚೀನಾ ಸಮುದ್ರವೇ ಇರಲಿ, ಭಾರತದೊಂದಿಗಿನ ಗಡಿ ಪ್ರದೇಶವೇ ಇರಲಿ, ಚೀನಾದ್ದು ಸದಾ ಕಾಲ್ಕೆರೆದು ಜಗಳ ಕಾಯುವ, ಅಧಿಕಾರ ಚಲಾಯಿಸುವ ಬುದ್ಧಿ ಎಂದು ಅಮೆರಿಕ ಆಕ್ರೋಶ ವ್ಯಕ್ತಪಡಿಸಿದೆ.

    ಚೀನಾದ ಅತಿಕ್ರಮಣವೆಂದರೆ ಬಾಯಿಮಾತಿನ ಆಕ್ರೋಶವಲ್ಲ, ಅದು ನಮ್ಮನ್ನು ಜಗಳಕ್ಕೆ ಪ್ರಚೋದಿಸುವ ಹಾಗೂ ತೊಂದರೆಯನ್ನುಂಟು ಮಾಡುವ ಕೃತ್ಯವಾಗಿವೆ ಎಂದು ಅಮೆರಿಕದ ಹಿರಿಯ ವಿದೇಶಾಂಗ ಅಧಿಕಾರಿ ಆಲೀಸ್​ ವೇಲ್ಸ್​ ವಾಗ್ದಾಳಿ ನಡೆಸಿದ್ದಾರೆ.

    ಇದನ್ನೂ ಓದಿ; 25 ವರ್ಷಗಳ ಹಿಂದೆ ವಶಕ್ಕೆ ಪಡೆದ ಪಂಚೇನ್​ ಲಾಮಾ ಎಲ್ಲಿದ್ದಾರೆ? ಅಮೆರಿಕ ಪ್ರಶ್ನೆಗೆ ಅಚ್ಚರಿಯ ಉತ್ತರ ನೀಡಿದ ಚೀನಾ 

    ಈವರೆಗೆ ಚೀನಾ ವಿರುದ್ಧ ಹರಿಹಾಯುತ್ತಿದ್ದ ಅಮೆರಿಕ, ಈಗ ಬಹಿರಂಗವಾಗಿಯೇ ಭಾರತದ ಬೆನ್ನಿಗೆ ನಿಂತಿದೆ. ಚೀನಾ ಅತಿಕ್ರಮಣಕಾರಿ ನೀತಿಯನ್ನು ನಿಗ್ರಹಿಸಲು ಸಂಪೂರ್ಣ ಸಜ್ಜಾದಂತಾಗಿದೆ.

    ಭಾರತದೊಂದಿಗೆ ಚೀನಾ ಗಡಿ ತಂಟೆ ತೆಗೆಯುವುದು ಇದು ಹೊಸದೇನಲ್ಲ. ಈ ವರ್ಷ ಲಡಾಖ್​ನಲ್ಲಿ ಭಾರತೀಯ ಗಡಿ ಭಾಗದಲ್ಲಿ ಚಟುವಟಿಕೆಗಳನ್ನು ನಡೆಸುವ ಮೂಲಕ ಅಲ್ಲಿನ ಭದ್ರತೆಗೆ ಆತಂಕವನ್ನು ತಂದೊಡ್ಡಿತ್ತು. ಸಿಕ್ಕಿಂನ ನಾಕು ಲಾ ಗಡಿಯಲ್ಲೂ ಚೀನಾ ತಂಟೆ ತಗೆಯುತ್ತಲೇ ಇದೆ. ಪಾನ್​ಗಾಂಗ್​ ತ್ಸೊ ನದಿಯ ಉತ್ತರ ತಟದ ಬಳಿಕ ಲಡಾಖ್​ನ ಗಲ್ವಾನ್​ ಬಳಿ ಬೀಡು ಬಿಟ್ಟಿದೆ. ಇದು ಭಾರತದ ಆತಂಕಕ್ಕೆ ಕಾರಣವಾಗಿದೆ.

    ಇದನ್ನೂ ಓದಿ; ಸಂಬಳ ಕಡಿತ ಮಾಡಲ್ಲ, ಬೋನಸ್ಸೂ ಕೊಡ್ತೀವಿ…! ಈ ಕಂಪನಿ ಉದ್ಯೋಗಿಗಳೇ ಧನ್ಯರು 

    ಗಡಿ ಪ್ರದೇಶದಲ್ಲಿ ಚೀನಾ ಇನ್ನಿಲ್ಲದ ಚಟುವಟಿಕೆಗಳನ್ನು ನಡೆಸುತ್ತಿರುವುದು ಸಹಜವಾಗಿಯೇ ಆ ದೇಶದ ವಿರುದ್ಧ ಅಂತಾರಾಷ್ಟ್ರೀಯ ಸಮುದಾಯ ಒಂದಾಗುವಂತೆ ಮಾಡಿದೆ. ಜಾಗತಿಕವಾಗಿ ಪ್ರತಿಯೊಬ್ಬರಿಗೂ ಪ್ರಯೋಜನಕಾರಿಯಾಗುವ ವ್ಯವಸ್ಥೆಯೊಂದನ್ನು ಜಾರಿಯಾಗುವಂತೆ ನೋಡಿಕೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟಿರುವ ಅಮೆರಿಕ, ಗಡಿ ತಂಟೆಗಳು ಚೀನಾದಿಂದ ಎದುರಾಗುತ್ತಿರುವ ಅಪಾಯಗಳಿಗೆ ಸಾಕ್ಷಿಯಾಗಿದೆ ಎಂದು ಅಮೆರಿಕ ಬಣ್ಣಿಸಿದೆ.

    ಇದಲ್ಲದೇ, ಚೀನಾ ಪಾರದರ್ಶಕವಲ್ಲದ ಸಾಲ ನೀತಿಯನ್ನು ಅಮೆರಿಕ ಖಂಡಿಸಿದೆ. ಅದರಲ್ಲೂ ಮುಖ್ಯವಾಗಿ ಪಾಕಿಸ್ತಾನಕ್ಕೆ ನೀಡಿರುವ ಆರ್ಥಿಕ ನೆರವಿನಲ್ಲೂ ಚೀನಾ ಲಾಭಕೋರತನವನ್ನು ಮೆರೆದಿದೆ ಎಂದು ಟೀಕಿಸಿದೆ.

    https://www.vijayavani.net/is-it-safe-to-send-children-to-nursery-school/

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts