More

    ಯುಎಸ್​​ನಲ್ಲಿ ಜನಾಂಗೀಯ ದ್ವೇಷದ ವಿರುದ್ಧ ರೊಚ್ಚಿಗೆದ್ದ ಪ್ರತಿಭಟನಾಕಾರರಿಗೆ ಅಧ್ಯಕ್ಷ ಟ್ರಂಪ್​ ಪುತ್ರಿಯ ಬೆಂಬಲ

    ವಾಷಿಂಗ್ಟನ್​: ಅಮೆರಿಕದಲ್ಲಿ ಜನಾಂಗೀಯ ದ್ವೇಷದ ಕಿಚ್ಚು ಅಷ್ಟು ಬೇಗ ತಣಿಯುವಂತೆ ಕಾಣಿಸುತ್ತಿಲ್ಲ. ಕಳೆದೆರಡು ದಿನಗಳಿಗಿಂತಲೂ ಸ್ವಲ್ಪ ಶಾಂತವಾಗಿದ್ದರೂ ಪ್ರತಿಭಟನಾಕಾರರು ಹೋರಾಟದಿಂದ ಹಿಂದೆ ಸರಿಯುತ್ತಿಲ್ಲ. ಈ ಮಧ್ಯೆ ಬಿಳಿಯರು, ಕಪ್ಪುಜನರ ಕ್ಷಮೆ ಕೇಳಿದ ಘಟನೆಯೂ ನಡೆದಿದೆ.

    ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರಂತೂ ಪ್ರತಿಭಟನಾಕಾರರ ವಿರುದ್ಧ ಕಿಡಿಕಾರುತ್ತಿದ್ದಾರೆ. ನಿಮ್ಮನ್ನು ನಿಯಂತ್ರಿಸಲು ಸೇನೆ ಕಳಿಸುತ್ತೇನೆ, ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದಾರೆ. ಅದ್ಯಾವುದಕ್ಕೂ ಜಗ್ಗದ ಪ್ರತಿಭಟನಾಕಾರರು ತಮ್ಮ ಹೋರಾಟವನ್ನು ಮುಂದುವರಿಸಿದ್ದಾರೆ.

    ಇದನ್ನೂ ಓದಿ: PHOTO GALLERY| ಹುಟ್ಟುಹಬ್ಬ ಸಂಭ್ರಮದಲ್ಲಿರೋ ಪ್ರಿಯಾಮಣಿಯವರ ಹಾಟ್​ ಫೋಟೋ ಗ್ಯಾಲರಿ ನಿಮಗಾಗಿ

    ಇಷ್ಟೆಲ್ಲದರ ಮಧ್ಯೆ ಡೊನಾಲ್ಡ್​ ಟ್ರಂಪ್​ ಅವರ ಮಗಳು ಈ ಪ್ರತಿಭಟನಾಕಾರರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಅಮೆರಿಕದಲ್ಲಿ ಮೊದಲಿನಿಂದಲೂ ಇರುವ ಜನಾಂಗೀಯ ದ್ವೇಷದ ವಿರುದ್ಧ ಪಟ್ಟು ಹಿಡಿದು ಹೋರಾಡುತ್ತಿರುವವರಿಗೆ ಅಧ್ಯಕ್ಷರ ಮಗಳು ಟಿಫಾನಿ ಟ್ರಂಪ್​ ಸಾಥ್​ ನೀಡಿದ್ದಾರೆ.

    ಇನ್ಸ್ಟಾಗ್ರಾಂನಲ್ಲಿ ಕಪ್ಪು ಫೋಟೋ ಹಾಕಿರುವ ಟಿಫಾನಿ ಟ್ರಂಪ್​, ಅಮೆರಿಕದ ಲೇಖಕಿ ಹೆಲೆನ್​ ಕೆಲ್ಲರ್​ ಅವರು ಬರೆದ, ‘ನಾವು ಏಕಾಂಗಿಯಾಗಿ ಸ್ವಲ್ಪವನ್ನೇ ಸಾಧಿಸಬಹುದು. ಆದರೆ ಜತೆಯಾಗಿದ್ದರೆ ತುಂಬ ದೊಡ್ಡ ಸಾಧನೆ ಮಾಡಬಹುದು’ ಎಂಬ ಕೋಟ್​​ನ್ನು ಬರೆದಿದ್ದಾರೆ. ಹಾಗೇ, #blackoutTuesday, #justiceforgeorgefloyd ಎಂಬ ಹ್ಯಾಷ್​ಟ್ಯಾಗ್​ ಕೊಟ್ಟಿದ್ದಾರೆ.

    ಟಿಫಾನಿ, ಡೊನಾಲ್ಡ್​ ಟ್ರಂಪ್​ರ ಎರಡನೇ ಪತ್ನಿ ಮಾರ್ಲಾ ಮ್ಯಾಪಲ್ಸ್ ಮಗಳು. ಮಾರ್ಲಾ ಹಾಗೂ ಟ್ರಂಪ್ 1993ರಲ್ಲಿ ವಿವಾಹವಾಗಿ, 1999ರಲ್ಲಿ ವಿಚ್ಛೇದನ ಪಡೆದಿದ್ದಾರೆ.

    ಇದನ್ನೂ ಓದಿ: ರಾಜಧಾನಿಯಲ್ಲಿವೆ 40 ಕಂಟೇನ್ಮೆಂಟ್ ಪ್ರದೇಶ

    ಕಪ್ಪುವರ್ಣೀಯನಾದ ಜಾರ್ಜ್​ ಫ್ಲಾಯ್ಡ್​​ನಲ್ಲಿ ಅಮೆರಿಕದ ಮೂವರು ಶ್ವೇತವರ್ಣೀಯ ಪೊಲೀಸರು ಸೇರಿ ಕೊಂದಿದ್ದರು. ಆಗಿನಿಂದಲೂ ಅಮೆರಿಕದಲ್ಲಿ ಕಪ್ಪುವರ್ಣೀಯರ ಪ್ರತಿಭಟನೆ ಉಗ್ರಸ್ವರೂಪ ಪಡೆದುಕೊಂಡಿದೆ. (ಏಜೆನ್ಸೀಸ್​)

    https://www.instagram.com/p/CA8DwLPhNPe/

    ಭಾರತೀಯ ಕ್ರಿಕೆಟ್​ನಲ್ಲೂ ವರ್ಣಭೇದ!: ದೊಡ್ಡ ಗಣೇಶ್, ಮುಕುಂದ್​ಗೆ ಇನ್ನೂ ಕಾಡುತ್ತಿದೆ ನೆನಪು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts