More

    ಯುಎಸ್ ಓಪನ್‌ನಲ್ಲಿ ಜೋಕೊವಿಕ್‌ಗೆ ಸುಲಭ ಸವಾಲು, ಸೆರೇನಾ ಹಾದಿ ದುರ್ಗಮ

    ನ್ಯೂಯಾರ್ಕ್: ಸೋಮವಾರದಿಂದ ನಡೆಯಲಿರುವ ಯುಎಸ್ ಓಪನ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿಯ ಸಿಂಗಲ್ಸ್ ಡ್ರಾ ಪ್ರಕಟಗೊಂಡಿದೆ. ದಿಗ್ಗಜ ರೋಜರ್ ೆಡರರ್ ಮತ್ತು ಹಾಲಿ ಚಾಂಪಿಯನ್ ರಾೆಲ್ ನಡಾಲ್ ಗೈರಿನಲ್ಲಿ ವಿಶ್ವ ನಂ. 1 ಆಟಗಾರ ನೊವಾಕ್ ಜೋಕೊವಿಕ್ ಸುಲಭ ಸವಾಲು ಪಡೆದಿದ್ದು, 18ನೇ ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆಲುವಿನ ನಿರೀಕ್ಷೆ ಹೆಚ್ಚಿಸಿಕೊಂಡಿದ್ದಾರೆ. ಮತ್ತೊಂದೆಡೆ ಮಹಿಳಾ ಸಿಂಗಲ್ಸ್‌ನಲ್ಲಿ ದಾಖಲೆಯ 24ನೇ ಪ್ರಶಸ್ತಿ ಗೆಲುವಿನ ಹಂಬಲದಲ್ಲಿರುವ ಆತಿಥೇಯ ತಾರೆ ಸೆರೇನಾ ವಿಲಿಯಮ್ಸ್ ಕಠಿಣ ಹಾದಿಯಲ್ಲಿ ಸಾಗಬೇಕಾಗಿದೆ.

    ಕರೊನಾ ಗೆದ್ದು ಬಂದಿರುವ ಜೋಕೊವಿಕ್ ಮೊದಲ ಸುತ್ತಿನಲ್ಲಿ ಬೋಸ್ನಿಯಾದ ಡಮಿರ್ ಜುಮ್‌ಹರ್ ವಿರುದ್ಧ ಸೆಣಸಲಿದ್ದಾರೆ. ಟೂರ್ನಿಯಲ್ಲಿ ಜೋಕೋ ನಂತರದ ಉನ್ನತ ಶ್ರೇಯಾಂಕಿತರಾಗಿರುವ ಆಸ್ಟ್ರಿಯಾದ ಡೊಮಿಕ್ ಥೀಮ್, ವರ್ಷಾರಂಭದ ಆಸ್ಟ್ರೇಲಿಯನ್ ಓಪನ್‌ನಂತೆ ಇಲ್ಲೂ ಫೈನಲ್‌ನಲ್ಲಿ ಎದುರಾಗುವ ಸಾಧ್ಯತೆ ಇದೆ.

    ಕಳೆದ ವರ್ಷದ ಆಸ್ಟ್ರೇಲಿಯನ್ ಓಪನ್ ಬಳಿಕ ಮೊದಲ ಗ್ರಾಂಡ್ ಸ್ಲಾಂ ಆಡಲಿರುವ ಬ್ರಿಟನ್‌ನ ಆಂಡಿ ಮರ‌್ರೆ ಮೊದಲ ಸುತ್ತಿನಲ್ಲಿ ಜಪಾನ್‌ನ ಯೊಶಿಹಿಟೊ ನಿಶಿಯೊಕಾ ಸವಾಲು ಎದುರಿಸಲಿದ್ದಾರೆ. ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಅಗ್ರ 10 ರ‌್ಯಾಂಕ್ ಪೈಕಿ 6 ಆಟಗಾರ್ತಿಯರು ಕರೊನಾ ಭೀತಿಯಿಂದ ಗೈರಾಗಿರುವ ನಡುವೆ, ಜೆಕ್ ಗಣರಾಜ್ಯದ ಕ್ಯಾರೊಲಿನಾ ಪ್ಲಿಸ್ಕೋವಾ ಅಗ್ರ ಶ್ರೇಯಾಂಕ ಪಡೆದಿದ್ದಾರೆ. ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಸೋಫಿಯಾ ಕೆನಿನ್ 2ನೇ ಶ್ರೇಯಾಂಕ ಪಡೆದಿದ್ದಾರೆ.

    ಇದನ್ನೂ ಓದಿ:  ರೊನಾಲ್ಡೊ-ಮೆಸ್ಸಿ ಒಂದೇ ತಂಡದಲ್ಲಿ ಆಡ್ತಾರಾ? ಜುವೆಂಟಸ್ ಕ್ಲಬ್​ ಹೇಳೋದೇನು?

    ಸೆರೇನಾ ವಿಲಿಯಮ್ಸ್ 3ನೇ ಶ್ರೇಯಾಂಕ ಪಡೆದಿದ್ದು, ಮೊದಲ ಸುತ್ತಿನಲ್ಲಿ ಕ್ರಿಸ್ಟಿ ಅಹ್ನ್‌ರನ್ನು ಎದುರಿಸಲಿದ್ದಾರೆ. ಅಕ್ಕ ವೀನಸ್ ವಿಲಿಯಮ್ಸ್, ಸೆರೇನಾಗೆ ಸೆಮೀಸ್‌ನಲ್ಲಿ ಎದುರಾಗುವ ಸಾಧ್ಯತೆ ಇದೆ. ಫೈನಲ್ ಹಾದಿಯಲ್ಲಿ ಅಮೆರಿಕದ ಆಟಗಾರ್ತಿಯರೇ ಹೆಚ್ಚಾಗಿ ಎದುರಾಗುವಂಥ ಡ್ರಾವನ್ನು ಸೆರೇನಾ ಪಡೆದಿದ್ದಾರೆ. ಮಾಜಿ ಚಾಂಪಿಯನ್ ನವೊಮಿ ಒಸಾಕಗೆ ಜಪಾನ್‌ನವರೇ ಆದ ಮಿಸಕಿ ಡೊಯಿ ಅವರಿಂದ ಮೊದಲ ಸವಾಲು ಎದುರಾಗಲಿದೆ.

    ಕರೊನಾ ವೈರಸ್ ಹಾವಳಿಯಿಂದಾಗಿ ಈ ಬಾರಿ ವರ್ಷದ 2ನೇ ಗ್ರಾಂಡ್ ಸ್ಲಾಂ ಟೂರ್ನಿಯಾಗಿ ನಡೆಯಲಿರುವ ಯುಎಸ್ ಓಪನ್, ಪ್ರೇಕ್ಷಕರಿಲ್ಲದೆ ಖಾಲಿ ಕ್ರೀಡಾಂಗಣದಲ್ಲಿ ಸಾಗಲಿದೆ.

    ನಗಾಲ್‌ಗೆ ಬ್ರಾಡ್ಲಿ ಚಾಲೆಂಜ್
    ಪ್ರಧಾನ ಸುತ್ತಿಗೆ ನೇರಪ್ರವೇಶ ಪಡೆದಿರುವ ಭಾರತದ ನಂ. 1 ಸಿಂಗಲ್ಸ್ ಆಟಗಾರ ಸುಮಿತ್ ನಗಾಲ್ ಮೊದಲ ಸುತ್ತಿನಲ್ಲಿ ಅಮೆರಿಕದ ಬ್ರಾಡ್ಲಿ ಕ್ಲಾನ್ ಅವರನ್ನು ಎದುರಿಸಲಿದ್ದಾರೆ. ಈ ಸವಾಲು ಗೆದ್ದರೆ ಅವರಿಗೆ 2ನೇ ಸುತ್ತಿನಲ್ಲಿ ವಿಶ್ವ ನಂ. 3 ಡೊಮಿನಿಕ್ ಥೀಮ್ ಎದುರಾಗಲಿದ್ದಾರೆ. ವಿಶ್ವ ನಂ. 122 ಆಟಗಾರ ಸುಮಿತ್ ನಗಾಲ್‌ಗಿಂತ ಬ್ರಾಡ್ಲಿ ವಿಶ್ವ ರ‌್ಯಾಂಕಿಂಗ್‌ನಲ್ಲಿ 6 ಸ್ಥಾನ ಕೆಳಗಿದ್ದಾರೆ. ಆದರೆ ತವರಿನ ವಾತಾವರಣದಲ್ಲಿ ಆಡಲಿರುವುದು ಬ್ರಾಡ್ಲಿಗೆ ಲಾಭದಾಯಕವಾಗಿದೆ. ನಗಾಲ್ ಈ ಟೂರ್ನಿಗೆ ಮುನ್ನ ಪ್ರಾಗ್ ಓಪನ್ ಚಾಲೆಂಜರ್ ಟೂರ್ನಿಯಲ್ಲಿ ಕ್ವಾರ್ಟರ್​ಫೈನಲ್‌ಗೇರಿ ಉತ್ತಮ ಲಯದಲ್ಲಿದ್ದಾರೆ.

    ಸೋಷಿಯಲ್ ಮೀಡಿಯಾದಲ್ಲಿ ಹೊಸ ದಾಖಲೆ ಬರೆದ ವಿರೂಷ್ಕಾ ಗುಡ್‌ನ್ಯೂಸ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts